ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Hamsalekha: ದರ್ಶನ್ ನನ್ನ ಮಗನ ರೀತಿ, ನಾನೂ ನೋವು ತಿನ್ನುತ್ತಿದ್ದೇನೆ - ಕೊಲೆ ಕೇಸ್ ವಿಚಾರವಾಗಿ ಹಂಸಲೇಖ ಶಾಕಿಂಗ್ ಹೇಳಿಕೆ!

Hamsalekha: ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ. ನಮ್ಮದು ಚಂದನವನ, ಒಂದು ಮಳೆಗೆ ಮರ ಒಣಗಿದರೇನಂತೆ. ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆ ಎಂದು ಹಂಸಲೇಖ ಹೇಳಿದ್ದಾರೆ.
10:04 AM Jul 01, 2024 IST | ಕಾವ್ಯ ವಾಣಿ
UpdateAt: 10:04 AM Jul 01, 2024 IST
Advertisement

Hamsalekha: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕನ್ನಡದ ಸ್ಟಾರ್ ನಟ ದರ್ಶನ್ ಬಗ್ಗೆ ಇದೀಗ ಇಡೀ ಚಿತ್ರರಂಗದವರು ಹಲವು ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಕೆಲವರು ದರ್ಶನ್ ಪರ ಸಂತಾಪ ವ್ಯಕ್ತ ಪಡಿಸಿದ್ದು ಇನ್ನು ಹಲವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತುತ್ತಿದ್ದಾರೆ. ಅಂತೆಯೇ ಇದೀಗ ಈ ಪ್ರಕರಣದ ವಿಚಾರವಾಗಿ   ಇದೀಗ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಪ್ರತಿಕ್ರಿಯೆ ನೀಡಿದ್ದಾರೆ.

Advertisement

LPG Price Cut: ಜುಲೈ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಹಿ ಸುದ್ದಿ, ಸಿಲಿಂಡರ್ ಬೆಲೆ ಇಳಿಕೆ

Advertisement

ಹಂಸಲೇಖ ಅವರು ದರ್ಶನ್ (Actor Darshan)ಪ್ರಕರಣದಿಂದ ಸ್ಯಾಂಡಲ್‌ವುಡ್‌ಗೆ ಬಂದಿರುವ ಒಂದು ಕಪ್ಪು ಚುಕ್ಕೆ ವಿಚಾರವಾಗಿ ಮಾತನಾಡಿದ ಅವರು, ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ. ನಮ್ಮದು ಚಂದನವನ, ಒಂದು ಮಳೆಗೆ ಮರ ಒಣಗಿದರೇನಂತೆ. ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆ ಎಂದರು.

ದರ್ಶನ್ ನನ್ನ ಮಗು ಅಂತಾ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ, ನಾನು ಅಷ್ಟೇ ನೋವು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ತಿಂತಿರುತ್ತೆ. ಇದು ತಂದೆ ಮಗುವಿನ ಭಾಂಧವ್ಯ.

ಸಿನಿಮಾ ಕಲಾವಿದರಾದವರು ಸಣ್ಣದಾಗಿ ಯೋಚನೆ ಮಾಡಬೇಕು. ಕೋಪವನ್ನು ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು. ನಿಜ ಜೀವನದಲ್ಲಿ ಸ್ಕ್ರಿಪ್ಟನ್ನ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು. ಇದು ಕಲಾವಿದರ ಕರ್ತವ್ಯ ಎಂದು ಹೇಳಿದರು. ಕಲಾವಿದರು ಆ ರೀತಿ ಅಪರಾಧ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ಒಟ್ಟಿನಲ್ಲಿ ನಾವು ದರ್ಶನ್ ಕೊಟ್ಟಿರುವ ಕೊಡುಗೆ ಕಡೆ ಗಮನ ಕೊಡೋಣ ಎಂದರು.

T20 World Cup 2024: ಸಂಕಷ್ಟದಲ್ಲಿ ಸಿಲುಕಿರುವ ಟೀಂ ಇಂಡಿಯಾ; ಬೆರಿಲ್‌ ಚಂಡಮಾರುತಕ್ಕೆ ಸಿಲುಕಿರುವ ಆಟಗಾರರು

 

Advertisement
Advertisement