For the best experience, open
https://m.hosakannada.com
on your mobile browser.
Advertisement

Honeytrap: ವಿದೇಶದಲ್ಲಿ ಉದ್ಯೋಗ ಆಫರ್ ನೀಡಿ 3 ಸಾವಿರ ಭಾರತೀಯರ ಸೈಲೆಂಟ್ ಕಿಡ್ನಾಪ್! ಆಮೇಲೆ ಏನಾಯ್ತು ನೀವೇ ನೋಡಿ!

Honeytrap: ಪ್ರಸ್ತುತ ಒಂದು ಒಳ್ಳೆಯ ಉದ್ಯೋಗ ಪಡೆಯಲು ಹರಾಸಾಹಸ ಪಡಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗ ವಿದೇಶದಲ್ಲಿ ಕೆಲಸದ ಆಫರ್ ಸಿಕ್ಕಿದ 3000 ಭಾರತೀಯರಿಗೆ ಏನಾಯಿತು ಅಂತ ನೀವೇ ನೋಡಿ.
10:26 AM Jul 10, 2024 IST | ಕಾವ್ಯ ವಾಣಿ
UpdateAt: 10:26 AM Jul 10, 2024 IST
honeytrap  ವಿದೇಶದಲ್ಲಿ ಉದ್ಯೋಗ ಆಫರ್ ನೀಡಿ 3 ಸಾವಿರ ಭಾರತೀಯರ ಸೈಲೆಂಟ್ ಕಿಡ್ನಾಪ್  ಆಮೇಲೆ ಏನಾಯ್ತು ನೀವೇ ನೋಡಿ
Advertisement

Honeytrap: ಪ್ರಸ್ತುತ ಒಂದು ಒಳ್ಳೆಯ ಉದ್ಯೋಗ ಪಡೆಯಲು ಹರಾಸಾಹಸ ಪಡಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗ ವಿದೇಶದಲ್ಲಿ ಕೆಲಸದ ಆಫರ್ ಸಿಕ್ಕಿದ 3000 ಭಾರತೀಯರಿಗೆ ಏನಾಯಿತು ಅಂತ ನೀವೇ ನೋಡಿ.

Advertisement

ಹೌದು, ಚೀನಾದ ಸೈಬರ್ ಕಳ್ಳರು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಮುಂಬೈ ಮೂಲದ ಮಹಿಳೆಯರು ಸೇರಿ ವಿವಿಧ ರಾಜ್ಯಗಳ ಸುಮಾರು 3000 ಭಾರತೀಯರನ್ನು ಉದ್ಯೋಗ ಆಮಿಷವೊಡ್ಡಿ ಭಾರತೀಯರನ್ನು ಸೈಲೆಂಟ್ ಆಗಿ ತಮ್ಮ ಬಲೆಗೆ ಬೀಳಿಸಿ, ಆಮೇಲೆ ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ ಮುಖಾಂತರ ಕರೆದೊಯ್ದಿದ್ದಾರೆ ಹಾಗೂ ಅವರಿಂದ ನಗ್ನ ಕರೆಗಳನ್ನು ಮಾಡಿಸಿ ಜನರನ್ನು ಹನಿ-ಟ್ರ್ಯಾಪ್ (Honeytrap) ಮಾಡಿಸುತ್ತಿದ್ದಾರೆ ಎಂಬ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಈ ಮೋಸದ ಜಾಲದಲ್ಲಿ ಸಿಲುಕಿದ ಸಂತ್ರಸ್ತರಾದ ತೆಲಂಗಾಣ ಮೂಲದ ಸಿವಿಲ್ ಇಂಜಿನಿಯರಿಂಗ್‌ ಪದವೀಧರ ಮುನ್ಷಿ ಪ್ರಕಾಶ್ ಎಂಬುವರು ಈ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಅವರು ಇತ್ತೀಚೆಗೆ ಸರ್ಕಾರದ ಮಧ್ಯಸ್ಥಿಕೆಯಿಂದ ಬಚಾವಾಗಿ ಕಾಂಬೋಡಿಯಾದಿಂದ ತವರಿಗೆ ಮರಳಿದ್ದಾರೆ.

