For the best experience, open
https://m.hosakannada.com
on your mobile browser.
Advertisement

Gruha Lakshmi Scheme: ʼಗೃಹಲಕ್ಷ್ಮಿʼ ಹಣ ವಿವಾದ! ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ! ಅಷ್ಟಕ್ಕೂ ಏನು ಮೋಸ ನಡೆದಿದೆ ಗೊತ್ತಾ?

Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಪಂಚ ಗ್ಯಾರಂಟಿಯನ್ನು ಒಂದೊಂದೇ ಯೋಜನೆಗಳಾಗಿ ಜಾರಿಗೊಳಿಸುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿತ್ತು.
12:06 PM Jul 21, 2024 IST | ಕಾವ್ಯ ವಾಣಿ
UpdateAt: 12:06 PM Jul 21, 2024 IST
gruha lakshmi scheme  ʼಗೃಹಲಕ್ಷ್ಮಿʼ ಹಣ ವಿವಾದ  ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ  ಅಷ್ಟಕ್ಕೂ ಏನು ಮೋಸ ನಡೆದಿದೆ ಗೊತ್ತಾ
Advertisement

Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಪಂಚ ಗ್ಯಾರಂಟಿಯನ್ನು ಒಂದೊಂದೇ ಯೋಜನೆಗಳಾಗಿ ಜಾರಿಗೊಳಿಸುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿತ್ತು. ಆದರೆ ಈ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆವರೆಗೆ ಉತ್ತಮವಾಗಿಯೇ ಜಾರಿಯಾಗಿದ್ದವು. ನಂತರದಲ್ಲಿ ಒಂದೊಂದೇ ಸಮಸ್ಯೆ ಕಾಣಿಸಿದೆ.

Advertisement

ಹೌದು, ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಂಡ ಜನರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕೈಕೊಟ್ಟಿದ್ದರು. ಇದೇ ಕಾರಣಕ್ಕೆ ಏನೋ ಲೋಕಸಭಾ ಚುನಾವಣೆ ಬಳಿಕ ಮನೆಯ ಯಜಮಾನಿಯರ ಖಾತೆಗೆ 2 ಸಾವಿರ ರೂ. ಗೃಹಲಕ್ಷ್ಮಿ ಹಣ ಬಂದಿಲ್ಲ. ಹೀಗಾಗಿ ಪ್ರತಿದಿನವೂ ಹಣ ಬರದ ಮಹಿಳೆಯರು ಬ್ಯಾಂಕಿಗೆ ಓಡಾಡುವಂತೆ ಆಗಿದೆ. ಗೃಹಲಕ್ಶ್ಮೀ ಹಣ ಇಂದು ಬರುತ್ತೆ, ನಾಳೆ ಬರುತ್ತೆ ಅಂತಾ ಲಕ್ಷಾಂತರ ಮಹಿಳೆಯರು ಕಾಯುತ್ತಿದ್ದಾರೆ.

ಮುಖ್ಯವಾಗಿ ಮೇ ತಿಂಗಳ ಹಣ ಪಡೆದಿರುವ ಮಹಿಳೆಯರಿಗೆ ಜೂನ್‌, ಜುಲೈ ತಿಂಗಳ ಹಣ ಬಂದಿಲ್ಲ. ಬ್ಯಾಂಕಿಗೆ ಹೋಗಿ ಪಾಸ್​ಬುಕ್​ನಲ್ಲಿ ಎಂಟ್ರಿ ಮಾಡಿಸಿಕೊಂಡು ಬಂದಿರೂ ಪ್ರಯೋಜವಿಲ್ಲ. ಸರ್ಕಾರ ಎರಡು ಕಂತುಗಳ ಹಣವನ್ನು ಇನ್ನೂ ಹಾಕಿಲ್ಲ. ಎರಡು ತಿಂಗಳಿಂದ ಹಣ ಹಾಕದ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅನೇಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ನಾವು ಓಟು ಹಾಕಿ ಕಾಂಗ್ರೆಸ್‌ ಸರ್ಕಾರವನ್ನು ಗೆಲ್ಲಿಸಿದ್ದು ವಿಧಾನಸಭಾ ಚುನಾವಣೆಯಲ್ಲಿ, ಲೋಕಸಭಾ ಚುನಾವಣೆಯಲ್ಲಿ ಅಲ್ಲ. ಹೀಗಾಗಿ ನಮಗೆ ಸರ್ಕಾರದ ಯೋಜನೆಯ ಲಾಭ ಬೇಕೇಬೇಕು. ಕೂಡಲೇ ಗೃಹಲಕ್ಷ್ಮಿ ಹಣ (Gruha Lakshmi) Scheme ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Advertisement
Advertisement
Advertisement