For the best experience, open
https://m.hosakannada.com
on your mobile browser.
Advertisement

Harish Poonja: ಶಿವರಾಜ ತಂಗಡಗಿ ಹೇಳಿಕೆಯಿಂದ ಕಾಂಗ್ರೆಸ್‌ ಚುನಾವಣೆಗೆ ಮುನ್ನವೇ ಸೋಲೊಪ್ಪಿದೆ-ಹರೀಶ್‌ ಪೂಂಜಾ

Harish Poonja: ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಂಜಾ (Harish Poonja) ಆಕ್ರೋಶ ವ್ಯಕ್ತಪಡಿಸಿದ್ದಾರೆ. 
12:16 PM Mar 27, 2024 IST | ಸುದರ್ಶನ್
UpdateAt: 12:22 PM Mar 27, 2024 IST
harish poonja  ಶಿವರಾಜ ತಂಗಡಗಿ ಹೇಳಿಕೆಯಿಂದ ಕಾಂಗ್ರೆಸ್‌ ಚುನಾವಣೆಗೆ ಮುನ್ನವೇ ಸೋಲೊಪ್ಪಿದೆ ಹರೀಶ್‌ ಪೂಂಜಾ

Harish Poonja: ಸಚಿವ ಶಿವರಾಜ್‌ ತಂಗಡಗಿ (Shivaraj Tangadagi) ಅವರು ಮೋದಿ ಮೋದಿ ಎಂದು ಘೋಷಣೆ ಕೂಗಿದರೆ ಅಂತವರಿಗೆ ಕಪಾಳಕ್ಕೆ ಹೊಡೆಯಬೇಕು ಎಂಬ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಹೇಳಿಕೆಗೆ ಶಾಸಕ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಂಜಾ (Harish Poonja) ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ: Crime News: ನಿತ್ಯ ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕ : ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು

ಕಾಂಗ್ರೆಸ್‌ನ ಹತಾಶೆಯ ಭಾವನೆ ರಾಜ್ಯದಲ್ಲಿ ವ್ಯಕ್ತವಾಗಿ. ಇದಕ್ಕೆ ಶಿವರಾಜ್‌ ತಂಗಡಗಿ ಅವರು ನೀಡಿದ ಹೇಳಿಕೆಯೇ ಉದಾಹರಣೆ. ಈ ಮೂಲಕ ಕಾಂಗ್ರೆಸ್‌ 2024 ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದೆ. ಹಾಗಾಗಿ ತಂಗಡಗಿ ಬಾಯಲ್ಲಿ ಈ ಹೇಳಿಕೆ ಬಂದಿದೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: PM Narendra Modi: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ : ಸಚಿವ ಶಿವರಾಜ್ ತಂಗಡಗಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಿಜೆಪಿ

ಮೇಲಿನಿಂದ ಕೆಳಗಿನವರೆಗೂ ಕಾಂಗ್ರೆಸ್‌ಗೆ ಒಂದೇ ಮಾನಸಿಕತೆ ಇರುವುದು. ಒಂದು ಒಳ್ಳೆಯ ಮನುಷ್ಯನನ್ನು ಹೆಕ್ಕಿ ತೆಗೆಯಲು ಸಾಧ್ಯವಾಗದಂತಹ ಪಕ್ಷ. ಬಿಜೆಪಿಯ ಯಾವನೇ ನಾಯಕ ತಪ್ಪು ಹೇಳಿಕೆ ಕೊಟ್ಟರೆ ಅದು ವೈಯಕ್ತಿಕ ಹೇಳಿಕೆ ಎಂದು ಹೇಳುತ್ತದೆ. ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದು ತಿದ್ದಿಕೊಳ್ಳುತ್ತದೆ. ಮನೆ ಮಕ್ಕಳ ಚಾಲಿ ಊರಿಗೆಲ್ಲಾ ಎಂಬಂತೆ ಕಾಂಗ್ರೆಸ್‌ನ ಎಲ್ಲಾ ನಾಯಕರಿಗೆ ಇದು ಅನ್ವಯ ಎಂದು ಕಿಡಿಕಾರಿದರು.

ದ್ವೇಷ, ಅಸಹಿಷ್ಠುತೆಯ ಮಾತನ್ನು ಕಾಂಗ್ರೆಸ್‌ ಹೇಳುವುದು ಇದೇ ಮೊದಲನೇನಲ್ಲ. ಮೋದಿ, ಬಿಜೆಪಿಯನ್ನು ಎದುರಿಸಲಾಗದೆ ಅನೇಕ ನಾಯಕರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ತಂಗಡಗಿ ಈ ದೇಶದ ಇತಿಹಾಸವನ್ನು ಅರ್ಥ ಮಾಡಿದರೆ ಉತ್ತಮ. ಕಾಂಗ್ರೆಸ್‌ ಇಂತಹ ಹೇಳಿಕೆಯನ್ನು ಈ ಹಿಂದಿನ ಚುನಾವಣೆಯಲ್ಲಿ ಕೂಡಾ ನೀಡಿದ್ದಾರೆ ಎಂದು ಹರೀಶ್‌ ಪೂಂಜಾ ಹೇಳಿದರು.

Advertisement
Advertisement