Watermelon : ಎಚ್ಚರ !! ಅಪ್ಪಿ ತಪ್ಪಿನೂ ಈ ರೀತಿಯ ಕಲ್ಲಂಗಡಿ ಹಣ್ಣನ್ನು ತಿನ್ನಲೇ ಬೇಡಿ !!
Watermelon : ಬೇಸಿಗೆಯ ಧಗೆಗೆ ಜನ ತತ್ತರಿಸಿ ಹೋಗಿದ್ದು ತಂಪು ಪಾನೀಯ, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಕಡಿಮೆ ಬೆಲೆಗೆ ಸಿಗುವ, ಹೊಟ್ಟೆ ತುಂಬುವಷ್ಟು ಸಿಗುವ, ದೇಹವನ್ನು ಕ್ಷಣಾರ್ಧದಲ್ಲೇ ತಂಪಾಗಿಸುವ ಕಲ್ಲಂಗಡಿ( Watermelon )ಹಣ್ಣೆಂದರೆ ಹಲವರಿಗೆ ಬಲು ಪ್ರೀತಿ. ಬಾಯಿ ರುಚಿಯನ್ನೂ ತಣಿಸುವ ಈ ಹಣ್ಣಿಗೆ ಬೇಗ ಆಕರ್ಷಿತರಾಗಿ ನಾವು ಇದರ ಕೆಲವು ಅನಾರೋಗ್ಯಕರ ಅಂಶಗಳನ್ನು ಗಮನಿಸಿದೆ ಗಬ ಗಬನೆ ತಿಂದುಬಿಡುತ್ತೇವೆ. ಆದರೆ ಅಪ್ಪಿತಪ್ಪಿಯೂ ಇಂತಹ ಕಲ್ಲಂಗಡಿ ಹಣ್ಮನ್ನು ತಿನ್ನಬೇಡಿ.
ಹೌದು, ಕಲ್ಲಂಗಡಿ ಹಣ್ಣು ಹಲವರಿಗೆ ಇಷ್ಟ. ಹೀಗಾಗಿ ಕೇವಲ ರಸ್ತೆ ಬದಿ ನಿಂತು ತಿನ್ನುವುದಲ್ಲದೆ, ಇಡೀ ಹಣ್ಣನ್ನು ಮನೆಗೆ ತಂದು ತಿನ್ನುವುದೂ ಉಂಟು. ಆದರೆ ನೀವು ಕಲ್ಲಂಗಡಿ ಕುಯ್ಯುವಾಗ ಅದರಿಂದ ಏನಾದರೂ ನೊರೆ ಬಂದರೆ ಅಪ್ಪಿತಪ್ಪಿಯೂ ಅಂತಹ ಕಲ್ಲಂಗಡಿ ಹಣ್ಣನ್ನು(foamy watermelon) ತಿನ್ನಬೇಡಿ. ತಕ್ಷಣ ಅದನ್ನು ಬಿಸಾಕಿಬಿಡಿ.
ಕಲ್ಲಂಗಡಿ ಹಣ್ಣು ನೊರೆ ಬರಲು ಕಾರಣವೇನು?
ಕಲ್ಲಂಗಡಿ ಹಣ್ಣನ್ನು ಮಾರುವ ಸಲುವಾಗಿ ರಸ್ತೆ ಬದಿ ಇಟ್ಟಿರುತ್ತಾರೆ. ಒಮ್ಮೊಮ್ಮೆ ಅದು ಬಿಸಿಲಲ್ಲೂ ಇರುತ್ತದೆ. ಹೀಗೆ ಬಿಸಿಗೆ ಇಟ್ಟ ಕಲ್ಲಂಗಡಿಯಲ್ಲಿ ಬ್ಯಾಕ್ಟೀರಿಯಾಗಳು(Bacteria) ಉತ್ಪತ್ತಿಯಾಗುತ್ತದೆ. ಅಂದರೆ ಕೆಮಿಕಲ್ ಆಗಿ ಬದಲಾಗುತ್ತದೆ. ಇದರಿಂದಾಗಿ ಹಣ್ಣು ಕೊಳೆಯುವ ಸ್ಥಿತಿಗೆ ಬಂದು ನೊರೆ ಉತ್ಪತ್ತಿಯಾಗುತ್ತದೆ.
ಹೀಗೆ ನೊರೆ ಬಂದ ಕಲ್ಲಂಗಡಿ ಹಣ್ಣನ್ನು ನೀವು ತಿಂದರೆ ಯಾವುದಾದರೂ ಕೆಟ್ಟ ಕಾಯಿಲೆಗೆ ತುತ್ತಾಗಿ ಅನಾರೋಗ್ಯ ಕಾಡಬಹುದು ಹುಷಾರ್!! ಹೀಗಾಗಿ ಮುಂದಿನ ಸಲ ಕಲ್ಲಂಗಡಿ ತಂದಾಗ ನೀವದನ್ನು ಪೂರ್ತಿಯಾಗಿ ಪರಿಶೀಲಿಸಿ ನಂತರ ಸೇವಿಸಿ. ಆರೋಗ್ಯ ಕಾಪಾಡಿ.