For the best experience, open
https://m.hosakannada.com
on your mobile browser.
Advertisement

P M Modi: ದೇಶದ ಪ್ರಧಾನ ಮಂತ್ರಿಗಳನ್ನು ಜನ ಸಾಮಾನ್ಯರು ಸಂಪರ್ಕಿಸುವುದು ಹೇಗೆ..? ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಲು ಇಲ್ಲಿದೆ ಮಾಹಿತಿ

P M Modi: ಪ್ರಧಾನ ಮಂತ್ರಿಗಳು ಒಂದು ದೇಶವನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರಧಾನಿ ದೇಶದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಿರಬೇಕಾಗುತ್ತದೆ.
02:05 PM Jul 31, 2024 IST | ಸುದರ್ಶನ್
UpdateAt: 02:05 PM Jul 31, 2024 IST
p m modi  ದೇಶದ  ಪ್ರಧಾನ ಮಂತ್ರಿಗಳನ್ನು ಜನ ಸಾಮಾನ್ಯರು ಸಂಪರ್ಕಿಸುವುದು ಹೇಗೆ    ಪ್ರಧಾನಿ  ಕಾರ್ಯಾಲಯವನ್ನು ಸಂಪರ್ಕಿಸಲು ಇಲ್ಲಿದೆ ಮಾಹಿತಿ
Advertisement

P M Modi: ಪ್ರಧಾನ ಮಂತ್ರಿಗಳು ಒಂದು ದೇಶವನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರಧಾನಿ ದೇಶದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಿರಬೇಕಾಗುತ್ತದೆ. ಪ್ರಜಾ ಸೇವೆಗೆ ಅಂಕಿತವಾದ ಮೇಲೆ ಹಗಲು ರಾತ್ರಿ ಎನ್ನದೇ ದುಡಿಯಬೇಕಾಗುತ್ತದೆ. ಅಂದರೆ ಜನರಿಗಾಗಿ ತೆರೆದಿರಬೇಕಾಗುತ್ತದೆ. ಅಂತೆಯೇ ಇದೀಗ ಮೋದಿ(PM Modi) ಅವರು ಪ್ರಧಾನಿ ಆದ ಬಳಿಕ ಇದು ಹೆಚ್ಚು ರೀತಿಯಲ್ಲಿ ತೆರೆದುಕೊಂಡಿದೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿದಾಗ ಮೋದಿಗಳು ಪ್ರತಿಕ್ರಿಯಿಸಿ, ಬಗೆಹರಿಸಿದ ಹಲವು ಪ್ರಸಂಗಗಳು ಇವೆ. ಹೀಗಾಗಿ ಜನರು/ಸಾರ್ವಜನಿಕರು ಮೋದಿಯ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಹಾಗಿದ್ರೆ ನಮ್ಮ ಪ್ರಧಾನಿಯವರನ್ನು ಭೇಟಿ ಮಾಡೋದು/ ಸಂಪರ್ಕಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

Advertisement

ಮೋದಿ ಸಂಪರ್ಕ ಹೇಗೆ?
ಪ್ರಧಾನಿಯವರನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿವೆ. ಪತ್ರ, ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ ನಾಗರೀಕನೂ ಪ್ರಧಾನ ಮಂತ್ರಿಯವರನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ:

