For the best experience, open
https://m.hosakannada.com
on your mobile browser.
Advertisement

RBI ನಿಂದ ಐತಿಹಾಸಿಕ ಸಾಧನೆ - ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿತು 100 ಟನ್‌ ಚಿನ್ನ !!

RBI: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ ಕಂಡು ಕೇಳರಾಯದ ಐತಿಹಾಸಿಕ ಸಾಧನೆ ಮಾಡಿದ್ದು ಇಂಗ್ಲೆಂಡ್‌ನಿಂದ ಸುಮಾರು 100 ಟನ್ ಚಿನ್ನವನ್ನು ಮರಳಿ ಭಾರತಕ್ಕೆ ತಂದಿದೆ.
01:57 PM Jun 01, 2024 IST | ಸುದರ್ಶನ್
UpdateAt: 02:55 PM Jun 01, 2024 IST
rbi ನಿಂದ ಐತಿಹಾಸಿಕ ಸಾಧನೆ   ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿತು 100 ಟನ್‌ ಚಿನ್ನ

RBI: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ ಕಂಡು ಕೇಳರಾಯದ ಐತಿಹಾಸಿಕ ಸಾಧನೆ ಮಾಡಿದ್ದು ಇಂಗ್ಲೆಂಡ್‌ನಿಂದ (Bank of England) ಸುಮಾರು 100 ಟನ್ ಚಿನ್ನವನ್ನು (Gold) ಮರಳಿ ಭಾರತಕ್ಕೆ (India) ತಂದಿದೆ.

Advertisement

ಇದನ್ನೂ ಓದಿ: Puttur: ಅಕ್ಷಯ್‌ ಕಲ್ಲೇಗ ಹತ್ಯೆ ಪ್ರಕರಣ; ವಿಶೇಷ ಸರಕಾರಿ ಅಭಿಯೋಜಕರಾಗಿ ನ್ಯಾಯವಾಗಿ ಮಹೇಶ್‌ ಕಜೆ ನೇಮಕ

ಹೌದು, RBI ಇಂಗ್ಲೆಂಡ್‌ನಿಂದ (Bank of England) ಸುಮಾರು 100 ಟನ್ ಅಥವಾ 1 ಲಕ್ಷ ಕೆಜಿ ಚಿನ್ನವನ್ನು (Gold) ಮರಳಿ ಭಾರತಕ್ಕೆ (India) ತಂದಿದೆ. 1991ರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್‌ಬಿಐ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು ಎಂದು ಇದೀಗ ವರದಿಯಾಗಿದೆ. ಅಲ್ಲದೆ 2023-24ರ ತನ್ನ ಹಣಕಾಸು ವರದಿಯಲ್ಲಿ ಆರ್‌ಬಿಐ ಈ ವಿವರ ಪ್ರಕಟಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನ ತರಲಾಗುವುದು ಎಂದು ಹೇಳಿದೆ.

Advertisement

ಇದನ್ನೂ ಓದಿ: Exit Poll Results: ಎಕ್ಸಿಟ್ ಪೋಲ್- 2019, 2014 ರಲ್ಲಿ ಏನಾಗಿತ್ತು, ಸಮೀಕ್ಷೆಗಳು ಹೇಳಿದ್ದು ಎಷ್ಟರಮಟ್ಟಿಗೆ ಸತ್ಯವಾಗಿತ್ತು ?

ತಂದದ್ದು ಯಾಕೆ?

ವಿದೇಶದಲ್ಲಿ ಆರ್‌ಬಿಐ 413.8 ಟನ್ ಚಿನ್ನವನ್ನು ಇಟ್ಟಿದೆ. ಜೊತೆಗೆ ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲೂ ಇರಿಸಿದೆ. ಈ ನಡುವೆ ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ಆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಅಲ್ಲದೆ ವಿಶ್ವದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಮತ್ತು ಕರೆನ್ಸಿ ಮೌಲ್ಯದ ಏರಿಳಿತದ ಭೀತಿ ಕೂಡ ಎದುರಾಗಿದೆ. ಈ ಕಾರಣದಿಂದಲೇ ಆರ್‌ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತ್ತು. ಇದೆಲ್ಲದರ ಜೊತೆಗೆ ವಿದೇಶದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ತಂದ ಚಿನ್ನವನ್ನು ಎಲ್ಲಿ ಇಡಲಾಗುತ್ತದೆ?

ತಂದ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ.

ಪ್ಲ್ಯಾನ್‌ ಹೇಗಿತ್ತು?

100 ಟನ್‌ ಚಿನ್ನವನ್ನು ತರಲು ತಿಂಗಳುಗಟ್ಟಲೇ ಪ್ಲ್ಯಾನಿಂಗ್‌ ಮಾಡಿ ಎಲ್ಲಿಯೂ ಈ ವಿಚಾರ ಸೋರಿಕೆ ಆಗದಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯ, ಸರ್ಕಾರದ ಇತರೇ ಇಲಾಖೆಗಳ ಸಂಪೂರ್ಣ ಸಹಕಾರದಿಂದ ವಿಶೇಷ ವಿಮಾನದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ತರಲಾಗಿದೆ. ದೇಶದ ʼಸಾರ್ವಭೌಮ ಆಸ್ತಿʼಯಾಗಿದ್ದ ಕಾರಣ ಈ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.

ಆರ್‌ಬಿಐ ಬಳಿ ಎಷ್ಟು ಚಿನ್ನವಿದೆ?

ಮಾರ್ಚ್ 2023 ರ ಮಾಹಿತಿಯ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. 15 ವರ್ಷಗಳ ಹಿಂದೆ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 200 ಟನ್ ಚಿನ್ನವನ್ನು ಖರೀದಿಸಿತ್ತು.

ಇಂಗ್ಲೆಂಡ್‌ನಲ್ಲಿ ದೇಶಗಳು ಚಿನ್ನ ಇಡೋದು ಯಾಕೆ?

ಈ ಹಿಂದಿನಿಂದಲೂ ಬಹುತೇಕ ದೇಶಗಳು ಯನೈಟೆಡ್ ಕಿಂಗ್‌ಡಮ್‌ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟುಕೊಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಭದ್ರತೆ. ಭಾರೀ ಪ್ರಮಾಣದ ಚಿನ್ನ ಸಂಗ್ರಹಿಸಲು ಸುರಕ್ಷಿತ ವ್ಯವಸ್ಥೆ, ಸಂಗ್ರಹಾಲಯಗಳು ಇಲ್ಲದೇ ಇದ್ದಾಗ ದೇಶಗಳು ಯುಕೆ ಬ್ಯಾಂಕ್‌ನಲ್ಲಿ ಇಡುತ್ತಿವೆ. ಈ ರೀತಿಯಾಗಿ ಚಿನ್ನವನ್ನು ಇರಿಸಿದ್ದಕ್ಕೆ ದೇಶಗಳು ಗೌರವ ಧನ ನೀಡಬೇಕಾಗುತ್ತದೆ.

ಅಂತೆಯೇ 1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ ಆರ್‌ಬಿಐ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್‌ ಸಾಲ ಪಡೆದುಕೊಂಡಿತ್ತು.

Advertisement
Advertisement
Advertisement