For the best experience, open
https://m.hosakannada.com
on your mobile browser.
Advertisement

Home Decoration: ಮನೆಯ ಅಲಂಕಾರವೇ ಅದೃಷ್ಟ ತರುತ್ತೆ! ಅದಕ್ಕಾಗಿ ಇಲ್ಲಿದೆ ಸುಲಭ ಮಾರ್ಗ!

Home Decoration: ನಾನಾ ವಿಧಾನಗಳಿಂದ ಮನೆಯಲ್ಲಿ ಅಲಂಕಾರ ಮಾಡಬಹುದು. ಆದರೆ ವಾಸ್ತು ಪ್ರಕಾರ ಮನೆಯ ಅಲಂಕಾರ (Home Decoration) ಮಾಡಿದಲ್ಲಿ ಅದೃಷ್ಟ ನಮ್ಮ ಬಳಿಗೆ ಬರುವಂತೆ ಮಾಡಬಹುದು.
05:23 PM Jun 20, 2024 IST | ಕಾವ್ಯ ವಾಣಿ
UpdateAt: 05:23 PM Jun 20, 2024 IST
home decoration  ಮನೆಯ ಅಲಂಕಾರವೇ ಅದೃಷ್ಟ ತರುತ್ತೆ  ಅದಕ್ಕಾಗಿ ಇಲ್ಲಿದೆ ಸುಲಭ ಮಾರ್ಗ

Home Decoration: ನಾನಾ ವಿಧಾನಗಳಿಂದ ಮನೆಯಲ್ಲಿ ಅಲಂಕಾರ ಮಾಡಬಹುದು. ಆದರೆ ವಾಸ್ತು ಪ್ರಕಾರ ಮನೆಯ ಅಲಂಕಾರ (Home Decoration) ಮಾಡಿದಲ್ಲಿ ಅದೃಷ್ಟ ನಮ್ಮ ಬಳಿಗೆ ಬರುವಂತೆ ಮಾಡಬಹುದು. ಹೌದು, ಜೀವನದಲ್ಲಿ ನಾವು ಹಿಂದುಳಿಯಲು ನಮ್ಮ ಅದೃಷ್ಟ ದೋಷ ಒಂದು ಕಾರಣ ಆಗಿರಲುಬಹುದು. ಅದಕ್ಕಾಗಿ ನೀವು ನಿಮ್ಮ ಮನೆಯನ್ನು ವಾಸ್ತು ರೀತಿ ಅಲಂಕರಿಸಿ.

Advertisement

ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಜಗಳ ; ಒಂದು ಕೊಲೆ, ಇನ್ನೊಂದು ಆತ್ಮಹತ್ಯೆ

7 ಕುದುರೆಯ ಫೋಟೋ:

Advertisement

ವಾಸ್ತು ಪ್ರಕಾರ ಮನೆಯ ಗೋಡೆಯ ಮೇಲೆ 7 ಕುದುರೆಯ ಫೋಟೋವನ್ನ ಹಾಕಿ ಅಲಂಕಾರ ಮಾಡಿದರೆ  ನಿಮ್ಮ ಜೀವನದಲ್ಲಿ ಯಶಸ್ಸು, ಪರಿಶ್ರಮ, ಶಕ್ತಿ, ಪ್ರಗತಿ, ವೇಗ, ಶಾಂತಿ ಮತ್ತು ಸಮೃದ್ಧಿಯನ್ನ ಹೆಚ್ಚಿಸುತ್ತದೆ. ಇದು ಹಣದ ನಿರಂತರ ಪ್ರಗತಿ ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತದೆ. ಈ ಫೋಟೋವನ್ನ ದಕ್ಷಿಣ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು.

ವಿಂಡ್​ ಚೈಮ್:

ಮನೆಯ ಅಲಂಕಾರಿಕ ವಸ್ತುಗಳ ವಿಚಾರದಲ್ಲಿ ವಿಂಡ್ ಚೈಮ್ಸ್ ವಿಶೇಷ ಸ್ಥಾನವನ್ನು ಹೊಂದಿದೆ. ಇದು ತುಂಬಾ ಶಾಂತಗೊಳಿಸುವ ಧ್ವನಿಯನ್ನು ಉತ್ಪಾದಿಸುತ್ತದೆ ಅದು ನಕಾರಾತ್ಮಕ ವೈಬ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇವುಗಳನ್ನ ಹಾಕಲು ಪಶ್ಚಿಮ, ಉತ್ತರ ಮತ್ತು ವಾಯುವ್ಯ ದಿಕ್ಕುಗಳು ಸೂಕ್ತವಾಗಿವೆ.

ಬುದ್ಧನ ಫೋಟೋ ಅಥವಾ ವಿಗ್ರಹ: ಪ್ರಶಾಂತವಾದ ಬುದ್ಧನ ಫೊಟೋ ಅಥವಾ ಪೇಯಿಟಿಂಗ್ ನಿಮ್ಮ ಮನೆಗೆ ಶಾಂತಿಯನ್ನ ತರುತ್ತದೆ. ನಿಜಕ್ಕೂ ಇದು ಆದರ್ಶ ವಾಸ್ತು ಅಲಂಕಾರ ವಸ್ತುವಾಗಿದೆ. ಇದನ್ನ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಎನ್ನಲಾಗುತ್ತದೆ. ವಾಸ್ತು ಪ್ರಕಾರ ಹಾಸಿಗೆಯ ಬಳಿ ಮಾತ್ರ ಇದನ್ನ ಇಡಬಾರದು.

