For the best experience, open
https://m.hosakannada.com
on your mobile browser.
Advertisement

H D Devegowda: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ- ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ ಎಚ್ ಡಿ ದೇವೇಗೌಡ !!

H D Devegowda: ಆದರೀಗ ಈ ಬೆನ್ನಲ್ಲೇ ಎಚ್.ಡಿ. ದೇವೇಗೌಡರು ಸ್ವತಃ ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 
07:31 AM May 07, 2024 IST | ಸುದರ್ಶನ್
UpdateAt: 09:20 AM May 07, 2024 IST
h d devegowda  ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ  ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ ಎಚ್ ಡಿ ದೇವೇಗೌಡ

H D Devegowda: ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ(Prajwal revanna) ಪ್ರಕರಣದಿಂದ ಧಳಪತಿಗಳು ಕುಸಿದುಹೋಗಿದ್ದಾರೆ. ಪಕ್ಷಕ್ಕೇ ಇದೊಂದು ದೊಡ್ಡ ಕುಣಿಕೆಯಾಗಿದೆ. ಆದರೀಗ ಈ ಬೆನ್ನಲ್ಲೇ ಎಚ್.ಡಿ. ದೇವೇಗೌಡರು ಸ್ವತಃ ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಇದನ್ನೂ ಓದಿ: H D Devegowda: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ- ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ ಎಚ್ ಡಿ ದೇವೇಗೌಡ !!

ಮಾಜಿ ಪ್ರಧಾನಿ ದೇವೇಗೌಡರ(H D Devegowda) ಮನೆಯಲ್ಲೇ ಎಚ್‌.ಡಿ. ರೇವಣ್ಣ(H D Revanna) ಬಂಧನಕ್ಕೊಳಗಾಗಿರುವು ಅವರಿಗೆ ಮತ್ತಷ್ಟು ಬೇಸರವನ್ನುಂಟು ಮಾಡಿದೆ. ಹೀಗಾಗಿ ರೇವಣ್ಣ ವಿಚಾರ ಮತ್ತು ಪ್ರಜ್ವಲ್ ವಿಚಾರವನ್ನು ಬಹಿರಂಗವಾಗಿ ಯಾರೂ ಮಾತನಾಡಬಾರದು ಎಂಬ ತೀರ್ಮಾನಕ್ಕೆ ಗೌಡರ ಕುಟುಂಬ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಕೆಲವೊಂದಿಷ್ಟು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

Advertisement

ಇದನ್ನೂ ಓದಿ: Prajwal Revanna Vedeio: ಪ್ರಜ್ವಲ್ ರೇವಣ್ಣ ವಿಡಿಯೋ ಇರೋದು ಕೇವಲ 2 ಗಂಟೆ 37 ನಿಮಿಷ ಮಾತ್ರ , ಉಳಿದದ್ದೆಲ್ಲ ಮಿಕ್ಸಿಂಗ್ !!

ಗೌಡರು ಕೊಟ್ಟ ಸೂಚನೆ ಏನು?

ವಕೀಲರು ಸೇರಿದಂತೆ ಯಾರೂ ಕೂಡಾ ಈ ಕೇಸ್‌ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು. ಎಚ್‌.ಡಿ. ರೇವಣ್ಣ ಬಂಧನ ಹಾಗೂ ಮುಂದೆ ಎಸ್‌ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ಬಂಧನ ಮಾಡಿದ ನಂತರವೂ ಪ್ರತಿಭಟನೆಗಳನ್ನು ಮಾಡಬಾರದು. ಇನ್ನು ರೇವಣ್ಣ ಹಾಗೂ ಪ್ರಜ್ವಲ್ ಪರವಾಗಿ ಹೇಳಿಕೆಗಳನ್ನು ನೀಡಬಾರದು. ದೂರುದಾರರ ವಿರುದ್ಧ ಯಾವುದೇ ಬಹಿರಂಗ ಹೇಳಿಕೆಯನ್ನು ಸಹ ನೀಡಬಾರದು ಎಂದು ಎಚ್.ಡಿ. ದೇವೇಗೌಡರೇ ಕುಟುಂಬದವರಿಗೆ ಸೂಚನೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಈ ಮುಂಚಿತವಾಗಿ ಪೆನ್‌ಡ್ರೈವ್‌ ಪ್ರಕರಣ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ಕೋರ್ಟ್ ತಡೆಯಾಜ್ಞೆ ನೀಡಲಾಗಿದೆ.

Advertisement
Advertisement