ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chanakya Niti: ಪತಿ-ಪತ್ನಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದೆಯಾ? ಹಾಗಾದ್ರೆ ಈ ವಿಷ್ಯದಲ್ಲಿ ಹುಷಾರ್!

12:33 PM Jul 27, 2024 IST | ಕಾವ್ಯ ವಾಣಿ
UpdateAt: 12:33 PM Jul 27, 2024 IST
Advertisement

Chanakya Niti: ಚಾಣಕ್ಯನ ತತ್ವಗಳನ್ನು ಅನುಸರಿಸಿ ಅನೇಕ ಜನರು ಯಶಸ್ವಿಯಾಗಿದ್ದಾರೆ. ಚಾಣಕ್ಯ ತನ್ನ ತತ್ವದಲ್ಲಿ ಸಂಬಂಧಗಳು, ಗೆಳೆತನ, ಪತಿ- ಪತ್ನಿ ಬಾಂಧವ್ಯ, ಇತ್ಯಾದಿಗಳ ಬಗ್ಗೆ ಸೂತ್ರಗಳನ್ನು ನೀಡಿದ್ದಾನೆ. ಚಾಣಕ್ಯ ನೀತಿಯಲ್ಲಿ ತಿಳಿಸಲಾದ ತತ್ವಗಳನ್ನು (Chanakya Niti) ಅನುಸರಿಸುವ ಮೂಲಕ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಸಂತೋಷದ ವೈವಾಹಿಕ ಜೀವನವನ್ನು ಆನಂದಿಸಬಹುದು. ಪತಿ-ಪತ್ನಿಯರ ಸಂಬಂಧಕ್ಕೆ ಸಂಬಂಧಿಸಿದಂತೆ ಚಾಣಕ್ಯ ಹಲವು ಪ್ರಮುಖ ವಿಷಯಗಳನ್ನು ಹೇಳಿದ್ದಾನೆ.

Advertisement

ಅವುಗಳಲ್ಲಿ ಒಂದು, ಗಂಡ ಮತ್ತು ಹೆಂಡತಿ ನಡುವಿನ ವಯಸ್ಸಿನ ಅಂತರ. ಮದುವೆ ಆದಮೇಲೆ ಪತಿ ಪತ್ನಿ ನೂರಾರು ಕಾಲ ಸುಖವಾಗಿ ಬಾಳಬೇಕು. ಅದಕ್ಕಾಗಿ ಸಂತೋಷದ ಜೀವನವನ್ನು ನಡೆಸಲು  ಪತಿ-ಪತ್ನಿಯರ ವಯಸ್ಸಿನ ಅಂತರವು ಕಾರಣ ಆಗುತ್ತೆ. ಹೌದು ಪತಿ ಪತ್ನಿ ವಯಸ್ಸಿನ ವ್ಯತ್ಯಾಸವನ್ನು ಅವಲಂಬಿಸಿ ವೈವಾಹಿಕ ಜೀವನದಲ್ಲಿ ಸಂತೋಷವು ಬದಲಾಗುತ್ತದಂತೆ. ಪತಿ ಪತ್ನಿಯರ ನಡುವಿನ ವಯಸ್ಸಿನ ವ್ಯತ್ಯಾಸ ಅತಿಯಾಗಬಾರದು ಎನ್ನುತ್ತಾನೆ ಚಾಣಕ್ಯ. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅತಿಯಾದ ಅಂತರವು  ಜೀವನದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಯಾವುವು ಎಂಬುದನ್ನು ಇಲ್ಲಿ ನೋಡಿ.