ವಾಸ್ತು ಪ್ರಕಾರ, ನಿಮ್ಮ ಊಟ ಮಾಡುವ ಜಾಗದಲ್ಲಿ ಪೂರ್ವ ಅಥವಾ ಉತ್ತರದ ಗೋಡೆಗಳಲ್ಲಿ ದೊಡ್ಡ ಕನ್ನಡಿಗಳನ್ನು ಇಡುವುದು ಸಂಪತ್ತು, ಅದೃಷ್ಟ ಮತ್ತು ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕನ್ನಡಿಯನ್ನು ನೆಲದಿಂದ 5 ರಿಂದ 6 ಅಡಿ ಎತ್ತರದಲ್ಲಿ ಇಡಬೇಕು.

ಇನ್ನು ವಾಸ್ತು ಪ್ರಕಾರ, ನೀವು ಸರಿಯಾದ ಬಣ್ಣದ ಕರ್ಟನ್​ ಆರಿಸಿದರೆ , ಅದೃಷ್ಟವು ಪ್ರತಿ ದಿಕ್ಕಿನಿಂದ ನಿಮ್ಮ ಮನೆಗೆ ಬರುತ್ತದೆ. ತಿಳಿ ನೀಲಿ, ಹಸಿರು ಮತ್ತು ಆಫ್-ವೈಟ್ ಪರದೆಗಳು ಉತ್ತರ ದಿಕ್ಕಿಗೆ ಉತ್ತಮವಾಗಿದೆ. ತಿಳಿ ಹಸಿರು, ಬಿಳಿ ಮತ್ತು ಹಳದಿ ಪೂರ್ವ ಭಾಗದ ಕಿಟಕಿಗಳಿಗೆ ಹಾಕಬೇಕು.

ವಾಸ್ತು ಪ್ರಕಾರ ನೀವು ಅಲಂಕಾರಕ್ಕೂ ಇಂತಹ ವಸ್ತುಗಳನ್ನು ಉಪಯೋಗಿಸಲು ಯೋಗ್ಯವಲ್ಲ. ಯಾಕೆಂದರೆ ಅವು ದುರದೃಷ್ಟ ತರುತ್ತದೆ ಅವು ಯಾವುದೆಂದರೆ :

ಒಡೆದ ಕನ್ನಡಿಗಳು:

ನಿಮ್ಮ ಹಾಸಿಗೆಯ ಮುಂದೆ ಕನ್ನಡಿ ಇಡದಂತೆ ನೋಡಿಕೊಳ್ಳಬೇಕು. ಅದರಲ್ಲೂ ಒಡೆದ ಕನ್ನಡಿಯನ್ನು ಮನೆಯಲ್ಲಿ ಎಲ್ಲಿಯಾದರೂ ಇಟ್ಟರೆ ಅದು ಏಳು ವರ್ಷಗಳ ಕಾಲ ದುರಾದೃಷ್ಟವನ್ನು ತರುತ್ತದೆ. ಇದರ ಜೊತೆಗೆ ಮುರಿದ ಗಡಿಯಾರ ಅಥವಾ ನಿಂತ ಗಡಿಯಾರವನ್ನು ಮನೆಯಲ್ಲಿ ಇಡಬಾರದು. ಇದರಿಂದ ನಿಮ್ಮ ಕೆಟ್ಟ ಸಮಯ ಆರಂಭವಾಗುತ್ತದೆ ಎನ್ನಲಾಗುತ್ತದೆ.

ತಾಜ್ ಮಹಲ್: ತಾಜ್ ಮಹಲ್ ಅತ್ಯಂತ ಅಮೂಲ್ಯವಾದ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಆದರೆ, ಇದು ವಾಸ್ತವವಾಗಿ ಮರಣ ಮತ್ತು ಕ್ರಿಯಾಶೀಲತೆಯ ಕೊರತೆಯನ್ನು ಸೂಚಿಸುವ ಸಮಾಧಿಯಾಗಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಸಣ್ಣ ಸಣ್ಣ ಪ್ರತಿಮೆಗಳು ಮತ್ತು ವರ್ಣಚಿತ್ರಗಳು ಸೇರಿದಂತೆ ತಾಜ್ ಮಹಲ್ ಅನ್ನು ಪ್ರತಿನಿಧಿಸುವ ಯಾವುದೇ ವಸ್ತು ಇಡುವುದನ್ನು ತಪ್ಪಿಸಿ.

ಯುದ್ಧದ ಫೋಟೋ:

ವಾಸ್ತು ಪ್ರಕಾರ, ನಾವು ಯುದ್ಧದ ಕಥೆಗಳ ಫೋಟೋವನ್ನ ಬಳಸುವುದು ಅಶುಭದ ಸಂಕೇತ ಎನ್ನಲಾಗುತ್ತದೆ. ಇವುಗಳನ್ನ ಬಳಸುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಕುಟುಂಬ ಸದಸ್ಯರ ನಡುವೆ ವಿವಾದವನ್ನು ಉಂಟುಮಾಡುತ್ತದೆ.

Tulsi Puja: ಈ 4 ಜನ ಮಹಿಳೆಯರು ತುಳಸಿ ಪೂಜೆ ಮಾಡಿದರೆ ಆ ಮನೆಗೆ ಮಹಾ ಪಾಪ ಸುತ್ತಿಕೊಳ್ಳುತ್ತೆ!

Advertisement
Advertisement
Advertisement