For the best experience, open
https://m.hosakannada.com
on your mobile browser.
Advertisement

Heart Attack: ರಾಮಲೀಲಾ ನಾಟನ ನಡೆಯುತ್ತಿದ್ದ ಸಂದರ್ಭದಲ್ಲೇ ಅವಘಡ; ಹನುಮಂತ ವೇಷಧಾರಿಗೆ ಸ್ಟೇಜ್‌ನಲ್ಲಿ ಹೃದಯಾಘಾತ, ಸಾವು!!

09:09 AM Jan 23, 2024 IST | ಹೊಸ ಕನ್ನಡ
UpdateAt: 09:09 AM Jan 23, 2024 IST
heart attack  ರಾಮಲೀಲಾ ನಾಟನ ನಡೆಯುತ್ತಿದ್ದ ಸಂದರ್ಭದಲ್ಲೇ ಅವಘಡ  ಹನುಮಂತ ವೇಷಧಾರಿಗೆ ಸ್ಟೇಜ್‌ನಲ್ಲಿ ಹೃದಯಾಘಾತ  ಸಾವು
Image Credit Source: TV9 Kannada
Advertisement

Heart Attack: ರಾಮಲೀಲಾ ನಾಟಕ ನಡೆಯುತ್ತಿದ್ದ ಸಮಯದಲ್ಲಿ ಹನುಮಂತ ಪಾತ್ರಧಾರಿಯೋರ್ವರು ಹೃದಯಾಘಾತದಿಂದ ಮೃತ ಪಟ್ಟಿರುವ ಘಟನೆಯೊಂದು ನಡೆದಿದೆ. ಈ ಘಟನೆ ಹರ್ಯಾಣದ ಭಿವಾನಿಯಲ್ಲಿ ನಡೆದಿದೆ. ಹರೀಶ್‌ ಮೆಹ್ತಾ ಎಂಬುವವರೇ ನಾಟಕ ನಡೆಯುತ್ತಿದ್ದ ಸಮಯದಲ್ಲೇ ವೇದಿಕೆಯ ಮೇಲೆ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಹರೀಶ್‌ ಮೆಹ್ತಾ ಅವರು ಹನುಮಾನ್‌ ಪಾತ್ರದಲ್ಲಿದ್ದು, ಭಗವಾನ್‌ ರಾಮನ ಪಾದಗಳಲ್ಲಿ ಪ್ರಾರ್ಥನೆ ಮಾಡಬೇಕಿತ್ತು. ರಾಮನ ಪಾದಗಳಿಗೆ ನಮಸ್ಕಾರ ಮಾಡುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿ ಸೇರಿದ್ದ ಪ್ರೇಕ್ಷಕರು ಆಘಾತಗೊಂಡಿದ್ದು, ಇದು ನಾಟಕದ ಭಾಗವೆಂದೇ ಅಂದಾಜು ಮಾಡಿಕೊಂಡಿದ್ದರು. ಆದರೆ ಅವರನ್ನು ವೇದಿಕೆಯಿಂದ ಎತ್ತಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರತಿಕ್ರಿಯೆ ಬಾರದಾಗ ಘಟನೆಯ ಅರಿವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಅವರು ಮೃತ ಹೊಂದಿದ್ದಾರೆ ಎಂದು ಘೋಷಿಸಿದರು.

ಮೃತ ಹರೀಶ್‌ ಅವರು ವಿದ್ಯುತ್‌ ಇಲಾಖೆಯಲ್ಲಿ ಇಂಜಿನಿಯರ್‌ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಇವರು ಕಳೆದ ವರ್ಷಗಳಿಂದ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು.

Advertisement

Advertisement
Advertisement
Advertisement