ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Gynophobia: ಪುರುಷರೇ ನಿಮ್ಮಲ್ಲಿ ಈ ಲಕ್ಷಣ ಏನಾದ್ರೂ ಉಂಟಾ? ಹಾಗಿದ್ರೆ ಪುರುಷತ್ವವೇ ಹೋದೀತು ಹುಷಾರ್!!

10:33 PM Dec 30, 2023 IST | ಹೊಸ ಕನ್ನಡ
UpdateAt: 10:33 PM Dec 30, 2023 IST
Advertisement

Gynophobia: ಜಗತ್ತು ಮುಂದುವರಿದಂತೆ ಅನೇಕ ರೋಗರು-ರುಜಿನಗಳು ಮನುಷ್ಯರನ್ನು ಕಾಡುತ್ತಿವೆ. ಇವುಗಳನ್ನು ಆಧುನಿಕ ರೋಗಗಳೆಂದೇ ವ್ಯಾಖ್ಯಾನಿಸಬಹುದು. ಅವುಗಳಿಗೆ ಮದ್ದು ಇಲ್ಲ, ಬರಲು ಕಾರಣವೂ ಇಲ್ಲ ಆದರೂ ಚೆನ್ನಾಗಿದ್ದವರನ್ನು ಬಂದು ವಕ್ಕರಿಸುವುದುಂಟು, ಅವರ ಬಲಿ ಪಡೆಯುವುದುಂಟು ಅಥವಾ ಮಾನಸಿಕವಾಗಿ ಖುಗ್ಗಿಸುವುದು ಉಂಟು. ಅಂತದರಲ್ಲಿ ಈ ಪುರುಷರಲ್ಲಿ ಬೆವರುವ ಸಮಸ್ಯೆ ಕೂಡ ಒಂದು.

Advertisement

ಹೌದು, ಪುರುಷರನ್ನು ಮಾನಸೀಕವಾಗಿ ಕುಗ್ಗಿಸುವ ರೋಗವೆಂದರೆ ಅದು ಬೆವರುವ ಖಾಯಿಲೆ. ಬೆವರುವುದು ಅಂದರೆ ಬಿಸಿಲಲ್ಲಿ ಹೋಗುವಾಗ, ಹೆಚ್ಚು ಕೆಲಸ ಮಾಡಿದಾಗ, ಆಯಾಸವಾದಾಗ ಅಥವಾ ಆಟವಾಡಿದಾಗ ಬೆವರುವ ಬೆವರಲ್ಲ. ಬದಲಿಗೆ ಹುಡುಗಿಯರನ್ನು ಕಂಡಾಗ ನೀವೇನಾದರೂ ಬೆವರಿದರೆ ಅದು ನಿಮ್ಮನ್ನು ದೊಡ್ಡ ಕೂಪಕ್ಕೆ ತಳ್ಳುತ್ತಿದೆ ಎಂದರ್ಥ. ಅಂದರೆ ಪುರುಷತ್ವವನ್ನು ಕಳೆದುಕೊಳ್ಳುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಉಂಟಾಗುತ್ತಿದೆ ಎಂದರ್ಥ. ಇದಕ್ಕೆ ಗೈನೋಫೋಬಿಯಾ(Gynophobia) ಎಂದು ಕರೆಯುತ್ತಾರೆ.

'ಗೈನೋಫೋಬಿಯಾ' ಎಂದರೇನು?
ಪುರುಷರಿಗೆ ಹುಡುಗಿಯರು ಅಥವಾ ಹೆಂಗಸರನ್ನು ಕಂಡಾಗ ಆಗಿ ಬರದೇ ಇದ್ದರೆ ಅದು ಗೈನೋಫೋಬಿಯಾ ಖಾಯಿಲೆ ಎಂದರ್ಥ. ಇದು ಮಹಿಳೆಯರನ್ನು ಕಂಡರೆ ಭಯಪಡುವ, ಮಹಿಳೆಯರ ಬಗ್ಗೆ ಏನೇನೋ ಯೋಚಿಸುವ ಒಂದು ಲಕ್ಷಣವಾಗಿದೆ. ಇಂತವರಿಗೆ ಮಹಿಳೆಯನ್ನು ಕಂಡ ಕೂಡಲೇ ಬೆವರಲು ಶುರು ಮಾಡ್ತಾರೆ. ಕಾಲುಗಳು ನಡುಗಲು ಶುರುವಾಗುತ್ತದೆ. ಮಾತನಾಡುವಾಗ ತೊದಲುತ್ತಾರೆ.

Advertisement

ಗೈನೋಫೋಬಿಯಾ ಲಕ್ಷಣಗಳು :
ಇದು ಪ್ಯಾನಿಕ್ ಅಟ್ಯಾಕ್, ವಿಪರೀತವಾಗಿ ಬೆವರುವುದು, ಹೃದಯವು ವೇಗವಾಗಿ ಬಡಿಯುವುದು ಮತ್ತು ಉಸಿರಾಟದ ತೊಂದರೆಯನ್ನು ಸಹ ಒಳಗೊಂಡಿದೆ. ಎದೆ ನೋವು ಅಥವಾ ಹೃದಯಾಘಾತವೂ ಸಂಭವಿಸುವುದುಂಟು. ಅಲ್ಲದೆ ಈ ವ್ಯಕ್ತಿಗಳು ಮಹಿಳೆ ಬಳಿ ಹೋಗಲು ಹೆದರುತ್ತಾರೆ. ತಮ್ಮನ್ನು ತಾವು ನಕಾರಾತ್ಮಕವಾಗಿ ನೋಡ್ತಾರೆ. ಮಹಿಳೆ ಹತ್ತಿರ ಬಂದ್ರೆ ಅಥವಾ ಮಹಿಳೆ ಹತ್ತಿರಕ್ಕೆ ಬರಬಹುದು ಎಂಬ ಕಲ್ಪನೆಯಲ್ಲೇ ಆತ ಭಯಕ್ಕೆ ಒಳಗಾಗುತ್ತಾನೆ.

Advertisement
Advertisement