Hired person: 'ಬಾಡಿಗೆ ವ್ಯಕ್ತಿ' ಎಂದು ದುಡ್ಡು ಪಡೆದು ಜೊತೆಗೆ ಬಂದು ಲಕ್ಷ ಲಕ್ಷ ಸಂಪಾದಿಸ್ತಾನೆ ಈ ಹುಡುಗ - ಜೊತೆಯಾಗುತ್ತಿದ್ದಂತೆ ಈತ ಮಾಡೋ ಕೆಲಸ ಕೇಳಿದ್ರೆ ಆಗುತ್ತೆ ಶಾಕ್ !!
Hired person: ಬದುಕಲು ನೂರಾರು ದಾರಿಗಳಿವೆ. ಅದರಲ್ಲಂತೂ ಈ ಆಧುನಿಕ ಯುಗದಲ್ಲಿ ಇಡೀ ಪ್ರಪಂಚವೇ ನಮ್ಮ ಕೈಯಲ್ಲಿರುವಾಗ ಏನು ಬೇಕಾದರೂ ಸಾಧಿಸಿ, ಒಳ್ಳೆಯ ದಾರಿ ಹಿಡಿದು ಹೇಗೆ ಬೇಕಾದರೂ ದುಡ್ಡು ಸಂಪಾದಿಸಬಹುದು. ಅಂತೆಯೇ ಇಲ್ಲೊಬ್ಬ 'ಬಾಡಿಗೆ ವ್ಯಕ್ತಿ'(Hired person) ಇದ್ದಾನೆ. ಕೇಳೋಕೆ ವಿಚಿತ್ರ ಅಲ್ವಾ? ಆದರೆ ಈತನು ಹೀಗೆ ಹೇಳಿಕೊಂಡು ದುಡ್ಡು ಸಂಪಾದಿಸುವ ಕೆಲಸದ ಬಗ್ಗೆ ಕೇಳಿದರೆ ನಿಮಗೆ ಶಾಕ್ ಆಗುವುದು ಮಾತ್ರವಲ್ಲ ಖುಷಿ, ಹೆಮ್ಮೆ ಎಲ್ಲದೂ ಆಗುತ್ತದೆ.
ಇದನ್ನೂ ಓದಿ: PM Modi: ಪ್ರಾಣ ಪ್ರತಿಷ್ಠೆ ನೆರವೇರಿಸಿ, ಅಯೋಧ್ಯೆಯಿಂದ ಬಂದ ಕೂಡಲೇ ಪ್ರಧಾನಿ ಮೋದಿಯಿಂದ ಮತ್ತೊಂದು ಮಹತ್ವದ ಘೋಷಣೆ!!
ಹೌದು, ಬಾಡಿಗೆಗೆ ಮನೆಗಳು, ರೂಮ್ ಗಳು, ವಾಹನಗಳು ಅಥವಾ ಇನ್ನಾವುದೇ ವಸ್ತುಗಳು ಸಿಗೋದನ್ನು ನಾವು ನೋಡಿದ್ದೇವೆ. ಆದರೆ ಟೋಕಿಯೊ ನಿವಾಸಿ 39 ವರ್ಷದ ಶೋಜಿ ಮೊರಿಮೊಟೊ (Shoji Morimoto) ತನ್ನನ್ನು ತಾನು ಬಾಡಿಗೆ ವ್ಯಕ್ತಿ ಎಂದು ಹೇಳಿಕೊಂಡಿದ್ದಾನೆ. ಈ ಮೂಲಕ ಅವನು ಬಾಡಿಗೆ ದೊರೆತು ಲಕ್ಷ ಲಕ್ಷ ಸಂಪಾದಿಸುತ್ತಾನೆ.
ಅಂದಹಾಗೆ 2018 ರಲ್ಲಿ ವಿಶಿಷ್ಟ ವ್ಯವಹಾರವನ್ನು ಪ್ರಾರಂಭಿಸಿದರು. ಅವನು ತನ್ನನ್ನು 'ಬಾಡಿಗೆ ವ್ಯಕ್ತಿ' ಎಂದು ಪರಿಚಯಿಸಿಕೊಂಡನು, ಅಂದರೆ, ಖಾಲಿ ಇರುವ ಮತ್ತು ನಿಮಗೆ ಬಾಡಿಗೆಗೆ ಲಭ್ಯವಿರುವ ವ್ಯಕ್ತಿ. ಆದರೆ ಅವರು ಏನನ್ನೂ ಮಾಡಬೇಕಾಗಿಲ್ಲ. ಹಾಗಿದ್ರೆ ಇವನಿಗೆ ದುಡ್ಡು ಯಾಕೆ ಸಿಗುತ್ತೆ ಎಂದು ನೀವು ಅಂದುಕೊಂಡಿರಬಹುದು. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ.
ಈತನನ್ನು ಬಾಡಿಗೆ ಪಡೆದ ನಂತರ ಅವರು ಇವನನ್ನು ಕರೆದುಕೊಂಡು ಹೋಗುತ್ತಾರೆ. ಜನರೊಂದಿಗೆ ಕುಳಿತುಕೊಳ್ಳೋದು, ಅವರೊಂದಿಗೆ ಕಷ್ಟ ಸುಖ ಕೇಳಿಕೊಂಡು ಮಾತನಾಡೋದು, ಸ್ನೇಹಿತನಂತೆ ಅವರ ಮಾತನ್ನು ಕೇಳಿಸಿಕೊಳ್ಳೋದು ಮತ್ತು ಅವರ ನೋವು ಮತ್ತು ದುಃಖ ಹಂಚಿಕೊಳ್ಳೋದು. ಇದಕ್ಕೆ ಪ್ರತಿಯಾಗಿ, ಈತನಿಗೆ ಬಾಡಿಗೆ ನೀಡುತ್ತಾರಂತೆ. ಇದರಿಂದಾಗಿಯೇ ಈತ ಲಕ್ಷ ಲಕ್ಷ ಸಂಪಾದಿಸುತ್ತಾನೆ.
ಇನ್ನು ಪ್ರತಿ ಬುಕಿಂಗ್ ಗೆ ಸುಮಾರು 5,633 ರೂ. ಪಡೆಯುತ್ತಾನೆ ಈತ!! ಬಾಡಿಗೆಗಾಗಿ ತನ್ನನ್ನು ತಾನು ಅರ್ಪಿಸುವ ಈ ಶೋಜಿ ಆನ್ ಲೈನ್ (online) ಮೂಲಕವೇ ಹೆಚ್ಚಿನ ಗ್ರಾಹಕರನ್ನು ಸಹ ಪಡೆದಿದ್ದಾರೆ. ವರದಿ ಪ್ರಕಾರ, ಶೋಜಿ ನಾಲ್ಕು ವರ್ಷಗಳಲ್ಲಿ 3 ಕೋಟಿ ಗಳಿಸಿದ್ದಾರಂತೆ.