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಗಂಡ ಮತ್ತು ಹೆಂಡತಿಯ ನಡುವಿನ ಸಮಾನ ವಯಸ್ಸು ಬಹಳ ಮುಖ್ಯ. ವಯಸ್ಸಿನಲ್ಲಿ ದೊಡ್ಡ ಅಂತರ ಇದ್ದಲ್ಲಿ ಅವರ ಅಭಿಪ್ರಾಯಗಳು, ಆಸೆಗಳು ಯಾವಾಗಲೂ ಸಮಾನವಾಗಿರುವುದಿಲ್ಲ. ಅವರು ಒಂದೇ ರೀತಿ ಯೋಚನೆ ಮಾಡುವುದಿಲ್ಲ. ದೇಹ ಮತ್ತು ಮನಸ್ಸನ್ನು ಸಮನಾಗಿ ಕಾಣಲಾಗುವುದಿಲ್ಲ. ಅಂದರೆ ಮುದುಕ ಯುವತಿಯನ್ನು ಮದುವೆಯಾದರೆ ಅಂತಹ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ. ದಂಪತಿಗಳಿಗೆ ಲೈಂಗಿಕ ಸುಖ ಕೊರತೆ ಆಗುತ್ತದೆ. ಅಂತಹ ಮದುವೆ ಮುರಿದು ಬೀಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮುದುಕ ಗಂಡ, ಯುವತಿ ಹೆಂಡತಿಯನ್ನು ತೃಪ್ತಿಪಡಿಸಲಾರ. ದಾಂಪತ್ಯ ನೀರಸವಾಗುತ್ತದೆ. ಪತ್ನಿ ಬೇರೊಬ್ಬ ಯುವಕನಲ್ಲಿ ತನ್ನ ತೃಪ್ತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇರುತ್ತದೆ.

Advertisement

ಇನ್ನು ಹೆಂಡತಿ ತುಂಬಾ ದೊಡ್ಡವಳಾಗಿದ್ದು, ಗಂಡ ಯುವಕನಾಗಿದ್ದರೆ, ಆಗಲೂ ದಾಂಪತ್ಯ ಸುಖಕರವಾಗಿರುವುದಿಲ್ಲ. ಯುವಕ ಸದಾ ರಸ ಪ್ರಣಯದ ಮೂಡ್‌ನಲ್ಲಿರುತ್ತಾನೆ. ಆದರೆ ಹೆಣ್ಣು  ಅವಳಲ್ಲಿ ಆಗಿರುವ ದೈಹಿಕ ಬದಲಾವಣೆಗಳು, ಅವಳಲ್ಲಿ ಯಾವುದೇ ರಸಿಕತೆ ಉಂಟು ಮಾಡುವುದಿಲ್ಲ. ಅವನ ಅಗತ್ಯಗಳಿಗೆ ತಕ್ಕಂತೆ ಆಕೆ ಸ್ಪಂದಿಸದಿದ್ದರೆ, ಗಂಡ ಬೇರೊಬ್ಬಳನ್ನು ಹುಡುಕಿಕೊಂಡು ಹೋಗಬಹುದು.

ಹೌದು, ವೈವಾಹಿಕ ಜೀವನದಲ್ಲಿ ಪತಿ-ಪತ್ನಿಯರ ನಡುವಿನ ಸಂಬಂಧವು ಅತ್ಯಂತ ಪವಿತ್ರವಾಗಿದೆ ಮತ್ತು ಈ ಬಂಧವನ್ನು ಕಾಪಾಡಿಕೊಳ್ಳಲು, ಪತಿ ಮತ್ತು ಪತ್ನಿ ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾನೆ ಚಾಣಕ್ಯ. ಪತಿ-ಪತ್ನಿಯರ ನಡುವೆ ಪ್ರೀತಿ, ಸೌಹಾರ್ದತೆ ಇರಬೇಕು. ಅವರ ಅಭಿರುಚಿಗಳು ಒಂದೇ ಆಗಿರಬೇಕಾದರೆ ಅವರ ವಯಸ್ಸು ಕೂಡಾ ಹೊಂದಾಣಿಕೆ ಆಗಿರಬೇಕು. ಆಗ ಸೊಗಸಾದ ದಾಂಪತ್ಯ ಸಾಧ್ಯವಾಗುತ್ತದೆ ಎನ್ನುತ್ತಾನೆ.

Related News

Advertisement
Advertisement