For the best experience, open
https://m.hosakannada.com
on your mobile browser.
Advertisement

High Court: ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ ಎಂದ ಹೈಕೋರ್ಟ್ ! ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು ಎಚ್ಚರಿಸಿದ ನ್ಯಾಯಪೀಠ

High Court: ಪೊಲೀಸ್ ಠಾಣೆಗಳಿಗೆ ಬರುವ ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ಬಣ್ಣ ಬಳಿದು ದುಡ್ಡು ವಸೂಲಿ, ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು.ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.
08:58 AM May 19, 2024 IST | Praveen Chennavara
UpdateAt: 10:06 AM May 19, 2024 IST
high court  ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ ಎಂದ ಹೈಕೋರ್ಟ್   ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು ಎಚ್ಚರಿಸಿದ ನ್ಯಾಯಪೀಠ
Advertisement

High Court: ಪೊಲೀಸ್ ಠಾಣೆಗಳಿಗೆ ಬರುವ ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ಬಣ್ಣ ಬಳಿದು ದುಡ್ಡು ವಸೂಲಿ, ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು.ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.

Advertisement

ಇದನ್ನೂ ಓದಿ: IPL 2024: ಪ್ಲೇ ಆಫ್ ತಲುಪಿದ ರಾಯಲ್ ಚಾಲೆಂಜರ್ಸ್ ; ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಬೀಗಿದ ಬೆಂಗಳೂರು !

ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರ ಮೂಲಕ ರಾಜ್ಯದ ಪೊಲೀಸರಿಗೆ ಈ ಎಚ್ಚರಿಕೆ ನೀಡಿದೆ.

Advertisement

ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಮಾರ್ಪಡಿಸಲು ಹೇಗೆ ಸಾಧ್ಯ? ಪೊಲೀಸ್ ಠಾಣೆಯಲ್ಲಿ ಸಿವಿಲ್ ವ್ಯಾಜ್ಯವನ್ನು ತೀರ್ಮಾನಿಸಲು ಪೊಲೀಸರಿಗೆ ಅಧಿಕಾರವನ್ನು ನೀಡಿದವರು ಯಾರು ಎಂದು ನ್ಯಾಯಪೀಠ ಪ್ರಶ್ನಿಸಿದೆ.

ನಿವೇಶನವೊಂದರ ಖರೀದಿಗೆ ಸಂಬಂಧಿಸಿದ ವಿಚಾರದಲ್ಲಿ ಮಾರಾಟದಾರರಿಗೆ ಹಣ ಪಾವತಿಸಲು ಖರೀದಿದಾರರಿಗೆ ಒತ್ತಾಯಿಸಿದ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ
ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಪೊಲೀಸರ ನಡವಳಿಕೆ ಬಗ್ಗೆ ಕಟುವಾಗಿ ಈ ಹೇಳಿಕೆ ನೀಡಿದೆ .

ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸುವ ಪೊಲೀಸರ ಕಾರ್ಯವೈಖರಿ ಮತ್ತೆ ಮತ್ತೆ ನಡೆಯುತ್ತಿದೆ. ಠಾಣೆಗಳನ್ನು ವ್ಯಾಪಾರಿ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣ ಇರುವು ಪತ್ತೆ, ಜರ್ಮನಿಯಿಂದ ಲಂಡನ್‌‌ಗೆ ರೈಲು ಪ್ರಯಾಣ ?!

Advertisement
Advertisement
Advertisement