ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Dark Underarms: ಕಪ್ಪಾದ ಕಂಕುಳ ಬೆಳ್ಳಗಾಗಿಸಲು ಸುಲಭ ಪರಿಹಾರ ಇಲ್ಲಿದೆ!

Dark Underarms: ಸ್ಲೀವ್ ಲೆಸ್ ಮತ್ತು ಆಫ್ ಶೋಲ್ಡರ್ ನ ಸುಂದರವಾದ ಟಾಪ್‌ಗಳನ್ನು ಧರಿಸಲು ಹೆಚ್ಚಿನ ಯುವತಿಯರಿಗೆ ಆಸೆ ಇರುತ್ತದೆ.
02:16 PM May 31, 2024 IST | ಕಾವ್ಯ ವಾಣಿ
UpdateAt: 02:24 PM May 31, 2024 IST
Advertisement

Dark Underarms: ಸ್ಲೀವ್ ಲೆಸ್ ಮತ್ತು ಆಫ್ ಶೋಲ್ಡರ್ ನ ಸುಂದರವಾದ ಟಾಪ್‌ಗಳನ್ನು ಧರಿಸಲು ಹೆಚ್ಚಿನ ಯುವತಿಯರಿಗೆ ಆಸೆ ಇರುತ್ತದೆ. ಆದರೆ ಕಂಕುಳಿನ ಕೆಳಭಾಗದಲ್ಲಿ ಉಂಟಾಗಿರುವ ಕಪ್ಪು (Dark Underarms) ಚರ್ಮದಿಂದ ಆಸೆ ನೆರವೇರದೆ ಇರಬಹುದು. ಆದ್ದರಿಂದ ಒಂದು ವೇಳೆ ನೀವೇನಾದರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಟಿಪ್ಸ್ ನಿಮ್ಮ ಸಹಾಯಕ್ಕೆ ಬರಬಹುದು.

Advertisement

ಇದನ್ನೂ ಓದಿ: June Astrology: ಜೂನ್ ತಿಂಗಳಲ್ಲಿ ಹುಟ್ಟಿದವರು ಇನ್ನೊಬ್ಬರ ಮಾತಿಗೆ ಮರಳಾಗುತ್ತಾರೆ! ಇನ್ನಷ್ಟು ಭವಿಷ್ಯದ ಗುಟ್ಟು ಇಲ್ಲಿದೆ

ಈಗಾಗಲೇ ಕಂಕುಳಿನ ಕಪ್ಪು ಚರ್ಮವನ್ನು ಬೆಳ್ಳಗೆ ಮಾಡಲು ನೀವು ಶೇವಿಂಗ್ ಅಥವಾ ಹೇರ್ ರಿಮೂವಲ್ ಕ್ರೀಮ್ ಮುಂತಾದ ರಾಸಾಯನಿಕಗಳಿರುವ ಕ್ರೀಮ್ ಬಳಕೆ, ಸಾಬೂನು ಬಳಸುವುದು, ಆಲ್ಕೋಹಾಲ್ ಆಧಾರಿತ ಡಿಯೋಡರೆಂಟ್‌ಗಳನ್ನು ಬಳಸುವುದು, ದುಬಾರಿ ಉತ್ಪನ್ನಗಳನ್ನು ಅಥವಾ ಚಿಕಿತ್ಸೆಗಳನ್ನು ಮಾಡುವ ಅಗತ್ಯವಿಲ್ಲ, ಏಕೆಂದರೆ ಕಪ್ಪಾಗಿರುವ ಕಂಕುಳನ್ನು ಬೆಳ್ಳಗಾಗಿಸಲು ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ.

Advertisement

ಇದನ್ನೂ ಓದಿ: Google map: ಗೂಗಲ್ ಮ್ಯಾಪ್'ಗೆ ನಿಮ್ಮ ಮನೆ ಲೊಕೇಶನ್ ಸೇರಿಸಬೇಕೆ ?! ಹಾಗಿದ್ರೆ ಜಸ್ಟ್ ಹೀಗೆ ಮಾಡಿ

ಅಡಿಗೆ ಸೋಡಾ:

ಕಂಕುಳಲ್ಲಿನ ಕಪ್ಪನ್ನು ಹೋಗಲಾಡಿಸಲು ಅಡುಗೆ ಸೋಡಾಕ್ಕೆ ನೀರು ಸೇರಿಸಿ ಪೇಸ್ಟ್ ತಯಾರಿಸಿ ಚರ್ಮಕ್ಕೆ ಹಚ್ಚಿ ಕೈಗಳಿಂದ ಸ್ಕ್ರಬ್ ಮಾಡಿ. ಇದು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಕ್ರಮೇಣ ಚರ್ಮದ ಕಪ್ಪು ಕಲೆ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ತೆಂಗಿನ ಎಣ್ಣೆ:

ಕಂಕುಳಲ್ಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಕ್ಯಾಪ್ಸೂಲ್ ಗಳನ್ನು ಬೆರೆಸಿ ಚರ್ಮಕ್ಕೆ ಹಚ್ಚಿದರೆ ಉತ್ತಮ . ಸ್ನಾನಕ್ಕೆ 1 ಗಂಟೆ ಮೊದಲು ಈ ಮಿಶ್ರಣವನ್ನು ಪ್ರತಿದಿನ ಹಚ್ಚಿ ಮತ್ತು ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ನಿಂಬೆ ರಸ:

ನಿಂಬೆಹಣ್ಣು ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ಗಳನ್ನು ಹೊಂದಿರುತ್ತದೆ. ನಿಂಬೆಹಣ್ಣನ್ನು ಮಧ್ಯದಿಂದ ಕತ್ತರಿಸಿ ನಿಮ್ಮ ಕಂಕುಳಲ್ಲಿ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಸ್ನಾನ ಮಾಡಿ. ನಿಂಬೆಯನ್ನು ಅನ್ವಯಿಸಿದ ನಂತರ ಮಾಯಿಶ್ಚರೈಸರ್ ಅನ್ನು ಅನ್ವಯಿಸಬೇಕು. ಏಕೆಂದರೆ ಇದು ಚರ್ಮವನ್ನು ಒಣಗಿಸುತ್ತದೆ.

Advertisement
Advertisement