ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Instagram: ಇನ್‌ಸ್ಟಾಗ್ರಾಮ್ ಬಳಕೆದಾರರೇ ಇಲ್ಲಿದೆ ನಿಮಗೊಂದು ಎಚ್ಚರಿಕೆಯ ಮಾಹಿತಿ!!

02:46 PM Feb 03, 2024 IST | ಹೊಸ ಕನ್ನಡ
UpdateAt: 03:00 PM Feb 03, 2024 IST
Advertisement

Instagram : ಸೋಷಿಯಲ್ ಮೀಡಿಯಾದ ಬಳಿಕೆಯಿಂದ ಜನಸಾಮಾನ್ಯರು ಸಂತೋಷ ಪಡುವುದು ಸಾಮಾನ್ಯ. ಆದರೆ ಇದರೊಂದಿಗೆ ಇವುಗಳ ಮೂಲಕ ಆಗುವ ಕೆಲವೊಂದು ಅವಾಂತರಗಳ ಬಗ್ಗೆಯೂ ನಮಗೆ ಎಚ್ಚರಿಕೆ ಇರಬೇಕು.

Advertisement

ಇದನ್ನೂ ಓದಿ: Village of Bachelors: ಹೆಣ್ಣು ಮಕ್ಕಳು ಕಾಲಿಡಲು ಒಲ್ಲದ ವಿಚಿತ್ರ ಗ್ರಾಮವಿದು; ‘ವರ್ಜಿನ್ ವಿಲೇಜ್’ ವಿಶೇಷತೆ ಏನು?

ಹೌದು, ಸೋಷಿಯಲ್ ಮೀಡಿಯಾಗಳ ಮೂಲಕ ನಮಗೆ ಆಗುವ ಬಹುದೊಡ್ಡ ಸಮಸ್ಯೆ ಎಂದರೆ ಅದು ನಮ್ಮ ಡಾಟಾ ಮಿಸ್ ಯೂಸ್ ಆಗೋದು. ಯಾಕೆಂದರೆ ನಮ್ಮ ಇಂಟರ್ನೆಟ್ ಚಟುವಟಿಕೆಯನ್ನು ಗಮನಿಸಲಾಗುತ್ತಿದ್ದು, ನಾವು ಏನು ನೋಡುತ್ತಿದ್ದೇವೆ, ಏನನ್ನು ಹುಡುಕುತ್ತಿದ್ದೇವೆ ಎಂಬುದನ್ನು ನೋಡಲು ನಮ್ಮ ಡೇಟಾವನ್ನು ಕಳುಹಿಸಲಾಗುತ್ತದೆ.

Advertisement

 

ಉದಾಹರಣೆಗೆ ಹೇಳುವುದಾದರೆ ನೀವು ಆನ್ಲೈನ್ ಮಾರ್ಕೇಟ್ ಫ್ಲಿಪ್ ಕಾರ್ಟ್, ಅಮೆಜಾನ್ ಗಳಲ್ಲಿ ಏನಾದರು ಕೊಳ್ಳಲು ಹುಡುಕಿದಾಗ ಅದು ತಕ್ಷಣ ನಿಮ್ಮ ಇನ್ಸ್ಟಾಗ್ರಾಮ್(Instagram)ಹಾಗೂ ಫೇಸ್ ಬುಕ್ ಖಾತೆಯಲ್ಲೂ ಕಾಣಿಸುತ್ತದೆ. ಅಷ್ಟು ವೇಗವಾಗಿ ನಮ್ಮ ಡಾಟ ಪೋಲ್ ಆಗುತ್ತಿದೆ. ಇದು ಕೆಲವೊಮ್ಮೆ ಅಪಾಯಗಳನ್ನು ತಂದೊಡ್ಡಬಲ್ಲದು. ಹೀಗಾಗಬಾರದು ಎಂದರೆ ತಪ್ಪದೇ ನಿಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕ್ರಮ ಅನುಸರಿಸಿ. ನಿಮ್ಮ ಡೇಟಾ ಪೋಲ್ ಆಗುವುದನ್ನು ತಡೆಯಿರಿ.

 

ಇನ್‌ಸ್ಟಾಗ್ರಾಮ್ ನಲ್ಲಿ ಈ ಸೆಟ್ಟಿಂಗ್ಗಳನ್ನು ಆನ್ ಮಾಡಿ:

• ಮೊದಲಿಗೆ, ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

• ಮೇಲಿನ ಬಲ ಮೂಲೆಯಲ್ಲಿ ಮೂರು ಸಾಲುಗಳನ್ನು ನೀಡಲಾಗುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ. ನಂತರ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿಗೆ ಹೋಗಿ.

• ಇಲ್ಲಿ ನೀವು Activity ಮೇಲೆ ಟ್ಯಾಪ್ ಮಾಡಬೇಕು. ನಂತರ, Activity Off Meta Technologies ಹೋಗಿ.

• ಅಲ್ಲಿ Disconnect Future Activity ಟಾಗಲ್ ಅನ್ನು ಆನ್ ಮಾಡಿ. ಇದು ಇನ್ಸ್ಟಾಗ್ರಾಮ್ ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ತಡೆಯುತ್ತದೆ.

• ನಿಮ್ಮ ಹಿಂದಿನ ಚಟುವಟಿಕೆಯನ್ನು ನಿರ್ವಹಿಸಲು ನೀವು ಬಯಸಿದರೆ, ಮೊದಲು ಮೆಟಾ Activity Off Meta Technologies ಪುಟಕ್ಕೆ ಹೋಗಿ.

• ನಂತರ ನಿಮ್ಮ ಮಾಹಿತಿ ಮತ್ತು ಅನುಮತಿಗಳ ಮೇಲೆ ಟ್ಯಾಪ್ ಮಾಡಿ. ನಂತರ ಮೆಟಾ ಟೆಕ್ನಾಲಜೀಸ್ ನಿಂದ ನಿಮ್ಮ ಚಟುವಟಿಕೆಯನ್ನು ಟ್ಯಾಪ್ ಮಾಡಿ.

• ಇದರ ನಂತರ, ಕೆಲವು ಆಯ್ಕೆಗಳನ್ನು ನೀಡಲಾಗುತ್ತದೆ, ಅವುಗಳಲ್ಲಿ ನೀವು ಭವಿಷ್ಯದ ಚಟುವಟಿಕೆಯನ್ನು ನಿರ್ವಹಿಸಿ ಮತ್ತು Your Activity off Meta Technologies ಆಯ್ಕೆ ಮಾಡಿದರೆ, ಹಿಂದಿನ ಚಟುವಟಿಕೆಗಳು ಮುಚ್ಚಲ್ಪಡುತ್ತವೆ.

Advertisement
Advertisement