1. ಪತ್ರ: ಪತ್ರದ ಮೂಲಕ ಪ್ರಧಾನ ಮಂತ್ರಿಯವರನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸ ಬಯಸುವವರು ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ನಿವಾಸದ ವಿಳಾಸಕ್ಕೆ ಪತ್ರ ಬರೆಯಬಹುದಾಗಿದೆ. ಅಲ್ಲಿನ ಅಧಿಕಾರಿಗಳು ಪತ್ರದ ಪ್ರಾಮುಖ್ಯತೆಗೆ ಅನುಗುಣವಾಗಿ ಅವುಗಳನ್ನು ವಿಲೇವಾರಿ ಮಾಡುತ್ತಾರೆ. ತೀರಾ ಪ್ರಮುಖ ಮತ್ತು ವಿಶೇಷ ಪತ್ರವಾಗಿದ್ದರೆ ಖುದ್ದು ಪ್ರಧಾನ ಮಂತ್ರಿಗಳಿಗೆ ತಲುಪಿಸುತ್ತಾರೆ. ಇಲ್ಲವಾದರೇ ತಾವೇ ಪತ್ರದಲ್ಲಿ ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸುತ್ತಾರೆ.
ಪ್ರಧಾನಿ ಕಚೇರಿ ವಿಳಾಸ:
ಪ್ರಧಾನಿ ಕಾರ್ಯಾಲಯ, ಸೌತ್ ಬ್ಲಾಕ್
ರೈಸೀನಾ ಹಿಲ್, ನವದೆಹಲಿ -110011, ಭಾರತ

Advertisement

2. ದೂರವಾಣಿ: ಪಿಎಂಒ ನವದೆಹಲಿಯ ಸೌತ್ ಬ್ಲಾಕ್ ನಲ್ಲಿದೆ -110011. ನೇರ ಸಂವಹನಕ್ಕಾಗಿ, ನೀವು 011-23386447 ಗೆ ಫೋನ್ ಮೂಲಕ ಸಂಪರ್ಕಿಸಬಹುದು. ಈ ಸಂಖ್ಯೆಯು ನಿಮ್ಮನ್ನು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಸಂವಹನಗಳನ್ನು ನಿರ್ವಹಿಸುವ ಜಂಟಿ ಕಾರ್ಯದರ್ಶಿ ಶ್ರೀ ರೋಹಿತ್ ಯಾದವ್ ಅವರೊಂದಿಗೆ ಸಂಪರ್ಕಿಸುತ್ತದೆ.

3. ವೆಬ್ ಸೈಟ್: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಮತ್ತು ವೈಯುಕ್ತಿಕ ವೆಬ್ ತಾಣಗಳೂ ಮುಖಾಂತರವಾಗಿಯೂ ಸಾರ್ವಜನಿಕರಿಗೆ ಲಭ್ಯವಿದೆ. ಸರ್ಕಾರೀ ಅಧಿಕೃತ ವೆಬ್ ತಾಣ: http://pmindia.gov.in/en/interact-with-honble-pm/ ಮತ್ತು ವೈಯುಕ್ತಿ ವೆಬ್ ತಾಣ www.narendramodi.inಕ್ಕೆ ಭೇಟಿ ನೀಡುವ ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ ನೇರವಾಗಿ ಸರ್ಕಾರದ ವೆಬ್ ತಾಣ: http://mygov.nic.in/signup ಕ್ಕೆ ಲಾಗಿನ್ ಆಗುವ ಮೂಲಕ ಅಲ್ಲಿ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.

4. ಇ-ಮೇಲ್: ಇನ್ನು ಇ-ಮೇಲ್ ಮೂಲಕ ಪ್ರಧಾನಿವರನ್ನು ಸಂಪರ್ಕಿಸಿ, ದೂರು ಹೇಳ ಬಯಸುವವರು ಅವರ ಜಿಮೇಲ್ ಖಾತೆ: narendramodi1234@gmail.com ಮೂಲಕ ಸಂಪರ್ಕಿಸಬಹುದಾಗಿದೆ.

Wayanad Tragedy: ವಯನಾಡು ದುರಂತ : ಕರ್ನಾಕಟದ ನಾಲ್ವರು ಸಾವನ್ನಪ್ಪಿರುವ ಶಂಕೆ : ಬೆಂಗಳೂರಿನ ಪ್ರವಾಸಿಗರೂ ಕಣ್ಣರೆ : ಕನ್ನಡಿಗ ಯುವಕರ ತಂಡದಿಂದ ರಕ್ಷಣಾ ಕಾರ್ಯ

Advertisement
Advertisement
Advertisement