For the best experience, open
https://m.hosakannada.com
on your mobile browser.
Advertisement

H D Revanna: ರೇವಣ್ಣ ರಿಲೀಸ್- ತಬ್ಬಿಕೊಂಡು ಸ್ವಾಗತಿಸಿದ ಕುಮಾರಸ್ವಾಮಿ, ಗಂಡ ಬಂದರೂ ಮನೆಗೆ ಬಾರದ ಭವಾನಿ !!

H D Revanna: ಶಾಸಕ ಎಚ್‌.ಡಿ ರೇವಣ್ಣ(H D Revanna)ಗೆ ಕೊನೆಗೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು(Bail) ಮಂಜೂರು ಮಾಡಿದ್ದು, ರೇವಣ್ಣ ನಿನ್ನೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
09:46 AM May 15, 2024 IST | ಸುದರ್ಶನ್
UpdateAt: 09:48 AM May 15, 2024 IST
h d revanna  ರೇವಣ್ಣ ರಿಲೀಸ್  ತಬ್ಬಿಕೊಂಡು ಸ್ವಾಗತಿಸಿದ ಕುಮಾರಸ್ವಾಮಿ  ಗಂಡ ಬಂದರೂ ಮನೆಗೆ ಬಾರದ ಭವಾನಿ
Advertisement

H D Revanna: ಹಾಸನ ಸಂಸದ ಹಾಗೂ ಮಗ ಪ್ರಜ್ವಲ್‌ ರೇವಣ್ಣ(Prajwal Revanna) ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣ(H D Revanna)ಗೆ ಕೊನೆಗೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು(Bail) ಮಂಜೂರು ಮಾಡಿದ್ದು, ರೇವಣ್ಣ ನಿನ್ನೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

Advertisement

ಇದನ್ನೂ ಓದಿ: Pakistan privatisation : ನಮಗೆ ಉಳಿದಿರೋದು ಇದೊಂದೇ ದಾರಿ : ಎಲ್ಲಾ ಸರ್ಕಾರಿ ಸ್ವಾಮ್ಯದ ಉದ್ದಿಮೆ, ಕಂಪನಿಗಳ ಖಾಸಗಿಕರಣಕ್ಕೆ ಮುಂದಾದ ಪಾಕಿಸ್ತಾನ

ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುತ್ತಿದ್ದಂತೆ ರೇವಣ್ಣ ಅವರು ನೇರವಾಗಿ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಎಚ್ ಡಿ ದೇವೇಗೌಡ ಮನೆಗೆ ತೆರಳಿದ್ದಾರೆ. ಅವರನ್ನು ಕಂಡ ಕೂಡಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಬ್ಬಿಕೊಂಡು ಸ್ವಾಗತಿಸಿದರು. ಕುಮಾರಸ್ವಾಮಿ ಸಂತೈಸಿದರು. ಇನ್ನು ಕುಟುಂಬಸ್ಥರನ್ನು ಕಂಡಕೂಡಲೇ ರೇವಣ್ಣ ಕಣ್ಣೀರು ಹಾಕಿದ್ದಾರೆ. ಬಳಿಕ ಅವರನ್ನು ಎಲ್ಲರೂ ಸೇರಿ ಆರತಿ ಮಾಡಿ ಒಳಗೆ ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಸೀದಾ ಒಳಗೆ ಹೋದ ರೇವಣ್ಣ ಅವರು ಎಚ್‌.ಡಿ. ದೇವೇಗೌಡರ ಕೋಣೆಗೆ ಎಂಟ್ರಿ ಕೊಟ್ಟರು.

Advertisement

ಇದನ್ನೂ ಓದಿ: KCET 2024: CET ಗೆ 2nd ಪಿಯುಸಿ ಅಂಕಗಳನ್ನು ಅಪ್ಲೋಡ್ ಮಾಡಲು ಲಾಸ್ಟ್ ಡೇಟ್ ಫಿಕ್ಸ್ !!

ದೇವೇಗೌಡರನ್ನು ನೋಡಿ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು ಎನ್ನಲಾಗಿದೆ. ಜತೆಗೆ ತಾಯಿ ಚನ್ನಮ್ಮ ಅವರ ಆಶೀರ್ವಾದವನ್ನೂ ಈ ವೇಳೆ ರೇವಣ್ಣ ಪಡೆದುಕೊಂಡರು.

ಇನ್ನು ಎಚ್.ಡಿ. ರೇವಣ್ಣ ಅವರಿಗೆ ಮೊದಲಿಗೆ ಬೆಳಗ್ಗೆ ಮನೆಯಲ್ಲಿ ಮಾಡಿಸಲಾಗಿದ್ದ ದೇವರ ಪೂಜೆಯ ಪ್ರಸಾದವನ್ನು ಕೊಡಲಾಯಿತು. ಬಳಿಕ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತರು. ಊಟದ ಸಮಯದಲ್ಲಿ ರೇವಣ್ಣ ಅವರು ಎಸ್‌ಐಟಿ ವಶ ಹಾಗೂ ಜೈಲಿನಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ. ಆದರೆ ಅಚ್ಚರಿ ಏನಂದ್ರೆ ಇಷ್ಟಾದರೂ ಪತ್ನಿ ಭವಾನಿ ಅವರು ರೇವಣ್ಣನವರ ಹತ್ತಿರಕ್ಕೂ ಸುಳಿಯಲಿಲ್ಲ.

ಹೌದು, ಎಚ್‌.ಡಿ. ರೇವಣ್ಣ ಅವರಿಗೆ ಸೋಮವಾರ ಸಂಜೆಯೇ ಬೇಲ್‌ ಸಿಕ್ಕರೂ ಭವಾನಿ ರೇವಣ್ಣ ಅವರ ಸುದ್ದಿಯೇ ಇಲ್ಲವಾಘಿದೆ. ಇನ್ನು ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೂ ಅವರು ಆಗಮಿಸಲಿಲ್ಲ. ರೇವಣ್ಣ ಜೈಲಿಗೆ ಹೋದಾಗಲೂ ನೋಡಲು ಹೋಗಲಿಲ್ಲ. ರೇವಣ್ಣ ಎಸ್ಐಟಿ ಕಸ್ಟಡಿಯಲ್ಲಿ ಇದ್ದಾಗಲೂ ಬರಲಿಲ್ಲ. ಬಿಡುಗಡೆ ಆಗಿ ದೇವೇಗೌಡರ ನಿವಾಸಕ್ಕೆ ರೇವಣ್ಣ ಬಂದರೂ ಅತ್ತ ಕಡೆ ಸುಳಿಯಲಿಲ್ಲ. ಅಲ್ಲದೆ ಅವರ ಮಗ ಸೂರಜ್ ರೇವಣ್ಣ ಕೂಡ ಎಲ್ಲೂ ಕಾಣಿಸಲಿಲ್ಲ. ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Advertisement
Advertisement
Advertisement