ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Heart Attack: ಹಾರ್ಟ್​ ಅಟ್ಯಾಕ್​ ಭಯ ನಿಮ್ಮನ್ನ ಕಾಡ್ತಿದೆಯೇ! ತಜ್ಞರು ಹೇಳ್ತಿರೋ ಈ ಮಾಹಿತಿ ತಿಳಿಯಿರಿ!

Heart Attack: ಹಾರ್ಟ್​ ಅಟ್ಯಾಕ್​ ಭಯ ಕೆಲವರನ್ನು ಕಾಡುತ್ತಿರಬಹುದು. ಹಾಗಂತ ಯಾರೋ ಹೇಳಿದ ಬಿಟ್ಟಿ ಸಲಹೆಗೆ ಕಿವಿ ಕೊಡಬೇಡಿ ಮುಂದೆ ಅಪಾಯ ಎದುರಿಸಬೇಕಾದೀತು.
07:45 PM Jun 02, 2024 IST | ಸುದರ್ಶನ್
UpdateAt: 07:45 PM Jun 02, 2024 IST
Advertisement

Heart Attack: ಇತ್ತೀಚಿಗೆ ಅತೀ ಚಿಕ್ಕ ವಯಸ್ಸಿನವರಲ್ಲಿ ಹೃದಯಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳಾದ ಅದರಲ್ಲೂ ಈ ಹಾರ್ಟ್ ಅಟ್ಯಾಕ್ ನಿಂದಾಗಿ (Heart Attack Signs) ಸಾವು ಉಂಟಾಗುತ್ತಿದೆ. ಮುಖ್ಯವಾಗಿ ಹೃದಯವು ದೇಹದ ಪ್ರಮುಖ ಭಾಗವಾಗಿದೆ. ಹೃದಯದ ಕಾರ್ಯ ಉತ್ತಮವಾಗಿದ್ದರೆ ಮಾತ್ರ ಆರೋಗ್ಯಕರವಾಗಿರುತ್ತದೆ. ಹಾಗಾಗಿ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇನ್ನು ಈ ಹಾರ್ಟ್​ ಅಟ್ಯಾಕ್​ ಭಯ ಕೆಲವರನ್ನು ಕಾಡುತ್ತಿರಬಹುದು. ಹಾಗಂತ ಯಾರೋ ಹೇಳಿದ ಬಿಟ್ಟಿ ಸಲಹೆಗೆ ಕಿವಿ ಕೊಡಬೇಡಿ ಮುಂದೆ ಅಪಾಯ ಎದುರಿಸಬೇಕಾದೀತು.

Advertisement

ಹೌದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೃದಯದಿಂದ ರಕ್ತದ ಹರಿವು ಸರಾಗವಾಗಿಲ್ಲದಿದ್ದರೆ, ಹೃದಯಾಘಾತ ಸಂಭವಿಸುವ ಅಪಾಯವಿದೆ. ಈ ಸಮಯದಲ್ಲಿ ಶುಂಠಿಯನ್ನು ಜಗಿದರೆ ಹೃದಯಾಘಾತದ ವಿರುದ್ಧ ಹೋರಾಡಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿತ್ತು. ಆದರೆ, ಇಂತಹ ವೀಡಿಯೋಗಳನ್ನು ನಂಬಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಪ್ರಕಾರ, ಶುಂಠಿಯನ್ನು ಜಗಿಯುವುದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಇದು ಹಠಾತ್ ಹೃದಯಾಘಾತದಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುವುದಕ್ಕೆ ಯಾವುದೇ ಸ್ಪಷ್ಟ ದಾಖಲೆಗಳಿಲ್ಲ. ಶುಂಠಿಯನ್ನು ಜಗಿಯುವುದರಿಂದ ಹಠಾತ್ ಹೃದಯಾಘಾತದ ವಿರುದ್ಧ ಹೋರಾಡಬಹುದು ಎಂಬುವುದರ ಬಗ್ಗೆ ಯಾವುದೇ ಸಂಶೋಧನೆಗಳು ನಡೆದಿಲ್ಲ ಎಂದು ಡಾ.ಸುಧೀರ್ ಕುಮಾರ್ ಬಹಿರಂಗಪಡಿಸಿದ್ದಾರೆ.

Advertisement

ಇದನ್ನೂ ಓದಿ: Vastu Tips: ದಂಪತಿಗಳ ನಡುವೆ ಜಗಳ ಆಗೋಕೆ ಇದೇ ಕಾರಣವಂತೆ, ಮೊದಲು ತಿಳಿಯಿರಿ

ವೈದ್ಯಕೀಯ ವಿಜ್ಞಾನದ ಪ್ರಕಾರ ಇಂತಹ ಸಂದರ್ಭಗಳಲ್ಲಿ ‘ಆಸ್ಪಿರಿನ್’ ಮಾತ್ರೆ ಬಳಸಬೇಕು. ದಿಢೀರ್ ಹೃದಯಾಘಾತದ ಲಕ್ಷಣಗಳಿಂದ ಬಳಲುತ್ತಿರುವವರು ‘ಆಸ್ಪಿರಿನ್ ’ ಮಾತ್ರೆ ಬಳಸಿದರೆ ಪ್ರಾಣಾಪಾಯವಿಲ್ಲ.ಹೀಗೆ ಮಾಡಿದರೆ ರೋಗಿ ಬದುಕುವ ಸಾಧ್ಯತೆ ಹೆಚ್ಚಿದೆ ಎಂದು ಡಾ.ಸುಧೀರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜೊತೆಗೆ ಈ ವೀಡಿಯೋಗೆ ಮತ್ತೊಬ್ಬ ವೈದ್ಯಕೀಯ ತಜ್ಞ ಡಾ.ಸುಭೇಂದು ಮೊಹಾಂತಿ ಪ್ರತಿಕ್ರಿಯಿಸಿದ್ದು, ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬಬೇಡಿ. ಶುಂಠಿಯನ್ನು ಜಗಿಯುವುದರಿಂದ ಹೃದಯಾಘಾತವಾಗುವುದಿಲ್ಲ ಎಂದು ಹೇಳುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇವು ಸುಳ್ಳು ಹೇಳಿಕೆಗಳು ಎಂದು ಹೇಳಿದ್ದಾರೆ. ಇನ್ನು ಮೊಹಂತಿ ಅವರು ಸಹ ಹೃದಯಾಘಾತದ ಸಂದರ್ಭದಲ್ಲಿ ಮನೆಯಲ್ಲಿ 300 ಮಿಗ್ರಾಂ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Good Salary Jobs: ಈ ನಗರಗಳಲ್ಲಿ ನೀವು ಜಾಬ್ ಮಾಡಿದ್ರೆ ಲೈಫ್ ಸೆಟಲ್! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

Advertisement
Advertisement