For the best experience, open
https://m.hosakannada.com
on your mobile browser.
Advertisement

IBPS Recruitment 2024: 9995 ಬ್ಯಾಂಕಿಂಗ್‌ ಹುದ್ದೆಗಳು; ಕ್ಲರ್ಕ್‌, ಆಫೀಸರ್ಸ್‌ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

IBPS Recruitment 2024: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಶ್ರೇಣಿಯ ಬ್ಯಾಂಕ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ.
12:24 PM Jun 07, 2024 IST | ಕಾವ್ಯ ವಾಣಿ
UpdateAt: 12:24 PM Jun 07, 2024 IST
ibps recruitment 2024  9995 ಬ್ಯಾಂಕಿಂಗ್‌ ಹುದ್ದೆಗಳು  ಕ್ಲರ್ಕ್‌  ಆಫೀಸರ್ಸ್‌ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

IBPS Recruitment 2024: ಬ್ಯಾಂಕ್‌ ಹುದ್ದೆಗಳಲ್ಲಿ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಒಂದಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಶ್ರೇಣಿಯ ಬ್ಯಾಂಕ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್‌), ಆಫೀಸರ್ ಸ್ಕೇಲ್ I, ಆಫೀಸರ್ ಸ್ಕೇಲ್ II, ಆಫೀಸರ್ ಸ್ಕೇಲ್ III ಹುದ್ದೆಗಳಿವೆ.

Advertisement

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭ ದಿನಾಂಕ 07-06-2024
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ 27-06-2024
ಪರೀಕ್ಷೆ ಪೂರ್ವಭಾವಿ ತರಬೇತಿ ದಿನಾಂಕ ಜುಲೈ 22 -27, 2024
ಪೂರ್ವಭಾವಿ ಪರೀಕ್ಷೆ ದಿನಾಂಕ ಆಗಸ್ಟ್‌ 2024
ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ಫಲಿತಾಂಶ ಆಗಸ್ಟ್‌ / ಸೆಪ್ಟೆಂಬರ್, 2024
ಮುಖ್ಯ ಪರೀಕ್ಷೆ ದಿನಾಂಕ ಸೆಪ್ಟೆಂಬರ್ / ಅಕ್ಟೋಬರ್ 2024
ಮುಖ್ಯ ಪರೀಕ್ಷೆ ಫಲಿತಾಂಶ ಅಕ್ಟೋಬರ್ 2024
ಸಂದರ್ಶನ ದಿನಾಂಕ (ಆಫೀಸರ್ ಸ್ಕೇಲ್‌ I, II, III) ನವೆಂಬರ್ 2024
ತಾತ್ಕಾಲಿಕ ಪಟ್ಟಿ ಬಿಡುಗಡೆ ದಿನಾಂಕ ಜನವರಿ 2024.

ಐಬಿಪಿಎಸ್‌ ಆರ್‌ಆರ್‌ಬಿ ಬ್ಯಾಂಕ್‌ ಹುದ್ದೆಗಳ ವಿವರ (ಹುದ್ದೆ ಹೆಸರು / ಹುದ್ದೆಗಳ ಸಂಖ್ಯೆ):
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್‌) : 5585

Advertisement

ಆಫೀಸರ್ ಸ್ಕೇಲ್ I : 3499

ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) : 70

ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) : 11

ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) : 21

ಆಫೀಸರ್ ಸ್ಕೇಲ್ II (ಕಾನೂನು): 30

ಆಫೀಸರ್ ಸ್ಕೇಲ್ II (ಸಿಎ ): 60

ಆಫೀಸರ್ ಸ್ಕೇಲ್ II (ಐಟಿ): 94

ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ): 496

ಆಫೀಸರ್ ಸ್ಕೇಲ್ III : 129

ಹುದ್ದೆವಾರು ವಿದ್ಯಾರ್ಹತೆ ವಿವರ:
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್‌) : ಪದವಿ
ಆಫೀಸರ್ ಸ್ಕೇಲ್ I (AM) : ಪದವಿ
ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) : ಅಗ್ರಿಕಲ್ಚರ್ / ಹಾರ್ಟಿಕಲ್ಚರ್ / ಡೈರಿ / ಅನಿಮಲ್ / ವೆಟರಿನರಿ ಸೈನ್ಸ್‌ / ಇಂಜಿನಿಯರಿಂಗ್ / ಜತೆಗೆ 2 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) : ಎಂಬಿಎ ಮಾರ್ಕೆಟಿಂಗ್ ಜತೆಗೆ 1 ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) : ಸಿಎ ಅಥವಾ ಎಂಬಿಎ ಹಣಕಾಸು ಜತೆಗೆ ಒಂದು ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಕಾನೂನು) : ಕಾನೂನು ಪದವಿ ಜತೆಗೆ ಎರಡು ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಸಿಎ ) : ಸಿಎ ಪಾಸ್‌ ಜತೆಗೆ ಒಂದು ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಐಟಿ) : ಇಸಿಇ / ಸಿಎಸ್‌ / ಐಟಿ ಜತೆಗೆ ಒಂದು ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ) : ಪದವಿ ಜತೆಗೆ ಎರಡು ವರ್ಷ ಕಾರ್ಯಾನುಭವ.
ಆಫೀಸರ್ ಸ್ಕೇಲ್ III : ಪದವಿ ಜತೆಗೆ 3 ವರ್ಷ ಕಾರ್ಯಾನುಭವ.

ವಯಸ್ಸಿನ ಅರ್ಹತೆಗಳು
ಆಫೀಸರ್ ಸ್ಕೇಲ್ - 3 : ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್‌ - 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅಪ್ಲಿಕೇಶನ್‌ ಶುಲ್ಕ ವಿವರ:
ಆಫೀಸರ್ (ಸ್ಕೇಲ್‌ I, II, III) ಹಾಗೂ ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್) ಹುದ್ದೆಗಳಿಗೆ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175. ಇತರೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ Rs.850.

ಈ ಮೇಲಿನ ಉದ್ಯೋಗ ಪೂರ್ಣಾವಧಿ ಆಗಿದ್ದು, ಉದ್ಯೋಗವು ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗ ಆಗಿರುತ್ತದೆ. ಮುಖ್ಯವಾಗಿ ಪದವಿ / ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮುಗಿಸಿರಬೇಕು.

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Advertisement
Advertisement
Advertisement