ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chandan-Niveditha Gowda: ಚಂದನ್‌ ಶೆಟ್ಟಿ ವಿಚ್ಛೇದಿತ ಪತ್ನಿ ನಿವೇದಿತಾಗೆ ಎಷ್ಟು ಜೀವನಾಂಶ ಕೊಡುತ್ತಾರೆ?

Chandan-Niveditha Gowda: ನಟಿ ನಿವೇದಿತಾ ಗೌಡ ಅವರು ಚಂದನ್‌ ಅವರಿಂದ ಯಾವುದೇ ವಿಧವಾದ ಜೀವನಾಂಶದ ಬೇಡಿಕೆಯನ್ನು ಇಟ್ಟಿಲ್ಲ ಎಂದು ನಟಿ ನಿವೇದಿತಾ ಗೌಡ ಅವರ ವಕೀಲೆ ಅನಿತಾ ಹೇಳಿದ್ದಾರೆ.
04:13 PM Jun 08, 2024 IST | ಸುದರ್ಶನ್
UpdateAt: 04:16 PM Jun 08, 2024 IST
Advertisement

Chandan-Niveditha Gowda: ನಿನ್ನೆಯಿಂದ ಭಾರೀ ಸುದ್ದಿ ಮಾಡುತ್ತಿರುವ ಒಂದು ವಿಷಯವೇನೆಂದರೆ ಅದು ಚಂದನ್‌-ನಿವೇದಿತಾ ಡಿವೋರ್ಸ್‌ ವಿಷಯಕ್ಕೆ ಸಂಬಂಧಪಟ್ಟಿದ್ದು. ತೆರೆಮೇಲೆ ಕ್ಯೂಟ್‌ ಕ್ಯೂಟ್‌ ಆಗಿ ವರ್ತಿಸಿ ತಮ್ಮ ಅಭಿಮಾನಿಗಳಿಗೆ ಮಾದರಿ ಜೋಡಿ ಎಂದು ಬಿಂಬಿಸಿದ ಈ ಇವರು, ಇದೀಗ ದಿಢೀರನೆ ತಾವು ವಿಚ್ಛೇದನ ನೀಡುವುದಾಗಿ ಹೇಳಿ ಭಾರೀ ಕೋಲಾಹಲ ಎಬ್ಬಿಸಿತ್ತು.

Advertisement

ಪ್ರಜ್ವಲ್‌ ರೇವಣ್ಣ ಗರ್ಲ್‌ಫ್ರೆಂಡ್‌ಗೆ ಎಸ್‌ಐಟಿ ನೋಟಿಸ್‌

ಬಿಗ್‌ಬಾಸ್‌ ಮನೆಯಲ್ಲಿ ಪರಿಚಯಗೊಂಡ ಇವರಿಬ್ಬರು ಅಲ್ಲಿಂದ ಹೊರ ಬಂದ ಮೇಲೆ ಪ್ರೀತಿ ಎಂದು ಹೇಳಿ ಹಿರಿಯರ ಒಪ್ಪಿಗೆ ಪಡೆದು 2020 ರಲ್ಲಿ ಮದುವೆಯಾದರು. ಅನಂತರ ನಿವೇದಿತಾ ತಮ್ಮ ರೀಲ್ಸ್‌, ಗಿಚ್ಚಿಗಿಲಿ ಶೋ ಮೂಲಕ ಪ್ರಖ್ಯಾತರಾದರು. ಚಂದನ್‌ ರ್ಯಾಪ್‌ ಸಂಗೀತ, ಸಿನಿಮಾಗಳಿಗೆ ಸಂಗೀತ, ನಟನಾಗಿ ಮಿಂಚೋಕೆ ಶುರು ಮಾಡಿದರು. ಇದೀಗ ಇವರಿಬ್ಬರ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

Advertisement

ಶಾಂತಿನಗರ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಳೆದ ಆರು ತಿಂಗಳಿನಿಂದಲೂ ಪತಿ ಪತ್ನಿ ರೀತಿ ಸಹಬಾಳ್ವೆ ನಡೆಸದ ಕಾರಣ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿದೆ.

ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಪತಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಬೇಕು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇಲ್ಲಿ ಈಗ ಬಹಳ ಕುತೂಹಲ ಮೂಡಿಸಿದ ವಿಷಯವೆಂದರೆ ಚಂದನ್‌ ನಿವೇದಿತಾಗೆ ಎಷ್ಟು ಜೀವನಾಂಶ ನೀಡುತ್ತಾರೆಂದು. ಆದರೆ ನಟಿ ನಿವೇದಿತಾ ಗೌಡ ಅವರು ಚಂದನ್‌ ಅವರಿಂದ ಯಾವುದೇ ವಿಧವಾದ ಜೀವನಾಂಶದ ಬೇಡಿಕೆಯನ್ನು ಇಟ್ಟಿಲ್ಲ ಎಂದು. ಈ ವಿಷಯವನ್ನು ನಟಿ ನಿವೇದಿತಾ ಗೌಡ ಅವರ ವಕೀಲೆ ಅನಿತಾ ಹೇಳಿದ್ದಾರೆ.

ಇಬ್ಬರದ್ದೂ ಪರಸ್ಪರ ಒಪ್ಪಿಗೆಯ ವಿಚ್ಛೇದನ ಆಗಿರುವುದರಿಂದ ನಿವೇದಿತಾ ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ. ಇಬ್ಬರೂ ದುಡಿಯುತ್ತಿದ್ದು, ಹಾಗಾಗಿ ಹಣದ ಅವಶ್ಯಕತೆ ಇಬ್ಬರಿಗೂ ಇಲ್ಲ ಎಂದು ವಕೀಲೆ ಅನಿತಾ ಹೇಳಿದ್ದಾರೆ.

Bank Services: HDFC ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಎರಡು ದಿನ ಹಲವು ಸೇವೆಗಳು ಲಭ್ಯವಿಲ್ಲ!

Advertisement
Advertisement