ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

HSRP ಅಳವಡಿಕೆ ಕುರಿತು ಇಲ್ಲಿದೆ ಹಲವು ಮಹತ್ವದ ಮಾಹಿತಿ !!

HSRP: HSRP ಅಳವಡಿಸದವರಿಗೆ ಜೂನ್ 1 ರಿಂದ ದಂಡಂ ದಶಗುಣಂ ಎನ್ನುವಂತೆ ಭಾರೀ ಮೊತ್ತದ ದಂಡ ಬೀಳಲಿದೆ.
06:23 AM May 15, 2024 IST | ಸುದರ್ಶನ್
UpdateAt: 08:09 AM May 15, 2024 IST
Advertisement

HSRP: ಸಾರಿಗೆ ಇಲಾಖೆಯ ಸೂಚನೆಯಂತೆ 2019ರ ಒಳಗೆ ವಾಹನ ಖರೀದಿಸಿದಂತ ಮಾಲಿಕಕರು 2024, ಮೇ 31ರ ಒಳಗೆ ತಮ್ಮ ವಾಹನಗಳ ಮೇಲೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಗಡುವು ಮುಗಿಯುತ್ತಿದ್ದು HSRP ಅಳವಡಿಸದವರಿಗೆ ಜೂನ್ 1 ರಿಂದ ದಂಡಂ ದಶಗುಣಂ ಎನ್ನುವಂತೆ ಭಾರೀ ಮೊತ್ತದ ದಂಡ ಬೀಳಲಿದೆ.

Advertisement

ಇದನ್ನೂ ಓದಿ: Narendra Modi: ಕೋಟ್ಯಂತರ ಮೌಲ್ಯದ ಆಸ್ತಿ ಘೋಷಣೆ ಮಾಡಿದ ಪ್ರಧಾನಿ - ಕಳೆದ ಸಲಕ್ಕಿಂತ ಮೋದಿ ಆಸ್ತಿ ಹೆಚ್ಚಾದದೆಷ್ಟು ?!

ಹೌದು, ದೇಶಾದ್ಯಂತ ಏಕೀಕೃತ ವಾಹನ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ ಸಾರಿಗೆ ಇಲಾಖೆ HSRP ಅಳವಡಿಕೆಗೆ ಸೂಚನೆ ನೀಡಿದೆ. ಅಂದಹಾಗೆ ಈ ಹಿಂದೆ ಫೆಬ್ರವರಿ 17 HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕೊನೆಯ ದಿನಾಂಕ ಎಂದಿದ್ದ ಸಾರಿಗೆ ಇಲಾಖೆಯು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಏರಿಕೆ ಕಾಣುತ್ತಿದ್ದ ಕಾರಣ ಅದನ್ನು ಮೇ 31 ರ ತನಕ ವಿಸ್ತರಿಸಿತ್ತು. ಸುಮಾರು 6 ತಿಂಗಳಿಗೂ ಅಧಿಕ ಸಮಯವಕಾಶ ನೀಡಿತ್ತು. ಆದರೂ ಕೂಡ ಜನರಿಂದ ನೀರಸ ಪ್ರತಿಕ್ರಿಯೆ ಬರುತ್ತಿದೆ. ಸರ್ಕಾರ ಎಲ್ಲಾ ತರದ ಅನುಕೂಲ ಮಾಡಿದರೂ ಸವಾರರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಗಡುವು ಮುಕ್ತಾಯ ಆಗಲಿದ್ದು, ದಯವಿಟ್ಟು ಆದಷ್ಟು ಬೇಗ HSRP ಅಳವಡಿಸಿ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Advertisement

ಇಂತಹ ವಾಹನಗಳಿಗೆ HSRP ಅಳವಡಿಕೆಯಿಂದ ಸಿಗಲಿದೆಯಾ ರಿಯಾಯಿತಿ?

ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಅದರ ಅಧಿಕೃತ ಕಂಪನಿಗಳಿಂದ ಪಡೆಬೇಕಿದೆ. ಆದರೆ ಈಗ ನೋಂದಣಿಗೆ ಮುಂದಾಗಿರುವ fiat, cielo ambassador, LML, kinetic honda ಮುಂತಾದ ವಾಹನಗಳ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಯಾಕೆಂದರೆ ಇಂತಹ ಹಲವು ಕಂಪನಿಗಳು ಸದ್ಯಕ್ಕೆ ಇಲ್ಲ. ಕೆಲವು ಕಂಪನಿಗಳು ಭಾರತದ ತಯಾರಿಕಾ ಘಟಕ ಮುಚ್ಚಿ ವಿದೇಶಕ್ಕೆ ಸ್ಥಳಾಂತರಗೊಂಡಿವೆ. ಆದ್ದರಿಂದ ಅಧಿಕೃತ ಮಾರಾಟಗಾರರನ್ನು ಹುಡುಕುವುದು ಹೇಗೆ? ಎಂಬುದು ವಾಹನ ಮಾಲೀಕರ ಪ್ರಶ್ನೆಯಾಗಿದೆ. ಅಂದಹಾಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ನೋಂದಣಿಗಾಗಿ ಸಾರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾರಾಟಗಾರರನ್ನು ಆಯ್ಕೆ ಮಾಡಬೇಕು. ಆದರೆ ದೇಶದಲ್ಲಿ ತಯಾರಿಕಾ ಘಟಕ ಮುಚ್ಚಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಹೇಗೆ? ಎಂಬುದು ಹೊಸ ಸಮಸ್ಯೆಯಾಗಿದೆ. ಹೀಗಾಗಿ ಈ ತಾಂತ್ರಿಕ ಕಾರಣದಿಂದ ಮೇ 31ರ ಗಡುವಿನೊಳಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ನಿರ್ದೇಶನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ.

ಮತ್ತೆ ಮುಂದೆ ಹೋಗುತ್ತಾ HSRP ಅಳವಡಿಕೆ ದಿನಾಂಕ?:

HSRP ಅಳವಡಿಕೆ ಮಾಡಲು 2 ಸಲ ಸಮಯ ವಿಸ್ತರಿಸಿತ್ತು. ಆದರೂ ಕೂಡ ಜನ ಉದಾಸೀನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಗಡುವು ವಿಸ್ತರಣೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಇನ್ನೂ ಹಲವು ಜನರು ಕಾಯುತ್ತಿದ್ದಾರೆ. ಆದರೆ ಸಾರಿಗೆ ಇಲಾಖೆ ಇನ್ನೂ ಗಡುವು ವಿಸ್ತರಣೆ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಭಾರೀ ಮೊತ್ತದ ದಂಡ:

ಮೇ 31 ರ ಬಳಿಕವೂ HARP ನಂಬರ್ ಪ್ಲೇಟ್ ಅಳವಡಿಸದಿದ್ದರೆ ಬೀಳುತ್ತೆ ಭಾರೀ ದಂಡ:

HSRP Number Plate ಇಲ್ಲದ ವಾಹನ ಮಾಲೀಕರೆ ಎಚ್ಚರ. ಯಾಕೆಂದರೆ ನೀವು ಈ ನಂಬರ್ ಪ್ಲೇಟ್ ಅಳವಡಿಸದೆ ಮೊದಲ ಬಾರಿಗೆ ರಸ್ತೆಗಿಳಿದರೆ 1000 ದಂಡ ಪಾವತಿಸಬೇಕು. ಇದರಿಂದಲೂ ಎಚ್ಚರಗೊಳ್ಳದೆ ನಂಬರ್ ಪ್ಲೇಟ್ ಹಾಕಿಸದೆ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮೇ 31ರ ಒಳಗೆ ಸರ್ಕಾರದ ಸೂಚನೆಂತೆ HSRP ಅಳವಡಿಸಿ.

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

• ವಾಹನ ತಯಾರಕರನ್ನು ಆಯ್ಕೆ ಮಾಡಿ

• ವಾಹನದ ಮೂಲ ವಿವರ ಭರ್ತಿ ಮಾಡಿ

• ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)

• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.

• ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

Related News

Advertisement
Advertisement