For the best experience, open
https://m.hosakannada.com
on your mobile browser.
Advertisement

Hamsalekha: ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ- ಹಂಸಲೇಖ ಕ್ಷಮೆಯಾಚನೆ

Hamsalekha: ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿದ್ದಾರೆ. ಈ ಕುರಿತು ಲಿಖಿತ ಹಾಗೂ ವೀಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
09:47 AM Jul 20, 2024 IST | ಸುದರ್ಶನ್
UpdateAt: 09:47 AM Jul 20, 2024 IST
hamsalekha  ನನ್ನ ಪಂಪನಾಣೆ  ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ  ಹಂಸಲೇಖ ಕ್ಷಮೆಯಾಚನೆ
Advertisement

Hamsalekha: ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿದ್ದಾರೆ. ಈ ಕುರಿತು ಲಿಖಿತ ಹಾಗೂ ವೀಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

Advertisement

ಸೋಮವಾರ ಗೌರಿ ಚಿತ್ರದ ಸಾಂಗ್‌ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಹಂಸಲೇಖ ಅವರು, ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿಗೆ ಅಂತಾರೆ, ಅದೆಲ್ಲ ಬುಲ್‌ಶಿಟ್‌ ಎಂಬ ಪದವನ್ನು ಬಳಕೆ ಮಾಡಿದ್ದರು. ಈ ಹೇಳಿಕೆಗೆ ಜೈನ ಸಮುದಾಯದ ಜನತೆ ಆಕ್ರೋಶಗೊಂಡಿದ್ದರು. ಇದರಿಂದ ಎಚ್ಚತ್ತ ಹಂಸಲೇಖ ಜೈನ ಸಮುದಾಯದ ಜನತೆ ಬಳಿಕ ತಮ್ಮ ಕ್ಷಮೆ ಕೇಳಿದ್ದಾರೆ.

ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮೆರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ, ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸುಮುದಾಯಕ್ಕೆ ಶಿರವಾಗಿ ಕ್ಷಮೆ ಕೋರುತ್ತೇನೆ ಎಂದು ಹಂಸಲೇಖ ಹೇಳಿದ್ದಾರೆ.

Advertisement

ಲಿಖಿತರೂಪದಲ್ಲಿ ಬರೆದ ಕ್ಷಮಾಪಣೆ ಪತ್ರದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ ಹಂಸಲೇಖ;
ಪ್ರಿಯ ಮಾಧ್ಯಮಗಳೇ, ದಯಮಾಡಿ, ನಾನು ದುಡುಕಿ ಮಾತಾಡಿದ ಆ Bullshit ಪದವನ್ನು Delete ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿ ಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ. ಆ ಮಾತು ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ.

ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಚಾನೆಲ್ ಅವರು Individual Biteಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರ ಬಂದೆ. ನನ್ನ ಸಹಾಯಕ , ನನ್ನನ್ನ ಹೊಗಳಿದ. ಸಿಟ್ಟು ತಡೆಯಲಾಗಲಿಲ್ಲ ಆದರೂಈ ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್ ಎಚಿದ. ಆಗ ನಾನು ಆತನಿಗೆ ಸಿಟ್ಟು ಹೋಗಿ ಬರೋ ಬುಲೆಟ್ಟು ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು, ಸಿಟ್ಟು ಒಂದು ಬುಲ್ಶಿಟ್ಟು ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೆ ನಡೆದಿದ್ದು. ದಯವಿಷ್ಟು ಕ್ಷಮಿಸಿ ಎಂದು ಹಂಸಲೇಖ ಕೇಳಿಕೊಂಡಿದ್ದಾರೆ.

Mangaluru: ಸ್ನಾನ ಮಾಡುತ್ತಿರುವ ಯುವತಿಯ ವೀಡಿಯೋ ಮಾಡಿದ ಯುವಕ; ಸ್ಥಳೀಯರಿಂದ ಬಿತ್ತು ಗೂಸಾ

Advertisement
Advertisement
Advertisement