For the best experience, open
https://m.hosakannada.com
on your mobile browser.
Advertisement

HD Revanna Arrest: ಎಚ್ ಡಿ ರೇವಣ್ಣ ಬಂಧನದ ತಕ್ಷಣ ಎಚ್ಚೆತ್ತುಕೊಂಡ HD ಕುಮಾರಸ್ವಾಮಿ, ಮಹತ್ವದ ಸಭೆ-ರೇವಣ್ಣ ಅಮಾನತು ಪಕ್ಕಾ ?!

HD Revanna Arrest: ರೇವಣ್ಣ ಅವರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
07:09 AM May 05, 2024 IST | ಸುದರ್ಶನ್ ಬೆಳಾಲು
UpdateAt: 07:09 AM May 05, 2024 IST
hd revanna arrest  ಎಚ್ ಡಿ ರೇವಣ್ಣ ಬಂಧನದ ತಕ್ಷಣ ಎಚ್ಚೆತ್ತುಕೊಂಡ hd ಕುಮಾರಸ್ವಾಮಿ  ಮಹತ್ವದ ಸಭೆ ರೇವಣ್ಣ ಅಮಾನತು ಪಕ್ಕಾ
Photo Credit: The Economic Times

HD Revanna Arrest: ರಾಸಲೀಲೆ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ವಜಾ ಆದ ಬೆನ್ನಲ್ಲೇ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ರೇವಣ್ಣ ಅವರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಬಹುಶಹ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ನಿಂದ ಅಮಾನತು ಮಾಡಿದಂತೆ ಹೆಚ್ ಡಿ ರೇಮಣ್ಣ ಅವರನ್ನು ಕೂಡ ಅಮಾನತು ಮಾಡುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

Advertisement

ಹಾಸನ ಸಂಸದರಾಗಿರುವ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ಬಹಿರಂಗ ಬೆನ್ನಲ್ಲೇ ಎಚ್ ಡಿ ರೇವಣ್ಣ ವಿರುದ್ಧವೂ ಸಹ ಲೈಂಗಿಕ ದೌರ್ಜನ್ಯ ಕೇಳಿಬಂದಿತ್ತು. ಅಲ್ಲದೇ ಕಳೆದೆರಡು ದಿನಗಳಿಂದ ರೇವಣ್ಣ ಮೇಲೆ ಅಪಹರಣ ದೂರು ದಾಖಲಾಗಿತ್ತು. ತಮ್ಮ ಬಂಧನ ಆಗಬಹುದು ಎನ್ನುವ ನಿಟ್ಟಿನಲ್ಲಿ ಹೆಚ್ ಡಿ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು ಹೆಚ್ ಡಿ ರೇವಣ್ಣರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಆಗುತ್ತಿದ್ದಂತೆ ಜೆಡಿಎಸ್ ನಲ್ಲಿ ತಳಮಳ ಉಂಟಾಗಿದೆ ಕುಮಾರಸ್ವಾಮಿ ಜೆಡಿಎಸ್ ಗೆ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಗೆ ಹಿಡಿದಿದ್ದಾರೆ.

ಮಗ ಪ್ರಜ್ವಲ್ ರೇವಣ್ಣ ಮತ್ತು ಅಪ್ಪ ಎಚ್ ಡಿ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಇತ್ಯಾದಿ ಪ್ರಕರಣಗಳು ಜೆಡಿಎಸ್ ಗೆ ತೀವ್ರ ಮುಜುಗರ ಉಂಟುಮಾಡಿದೆ. ಹಾಗಾಗಿ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇಂದು ರೇವಣ್ಣ ಕೂಡಾ ಬಂಧನಕ್ಕೀಡಾಗಿದ್ದರಿಂದ ಜೆಡಿಎಸ್ ಕತ್ತರಿಸಿ ಹೋಗಿದೆ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ರೇವಣ್ಣರನ್ನು ಜೆಡಿಎಸ್ ಪಕ್ಷದಿಂದ ಅಮಾನತ್ತು ಮಾಡುವುದು ಬಹುತೇಕ ಖಚಿತ ಮತ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.

Advertisement

ಅಪಹರಣ ಪ್ರಕರಣದಲ್ಲಿ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್‌.ಡಿ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳಿಸಿದ್ದು, ನಿರೀಕ್ಷಣಾ ಜಾಮೀನು ವಜಾಗೊಳ್ಳುತ್ತಿದ್ದಂತೆ ಹೆಚ್.ಡಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮೇ 6 ಕ್ಕೆ ಮುಂದೂಡಿದೆ.

ಶಾಸಕ ಎಚ್ ಡಿ ರೇವಣ್ಣಗೆ ಸಂಕಷ್ಟ ಎದುರಾಗಿದ್ದು ಅಪಹರಣಕ್ಕೀಡಾಗಿದ್ದ ಮನೆ ಕೆಲಸದಾಕೆಯನ್ನು SIT ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ವಾರಗಳ ಕೆಳಗೆ ಅಂದರೆ ಏಪ್ರಿಲ್ 29 ರಂದು ರೇವಣ್ಣ ಸಂಬಧೀಕರಾಗಿರುವ ಸತೀಶ್ ಬಾಬು ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದಲೆ ಕರೆದೊಯ್ದಿದ್ದರು. ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದ ಎಸ್ಐಟಿ ಅಧಿಕಾರಿಗಳು ಮೈಸೂರಿನ ಪಕ್ಕದ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಪತ್ತೆ ಮಾಡಿದ್ದಾರೆ ಆಕೆಯನ್ನು ರೇವಣ್ಣ ರವರ ಪಿಎ ರಾಜಶೇಖರ ಎಂಬುವರ ತೋಟದ ಮನೆಯಲ್ಲಿ ಬಚ್ಚಿಡಲಾಗಿದ್ದು ಅಲ್ಲಿಂದ ಆಕೆಯನ್ನು ಇದೀಗ ಎಸ್ಐಟಿ ತಂಡ ಸುರಕ್ಷಿತವಾಗಿ ಕರೆದೊಯ್ತಿದೆ.

ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ನೋಡಿದ್ದಾರಾ ತಮ್ಮ ನಿಖಿಲ್ ಕುಮಾರಸ್ವಾಮಿ ?, ನಿಖಿಲ್’ರಿಂದ ಅಚ್ಚರಿ ಹೇಳಿಕೆ !

Advertisement
Advertisement