ನನಗೂ 'ಆ' ಅಭ್ಯಾಸವಿತ್ತು, ಆದ್ರೆ... ವೇದಿಕೆಯಲ್ಲೇ ತಮ್ಮ ಯೌವ್ವನದ ಗಟ್ಟು ರಟ್ಟು ಮಾಡಿದ ಸಿದ್ದರಾಮಯ್ಯ !!
ಸಿಎಂ ಸಿದ್ದರಾಮಯ್ಯನವರನ್ನು ಆಡಳಿತ ವೈಖರಿಯಲ್ಲಿ ಮೀರಿಸುವವರು ಯಾರೂ ಇಲ್ಲ. ಮಾತು, ಚರ್ಚೆಗೆ ನಿಂತರಂತೂ ಎದುರಾಳಿಯ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕೆ ಸದನದಲ್ಲಿ ಅವರು ಅಬ್ಬರಿಸು ಮಾತುಗಳೇ ಸಾಕ್ಷಿ. ಯಾವುದೇ ವಿಚಾರವಾಗಲಿ, ಸಿದ್ದುಗೆ ಅದು ಮುಣಿಯುತ್ತದೆ. ಇಷ್ಟೆಲ್ಲಾ ಪ್ರಬುದ್ಧರಾದ ಸಿದ್ದರಾಮಯ್ಯ ಕೆಲವೊಮ್ಮೆ ತಮ್ಮ ಹಳೆಯ ನೆನಪುಗಳನ್ನು, ತಾವು ಮಾಡಿದ ತಪ್ಪುಗಳನ್ನು ಕೂಡ ನೆನೆಯುತ್ತಾರೆ. ಇದಕ್ಕೆಲ್ಲಾ ಅವರು ಹಿಂದು ಮುಂದು ನೋಡುವುದಿಲ್ಲ. ಹೇಳಬೇಕು ಅನಿಸಿದ್ದನ್ನು ನೇರವಾಗಿ ಹೇಳಿತ್ತಾರೆ. ಅಂತೆಯೇ ಇದೀಗ ಅವರು ತಮ್ಮ ಹಳೆಯ ಯವ್ವನದ ದಿನಗಳನ್ನು ನೆನೆದಿದ್ದಾರೆ.
ಹೌದು, ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು 'ಹಿಂದೆ ತಮಗೂ ಸಿಗರೇಟ್(Cigarette) ಸೇದುವ ಅಭ್ಯಾಸವಿತ್ತು. ನಾನು ಸಿಗರೇಟ್ ಸೇದುತ್ತಿದ್ದೆ. ಆದರೆ ಆಯಸ್ಸು ಕಡಿಮೆ ಆಗುತ್ತೆ ಅಂತ ಸಿಗರೇಟ್ ಸೆದೋದು ಬಿಟ್ಟೆ. ಆದರೂ ಇದರಿಂದ ನಾನು ಆಂಜಿಯೋಪ್ಲಾಸ್ಟಿ ಒಳಗಾಗಿದ್ದೆನು ಎಂದು' ವೇದಿಕೆಯಲ್ಲೇ ಗುಟ್ಟು ರಟ್ಟು ಮಾಡಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮದೇ ಜೀವನದ ಘಟನೆ ಹೇಳಿ ಜನರಿಗೆ ಜಾಗೃತಿ ಮೂಡಿಸಿದ್ದಾರೆ.
ಹೀಗೆ ತಮ್ಮ ಹಳೆಯ ಘಟನೆಯೊಂದನ್ನು ನೆನೆಸಿಕೊಂಡ ಅವರು 1987 ರಲ್ಲಿ ಸಿಗರೇಟ್ ಬಿಟ್ಟೆ. ಸಿಗರೇಟ್ ಸೇದಿದ್ದರಿಂದ ನನಗೆ ಹಾರ್ಟ್ ಪ್ರಾಬ್ಲಂ ಶುರುವಾಯ್ತು. 2000 ರಲ್ಲಿ ಆಂಜಿಯೋಪ್ಲ್ಯಾಸ್ಟಿ (Angioplasty) ಮಾಡಿಸಿಕೊಂಡೆ. ಹಾರ್ಟ್ ಸಮಸ್ಯೆ ಜೊತೆಗೆ ಡಯಾಬಿಟಿಕ್ ಕೂಡಾ ಸೇರಿಕೊಂಡಿದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿ ಬದಲಾವಣೆ ಮಾಡಿಕೊಂಡರೇ ಅನೇಕ ರೋಗ ಕಂಟ್ರೋಲ್ ಆಗುತ್ತದೆ ಅಂತ ಜನರಿಗೆ ಸಿಎಂ ಸಲಹೆ ಕೊಟ್ಟರು.