ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Hardik Pandya: ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರು. ದಂಡ : 2025ರ ಐಪಿಎಲ್ ಮೊದಲ ಪಂದ್ಯದಿಂದ ನಿಷೇಧ

Hardik Pandya: ಹಾರ್ದಿಕ್ ಪಾಂಡ್ಯ ಅವರಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಮತ್ತು ಮೂರನೇ ಸ್ಲೋ ಓವರ್ ರೇಟ್ಅಪರಾಧದಿಂದಾಗಿ ಮುಂದಿನ ಐಪಿಎಲ್ ಸೀನನ್ನ ಅವರ ತಂಡದ ಆರಂಭಿಕ ಪಂದ್ಯದಿಂದ ಅಮಾನತುಗೊಳಿಸಲಾಗಿದೆ
08:37 PM May 18, 2024 IST | ಸುದರ್ಶನ್
UpdateAt: 08:37 PM May 18, 2024 IST
Advertisement

Hardik Pandya: ಮುಂಬೈ ಇಂಡಿಯನ್ಸ್(Mumbai Indians)ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಮತ್ತು ಮೂರನೇ ಸ್ಲೋ ಓವರ್ ರೇಟ್(Slow over Rate) ಅಪರಾಧದಿಂದಾಗಿ ಮುಂದಿನ ಐಪಿಎಲ್(IPL) ಸೀನನ್ನ ಅವರ ತಂಡದ ಆರಂಭಿಕ ಪಂದ್ಯದಿಂದ ಅಮಾನತುಗೊಳಿಸಲಾಗಿದೆ.

Advertisement

ಮೇ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lacknow Super joints) ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಅವರ ತಂಡವು ನಿಧಾನಗತಿಯ ಓವರ್ ರೇಟ್ ಅನ್ನು ಕಾಯ್ದುಕೊಂಡ ಕಾರಣ ಮುಂಬೈ ಇಂಡಿಯನ್ಸ್(Mumbai Indians) ನಾಯಕ ಹಾರ್ದಿಕ್ ಪಾಂಡ್ಯ( Hardik Pandya) ಅವರಿಗೆ ಈ ದಂಡ ವಿಧಿಸಲಾಗಿದೆ.

ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡ ಮೂರನೇ ಬಾರಿ ದಂಡನೆಗೆ ಒಳಗಾಗಿದೆ.

Advertisement

ಪಾಂಡ್ಯ ಅವರಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು ಮತ್ತು ತಂಡದ ಮುಂದಿನ ಪಂದ್ಯವನ್ನು ಆಡದಂತೆ ನಿಷೇಧ ಹೇರಲಾಗಿದೆ.

'ಇಂಪ್ಯಾಕ್ಟ್ ಪ್ಲೇಯರ್(Impact player)ಸೇರಿದಂತೆ ಪ್ಲೇಯಿಂಗ್ 11ನ ಉಳಿದ ಸದಸ್ಯರಿಗೆ ವೈಯಕ್ತಿಕವಾಗಿ 12 ಲಕ್ಷ ರೂ ಅಥವಾ ಅವರ ಆಯಾ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಯಿತು.

Advertisement
Advertisement