For the best experience, open
https://m.hosakannada.com
on your mobile browser.
Advertisement

Hijab ban: ಹಿಜಾಬ್ ನಿಷೇದ ವಾಪಸ್ ಪಡೆದ ಸರ್ಕಾರ- ಬಿಜೆಪಿ ಮೊದಲ ಪ್ರತಿಕ್ರಿಯೆ ಹೀಗಿತ್ತು !!

07:21 AM Dec 23, 2023 IST | ಹೊಸ ಕನ್ನಡ
UpdateAt: 10:15 AM Dec 23, 2023 IST
hijab ban  ಹಿಜಾಬ್ ನಿಷೇದ ವಾಪಸ್ ಪಡೆದ ಸರ್ಕಾರ  ಬಿಜೆಪಿ ಮೊದಲ ಪ್ರತಿಕ್ರಿಯೆ ಹೀಗಿತ್ತು
Advertisement

Hijab ban : ಹಲವಾರು ಯೋಜನೆ, ಮಸೂದೆಗಳನ್ನು ರದ್ದು ಮಾಡುವುದರ ಮೂಲಕ ಬಿಜೆಪಿಗೆ ದೊಡ್ಡ ಆಘಾತ ನೀಡಿರುವ ಕಾಂಗ್ರೆಸ್ ಸರ್ಕಾರವು ಇದೀಗ ಬಿಜೆಪಿಗೆ ಮತ್ತೊಂದು ಶಾಕ್ ನೀಡಿದ್ದು, ಬಿಜೆಪಿ ಸರ್ಕಾರದ(BJP Government)ಅವಧಿಯಲ್ಲಿ ಜಾರಿಯಾಗಿದ್ದು ಹಿಜಾಬ್ ನಿಷೇದವನ್ನು ವಾಪಸ್ ಪಡೆದಿದೆಹ ಇದು ರಾಜ್ಯಾದ್ಯಂತ ಸದ್ಧುಮಾಡುತ್ತಿರುವ ಬೆನ್ನಲ್ಲೇ ಈ ಕುರಿತು ಬಿಜೆಪಿ ಮೊದಲ ಪ್ರತಿಕ್ರಿಯೆ ನೀಡಿದೆ.

Advertisement

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಅವರು ಜಾರಿಗೊಳಿಸಿದ ಹಿಜಾಬ್ ನಿಷೇದ(Hijab ban) ನೀತಿಯನ್ನು ಮರಳಿ ಪಡೆಯುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಯು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ (Siddaramaiah) ಅವರ ಗ್ಯಾರಂಟಿ ಎಂದು ಸಿಎಂ ವಿರುದ್ಧ ಕಿಡಿಕಾರಿದೆ.

ಇದನ್ನು ಓದಿ: Adhar card: ಇನ್ಮುಂದೆ ಸುಲಭವಾಗಿ ಸಿಗಲ್ಲ ಹೊಸ ಆಧಾರ್ - ದೇಶಾದ್ಯಂತ ಹೊಸ ರೂಲ್ಸ್ ಜಾರಿ

Advertisement

ಏನಿದೆ ಬಿಜೆಪಿ ಮಾಡಿದ ಟ್ವೀಟ್ ನಲ್ಲಿ !!
"ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ @siddaramaiah ಅವರ ಗ್ಯಾರಂಟಿ. ಶಾಲೆ - ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಕೂಡಿರಬೇಕು ಎಂದೇ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ. ಆದರೆ, ಶಾಲಾ ವಿದ್ಯಾರ್ಥಿಗಳ ಮನಸ್ಸಲ್ಲಿ ಸಮವಸ್ತ್ರ ವಿಚಾರವಾಗಿ ಬೇಧವನ್ನು ಹುಟ್ಟು ಹಾಕುತ್ತಿದ್ದಾರೆ ಮುಖ್ಯಮಂತ್ರಿಗಳು. ಪಿಎಫ್ಐ ಗೂಂಡಾಗಳು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ವೋಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ" ಎಂದು ಬರೆದುಕೊಂಡಿದೆ.

ಏನಿದು ಹಿಜಾಬ್ ಗಲಾಟೆ?
ಹಿಂದಿನ ಬಿಜೆಪಿ ಸರ್ಕಾರದ ವೇಳೆ ಹಿಜಾಬ್ ವಿಚಾರ ದೇಶಾದ್ಯಂತ ಭಾರಿ ಗದ್ದಲ ಸೃಷ್ಟಿಸಿತ್ತು. ಖಾಸಗಿ ಕಾಲೇಜೊಂದರಲ್ಲಿ ಶುರುವಾದ ಈ ವಿವಾದ ದೇಶಾದ್ಯಂತ ವ್ಯಾಪಿಸಿ ರಾಜಕೀಯ ರೂಪ ಪಡೆಯಿತು. ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಆಯಾ ಶಾಲಾ ಕಾಲೇಜು ನಿರ್ಧರಿಸಿದ ಸಮವಸ್ತ್ರದಲ್ಲೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿತ್ತು. ಇದೀಗ ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

https://x.com/BJP4Karnataka/status/1738217811720421715?t=Tzef1Th1bSw64SA23Zrp4g&s=08

Advertisement
Advertisement
Advertisement