ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Husband -wife Relation: ಮಗುವಾದ ಕೂಡಲೇ ದಂಪತಿಗಳ ಸಂಬಂಧ ಹಾಳಾಗುತ್ತಾ?! ಹಾಗೇನಾದ್ರೂ ಆದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು

03:34 PM Dec 30, 2023 IST | ಅಶ್ವಿನಿ ಹೆಬ್ಬಾರ್
UpdateAt: 03:34 PM Dec 30, 2023 IST
Advertisement

Husband -wife Relation: ಗಂಡ ಹೆಂಡತಿಯ ಮುನಿಸು ಉಂಡು ಮಲಗುವ ತನಕ ಎಂಬ ಮಾತು ಹೆಚ್ಚು ಪ್ರಚಲಿತ. ಪತಿ (Husband)ಪತ್ನಿಯರ (Wife)ನಡುವಿನ ಬಾಂಧವ್ಯ ಅತ್ಯಂತ ಪವಿತ್ರವಾದದ್ದು, ಹೀಗಾಗಿ, ಈ ಬಾಂಧವ್ಯವನ್ನು ಉಳಿಸಿಕೊಳ್ಳಲು ಇಬ್ಬರ ನಡುವೆ ಹೊಂದಾಣಿಕೆ (Mutual Understanding)ಅತ್ಯಗತ್ಯ. ಪತ್ನಿಯು ತಮ್ಮ ಸಂಗಾತಿಯ ಅಗತ್ಯಗಳನ್ನು ಪೂರೈಸದೆ ಇದ್ದಲ್ಲಿ ಜೀವನದಲ್ಲಿ ಸಂತೋಷ(Happy)ಸಿಗದು. ಪತಿ ಪತ್ನಿಯರ ನಡುವೆ ಪ್ರೀತಿ, ಸೌಹಾರ್ದತೆಯಿರಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮದುವೆಯ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡುವುದು ಸಹಜ.

Advertisement

 

ಮದುವೆಯಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಮೂಡಿದ್ದರೆ ಅದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಬೇಕಾದಷ್ಟು ಸಮಯ ನೀಡದೆ ಇರುವುದಾಗಿರಬಹುದು. ಹೆಣ್ಣೆಂದರೆ ದೈವಿಕ ಶಕ್ತಿಯ ಪ್ರತಿರೂಪ ಎನ್ನುವ ನಂಬಿಕೆಯಿದೆ. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಅಮ್ಮ ಎಂದು ಕೇಳಿಸಿಕೊಳ್ಳುವುದೇ ವಿಶೇಷ. ತನ್ನೆಲ್ಲ ನೋವನ್ನು ಮರೆಸುವ ಅಪೂರ್ವ ಶಕ್ತಿ ಜಗತ್ತನ್ನೇ ಕಾಣದ ಪುಟ್ಟ ಕಂದಮ್ಮನಿಗೆ ಇರುತ್ತದೆ. ಹೀಗಾಗಿ, ಮಗುವಿನ ಆರೈಕೆಯಲ್ಲಿ ಹೆಂಡತಿ ತನ್ನ ಸರ್ವಸ್ವವನ್ನೇ ಕಳೆಯುವ ಹಿನ್ನೆಲೆ ಸಹಜವಾಗಿ ಪತಿ ನಿರ್ಲಕ್ಷಕ್ಕೆ ಒಳಗಾಗುತ್ತಾನೆ.

Advertisement

 

ಪ್ರತಿಯೊಂದು ವಿಷಯದಲ್ಲೂ ಪತಿ ಹೋಲಿಕೆ ಮಾಡುವುದನ್ನು ಕಲಿಯಬಹುದು. ಮಗುವಿನ ಕಡೆಗೆ ಹೆಚ್ಚು ಲಕ್ಷ್ಯ ನೀಡಲು ಆಗದೇ ಪತಿಯ ಯೋಗಕ್ಷೇಮ ವಿಚಾರಿಸಲು ಆಗದೇ ಗೊಂದಲ ಹೆಚ್ಚಾಗಿ ಜಗಳಗಳು ಹೆಚ್ಚಾಗುತ್ತದೆ. ಇದಕ್ಕಾಗಿ ಪರಸ್ಪರ ಒಬ್ಬರಿಗೊಬ್ಬರು ಸಮಯ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೆಲಸದಿಂದ ಮನೆಗೆ ಮರಳಿದ ಕೂಡಲೇ ಇಲ್ಲವೇ ರಾತ್ರಿ ಮಲಗುವ ಮುನ್ನ ಆ ದಿನದ ಆಗುಹೋಗುಗಳ ತಪ್ಪು ಸರಿಗಳ ಬಗ್ಗೆ ಚರ್ಚೆ ಮಾಡಿ. ಸಮಸ್ಯೆಗಳಿದ್ದರೆ ಅದನ್ನು ಒಪ್ಪಿಕೊಂಡು ಬಗೆಹರಿಸುವ ಪ್ರಯತ್ನ ಕಂಡುಕೊಳ್ಳಿ.

Advertisement
Advertisement