Mufti Salman Azhari: ಹಿಂದುಗಳನ್ನು ನಾಯಿ ಜೊತೆ ಹೋಲಿಸಿದ ಇಸ್ಲಾಂ ಬೋಧಕನ ಬಂಧನ
Mufti Salman Azhari: ಹಿಂದೂಗಳ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಮುಂಬೈ ಮೂಲದ ಇಸ್ಲಾಮಿಕ್ ಬೋಧಕ ಮುಫ್ತಿ ಸಲ್ಮಾನ್ ಅಝರಿಯನ್ನು ಗುಜರಾತ್ ಪೊಲೀಸರು ಭಾನುವಾರ (ಫೆಬ್ರವರಿ 4) ಗುಜರಾತ್‌ನ ಜುನಾಗಢದಲ್ಲಿ ಬಂಧಿಸಿದ್ದಾರೆ. ಈ ವೇಳೆ ಈತನ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.
ಇದನ್ನೂ ಓದಿ: Family tips: ಗಂಡಸರೇ ಇದನ್ನು ಮಾಡಿದ್ರೆ ಹೆಂಡತಿಯರಿಗೆ ಎಂದೂ ಸಿಟ್ಟೇ ಬರಲ್ಲ !!
ಇವರು ತಮ್ಮ ದ್ವೇಷ ಭಾಷಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ " ಈಗ ನಾಯಿಗಳ ಕಾಲ ನಡೆಯುತ್ತಿದೆ, ಮುಂದೆ ನಮಗೂ ಒಂದು ಕಾಲ ಬರುತ್ತದೆ" ಎಂದು ಹೇಳಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಬಂಧನ ಮಾಡಲಾಗಿದೆ.
ಜುನಾಗಢದಲ್ಲಿ ಕೆಲವು ದಿನಗಳ ಹಿಂದೆ ನೀಡಿದ ಭಾಷಣದ ನಂತರ ಗುಜರಾತ್ ಪೊಲೀಸರು ಮುಸ್ಲಿಂ ಮೌಲಾನಾ ಮತ್ತು ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಜನವರಿ 31 ರಂದು ಜುನಾಗಢ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೌಲಾನಾ ಅವರು ಉದ್ರೇಕಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದುಗಳನ್ನು ನಾಯಿಗೆ ಹೋಲಿಸಿದ ಬಳಿಕ ಈ ವಿವಾದ ಉಂಟಾಗಿದ್ದು, ಈ ಘಟನೆಯ ವೀಡಿಯೊ ವೈರಲ್ ಆದ ನಂತರ, ಪೊಲೀಸರು ಮುಫ್ತಿ ಸಲ್ಮಾನ್, ಈವೆಂಟ್ ಆಯೋಜಕರಾದ ಮೊಹಮ್ಮದ್ ಯೂಸುಫ್ ಮಲಿಕ್ ಮತ್ತು ಅಜೀಮ್ ಹಬೀಬ್ ಒಡೆದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ ಮತ್ತು 505 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.