For the best experience, open
https://m.hosakannada.com
on your mobile browser.
Advertisement

HSRP Number Plate: HSRP ನಂಬರ್ ಪ್ಲೇಟ್ ಅಳವಡಿಕೆ ದಂಡ ತಪ್ಪಿಸಲು ಈ ರೀತಿ ಮಾಡಿ!

HSRP Number Plate: ಒಂದು ವೇಳೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವಲ್ಲಿ ತಡವಾದಲ್ಲಿ ದಂಡದಿಂದ ನೀವು ಬಚಾವ್ ಆಗಬಹುದಾಗಿದೆ. ಹೇಗೆಂದು ಇಲ್ಲಿ ತಿಳಿಯಿರಿ.
12:34 PM Jun 08, 2024 IST | ಕಾವ್ಯ ವಾಣಿ
UpdateAt: 12:36 PM Jun 08, 2024 IST
hsrp number plate  hsrp ನಂಬರ್ ಪ್ಲೇಟ್ ಅಳವಡಿಕೆ ದಂಡ ತಪ್ಪಿಸಲು ಈ ರೀತಿ ಮಾಡಿ
Advertisement

HSRP Number Plate: ವಾಹನಗಳ ಸುರಕ್ಷತೆಗಾಗಿ ಕರ್ನಾಟಕ ಸಾರಿಗೆ ಇಲಾಖೆಯ ಎಲ್ಲ ವಾಹನಗಳಿಗೂ HSRP ನಂಬರ್ ಪ್ಲೇಟ್ (High Security Registration Number Plate) ಕಡ್ಡಾಯ ಮಾಡಲಾಗಿದೆ. ಮುಖ್ಯವಾಗಿ ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಜೂನ್ 12 ಕೊನೆಯ ದಿನಾಂಕವಾಗಿದ್ದು, ಅದರ ಒಳಗೆ ವಾಹನಗಳು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಿಕೊಳ್ಳದೇ ಇದ್ದಲ್ಲಿ ಪೊಲೀಸರು 2000 ದಂಡ ವಿಧಿಸುತ್ತಾರೆ. ಆದರೆ ಒಂದು ವೇಳೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವಲ್ಲಿ ತಡವಾದಲ್ಲಿ ದಂಡದಿಂದ ನೀವು ಬಚಾವ್ ಆಗಬಹುದಾಗಿದೆ. ಹೇಗೆಂದು ಇಲ್ಲಿ ತಿಳಿಯಿರಿ.

Advertisement

ಸರಕಾರಿ ಬಸ್‌ ಪ್ರಯಾಣಿಕರಿಗೆ ಶಾಕಿಂಗ್‌ ನ್ಯೂಸ್‌; ಶೀಘ್ರದಲ್ಲೇ ಬಸ್‌ ಪ್ರಯಾಣ ದರ ಏರಿಕೆ

ಒಂದು ವೇಳೆ 2019 ಎಪ್ರಿಲ್ 1 ಕ್ಕಿಂತ ಹಿಂದಿನ ವಾಹನಗಳಾದ ಹಳೆಯ ಎಲ್ಲಾ ವಾಹನಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ‍್ಯಾಕ್ಟರ್ ಇತ್ಯಾದಿ ವಾಹನ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೇ ಇದ್ದಲ್ಲಿ ಪೊಲೀಸರು 2000 ದಂಡ ವಿಧಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಇದೀಗ ನೀವು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಸಿದ್ರೆ ಅದರ ರಶೀದಿಯನ್ನು ಪೊಲೀಸರಿಗೆ ತೋರಿಸಿದ್ರೆ ನೀವು ದಂಡದಿಂದ ಬಚಾವ್ ಆಗಬಹುದಾಗಿದೆ. ಹೌದು, ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್ ಬರುವುದು ತಡವಾದರೆ ನೋಂದಣಿ ಮಾಡಿಸಿದ ರಶೀದಿಯನ್ನು ತೋರಿಸಿದರೆ ನೀವು ದಂಡದಿಂದ ರಿಯಾಯಿತಿ ಪಡೆಯಬಹುದು.

Advertisement

Udupi Pejavara Shree: ಅಯೋಧ್ಯೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣಲು ಇದೇ ಕಾರಣ-ಶಾಕಿಂಗ್‌ ಮಾಹಿತಿ ಬಿಚ್ಚಿಟ್ಟ ಪೇಜಾವರಶ್ರೀ

Advertisement
Advertisement
Advertisement