ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Gruhalakshmi scheme: ರಾಜ್ಯದ 'ಗೃಹಲಕ್ಷ್ಮೀ ಯೋಜನೆ'ಗೆ ಮತ್ತೆ ಬಂತು 4 ಹೊಸ ರೂಲ್ಸ್ !!

10:16 AM Mar 04, 2024 IST | ಹೊಸ ಕನ್ನಡ
UpdateAt: 10:26 AM Mar 04, 2024 IST
Advertisement

Gruhalakshmi scheme: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ(Gruhalakshmi scheme)ಯೋಜನೆಯಡಿ ಈಗಾಗಲೇ ರಾಜ್ಯದ ಪ್ರತಿಯೊಂದು ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿಗಳು ಪ್ರತಿ ತಿಂಗಳು ದೊರೆಯುತ್ತಿದೆ. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ 4 ಹೊಸ ರೂಲ್ಸ್ ಜಾರಿಗೆ ತಂದಿದೆ.

Advertisement

ಇದನ್ನೂ ಓದಿ: Intresting News: ಇನ್ಮೇಲೆ ಲವ್ ಬ್ರೇಕಪ್ ಆಗಿ ಸತ್ತರೆ ಆತ್ಮಹತ್ಯೆ ಪ್ರಚೋದನೆ ಕೇಸಿಲ್ಲ

• NPCI ಖಡ್ಡಾಯ :

Advertisement

ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ. ಅಂದರೆ ಇನ್ನು ಮುಂದೆ ಪ್ರತಿಯೊಬ್ಬರೂ NPCI ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ.

• ಆಧಾರ್ E-KYC ಕಡ್ಡಾಯ:

ಇನ್ನು ಗೃಹ ಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

• ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ : 

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗದೆ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕಿದೆ. ನಿಮ್ಮ Ration Card ಗೆ ನಿಮ್ಮ Aadhaar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ.

• ಬ್ಯಾಂಕ್ ಸ್ಟೇಟಸ್ ಚೆಕ್ ಮಾಡಿ: 

ಇನ್ನು ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದೆ. ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗೇ ಹಣ ಜಮಾ ಮಾಡಲು ಸಾದ್ಯವಾಗುವಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಒಳಿತು.

Related News

Advertisement
Advertisement