Advertisement

ಮುನ್ಷಿ ಪ್ರಕಾಶ್ ಎಂಬವರು ಹೈದರಾಬಾದ್ ಮೂಲದ ಐಟಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ವಿದೇಶದಲ್ಲಿ ಉದ್ಯೋಗ ಪಡೆಯುವ ಆಸೆಯಿಂದ ಉದ್ಯೋಗ ಸೈಟ್‌ಗಳಲ್ಲಿ ತಮ್ಮ ಪ್ರೊಫೈಲ್ ಅನ್ನು ಪೋಸ್ಟ್ ಮಾಡಿದ್ದರು. ನಂತರ ಅವರ ಪ್ರೊಫೈಲ್‌ ನೋಡಿ, ಕಾಂಬೋಡಿಯಾದಲ್ಲಿ ಏಜೆಂಟ್ ಆಗಿರುವ ವಿಜಯ್ ಎಂಬಾತ ಕರೆ ಮಾಡಿದ್ದ ಹಾಗೂ ಪ್ರಕಾಶ್‌ ಅವರಿಗೆ ಆಸ್ಟ್ರೇಲಿಯಾದಲ್ಲಿ ಕೆಲಸ ನೀಡುವುದಾಗಿ ಹೇಳಿದ್ದ. ಅದಕ್ಕೂ ಮುನ್ನ ಮಲೇಷ್ಯಾಗೆ ಬರುವಂತೆ ಸೂಚಿಸಿದ್ದ.

ಉದ್ಯೋಗದ ಆಸೆಯಿಂದ ಮಲೇಷ್ಯಾಗೆ ಹೋದಾಗ ಅಲ್ಲಿಂದ ಪ್ರಕಾಶ್‌ರನ್ನು ಕಾಂಬೋಡಿಯಾಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರ ಪಾಸ್‌ಪೋರ್ಟ್‌ ವಶಪಡಿಸಿಕೊಂಡು, ತರಬೇತಿಯನ್ನು ನೀಡುವುದಾಗಿ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ತರಬೇತಿಯಲ್ಲಿ 10 ದಿನಗಳ ಕಾಲ ಹುಡುಗಿಯರ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸಲು ಮತ್ತು ಬಳಸಲು ಅವರಿಗೆ ಒತ್ತಾಯ ಮಾಡಲಾಗಿತ್ತು.

ಹೀಗೆಯೇ ಅಲ್ಲಿ ನನ್ನ ರೀತಿ ವಿದೇಶಿ ನೌಕರಿ ಆಸೆಗೆ ಬಲಿಯಾಗಿ ಸಿಲುಕಿರುವ 3000 ಕ್ಕಿಂತಲೂ ಹೆಚ್ಚು ಭಾರತೀಯರಿದ್ದಾರೆ. ಅವರಲ್ಲಿ ಹುಡುಗಿಯರೂ ಇದ್ದಾರೆ. ತರಬೇತಿಯಲ್ಲಿ ಹುಡುಗಿಯರಿಗೆ ನಗ್ನ ಕರೆಗಳನ್ನು ಮಾಡಲು ಒತ್ತಾಯಿಸಲಾಗುತ್ತದೆ. ಈ ನಗ್ನ ಕರೆಗಳನ್ನು ಮಾಡಿಸಿ ಫೋನ್‌ ಕರೆ ಸ್ವೀಕರಿಸಿದವರನ್ನು ಹನಿ ಟ್ರಾಪ್‌ ಮಾಡಿ ದುಡ್ಡು ಕೀಳಲಾಗುತ್ತದೆ ಎಂದು ಮುನ್ಷಿ ಪ್ರಕಾಶ್‌ ವಿವರವಾಗಿ ತಿಳಿಸಿದ್ದಾರೆ.

Gruhajyoti: ಬಾಡಿಗೆದಾರರಿಗೆ ತಟ್ಟಲಿದೆ ಗೃಜಹ್ಯೋತಿ ಸ್ಕೀಮ್‌; ಫ್ರೀ ಆಫರ್‌ ಮುಗಿತಾ? ಕರೆಂಟ್‌ ಬಿಲ್‌ ಕಟ್ಟಲು ರೆಡಿಯಾಗಿ

Advertisement
Advertisement
Advertisement