For the best experience, open
https://m.hosakannada.com
on your mobile browser.
Advertisement

Mangaluru: ಆತ ಒಬ್ಬ ನಾಲಾಯಕ್‌ ರಾಜಕಾರಣಿ, ತಾಕತ್ತಿದ್ದರೆ ಓರ್ವ ಕಾರ್ಯಕರ್ತನನ್ನು ಮುಟ್ಟಿ ನೋಡಲಿ- ಡಾ.ಭರತ್‌ ಶೆಟ್ಟಿಗೆ ರಮನಾಥ ರೈ ಸವಾಲು

Mangaluru: ರಾಹುಲ್‌ ಗಾಂಧಿ ಕುರಿತು ಕೆನ್ನೆಗೆ ಬಾರಿಸಬೇಕು ಎಂಬ ಹೇಳಿಕೆ ನೀಡಿರುವ ಡಾ.ಭರತ್‌ ಶೆಟ್ಟಿ ಅವರ ಮಾತಿಗೆ ಕಾಂಗ್ರೆಸ್‌ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.
12:39 PM Jul 09, 2024 IST | ಸುದರ್ಶನ್
UpdateAt: 12:39 PM Jul 09, 2024 IST
mangaluru  ಆತ ಒಬ್ಬ ನಾಲಾಯಕ್‌ ರಾಜಕಾರಣಿ  ತಾಕತ್ತಿದ್ದರೆ ಓರ್ವ ಕಾರ್ಯಕರ್ತನನ್ನು ಮುಟ್ಟಿ ನೋಡಲಿ  ಡಾ ಭರತ್‌ ಶೆಟ್ಟಿಗೆ ರಮನಾಥ ರೈ ಸವಾಲು
Advertisement

Mangaluru: ರಾಹುಲ್‌ ಗಾಂಧಿ ಕುರಿತು ಕೆನ್ನೆಗೆ ಬಾರಿಸಬೇಕು ಎಂಬ ಹೇಳಿಕೆ ನೀಡಿರುವ ಡಾ.ಭರತ್‌ ಶೆಟ್ಟಿ ಅವರ ಮಾತಿಗೆ ಕಾಂಗ್ರೆಸ್‌ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕ ಡಾ.ಭರತ್‌ ಶೆಟ್ಟಿ ಒಬ್ಬ ನಾಲಾಯಕ್‌ ರಾಜಕಾರಣಿ, ಆತನಿಗೆ ತಾಕತ್ತಿದ್ದರೆ ಗಂಡು ಮಗ ಆಗಿದ್ದರೆ ಜಿಲ್ಲೆಯ ಒಬ್ಬ ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತನನ್ನು ಮುಟ್ಟಿ ನೋಡಲಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮನಾಥ ರೈ ಸವಾಲೆಸಿದಿದ್ದಾರೆ.

Advertisement

Government Rules: ಸರ್ಕಾರಿ ಸಮಾರಂಭಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯವೇ? ರಾಜ್ಯ ಸರ್ಕಾರ ಅಂತಿಮ ತೀರ್ಮಾನವೇನು?

ತಲೆ ಸರಿಲ್ಲ, ಹುಚ್ಚ ಎನ್ನುವ ಪದಗಳನ್ನು ಭರತ್‌ ಶೆಟ್ಟಿ ಬಳಸಿದ್ದು, ಇಂತಹ ಮಾತು ಸಹಿಸಲು ಸಾಧ್ಯವಿಲ್ಲ. ಬಿಜೆಪಿಯವರು ನನ್ನ ಮೇಲೂ ಆರೋಪ ಮಾಡಿದ್ದಾರೆ. ನನ್ನ ಹುಟ್ಟನ್ನೇ ಪ್ರಶ್ನಿಸಿ ತಾಯಿಯ ಮೇಲೆ ಆರೋಪ ಮಾಡಿದ್ದಾರೆ. ಇದು ಅವರ ನಡವಳಿಕೆ. ಆದರೆ ನಾವು ಅಂತಹ ಪ್ರಶ್ನೆ ಕೇಳುವುದಿಲ್ಲ. ನಾವೇನು ಬಳೆ ತೊಟ್ಟು ಕುಳಿತುಕೊಂಡಿಲ್ಲ. ನಮ್ಮ ಪಕ್ಷ ಜಿಲ್ಲೆಯಲ್ಲಿ ಸೋತಿರಬಹುದು, ಸತ್ತಿಲ್ಲ. ಸರಕಾರ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹ ಮಾಡಿದರು.

Advertisement

ಇದರ ಜೊತೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಕೂಡಾ ವಾಗ್ದಾಳಿ ಮಾಡಿದ್ದು, ಶಾಸಕ ಭರತ್‌ ಶೆಟ್ಟಿ ಒಬ್ಬ ಚಿಲ್ಲರೆ ರಾಜಕಾರಣಿ. ಸಂಸ್ಕೃತಿ ಇಲ್ಲದ ರಾಜಕಾರಣಿ, ಶಾಸಕ ಸ್ಥಾನಕ್ಕೆ ಅಗೌರವ ತೋರಿಸಿ ಶಾಸಕರ ಮಾನ ಹರಾಜು ಮಾಡಿದ್ದಾರೆ. ಕೆನ್ನೆಗೆ ಬಾರಿಸಬೇಕು ರಾಹುಲ್ ಗಾಂಧಿಗೆ ಎನ್ನುವ ಜೊತೆಗೆ ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ಬುದ್ಧಿ ಕೂಡಾ ಶಾಸಕ ಭರತ್‌ ಶೆಟ್ಟಿ ಇಲ್ಲ ಎಂದು ಹರಿಹಾಯ್ದಿದ್ದಾರೆ.

ಪ್ರಧಾನಿಯವರಿಗೇ ರಾಹುಲ್‌ ಗಾಂಧಿಯನ್ನು ಎದುರಿಸಲು ತಾಕತ್ತಿಲ್ಲ. ಚಿಲ್ಲರೆ ಗಿರಾಕಿಯಾಗಿರುವ ಭರತ್‌ ಶೆಟ್ಟಿ ಯಾವ ಲೆಕ್ಕ. ಆರು ತಿಂಗಳಲ್ಲಿ ಕೇಂದ್ರ ಸರಕಾರ ಉರುಳುತ್ತೆ. ಅದಕ್ಕೆ ಹಾದಿ ಬೀದಿಯಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

2nd PUC Students: ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ

Advertisement
Advertisement
Advertisement