Gruha Lakshmi Scheme: ಮಹಿಳೆಯರೇ ಗಮನಿಸಿ! ಆಗಸ್ಟ್ ತಿಂಗಳ ಈ ದಿನ ಖಾತೆಗೆ ಬರಲಿದೆ ₹4,000; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Gruha Lakshmi Scheme: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಇದೀಗ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ₹2,000 ಜಮಾ ಮಾಡಲಾಗುತ್ತದೆ. ಸದ್ಯ ಮೇ ತಿಂಗಳಿನವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗಿದೆ. ನಂತರ ಕಾರಣಾಂತರಗಳಿಂದ ಜೂನ್ & ಜುಲೈ ತಿಂಗಳ ಹಣ ಪಾವತಿಯಾಗಿಲ್ಲ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ ಬಳಿಕ ಜಾರಿಗೆ ಬಂದ ಈ ಯೋಜನೆ ಲೋಕಸಭಾ ಚುನಾವಣೆವರೆಗೂ ಚೆನ್ನಾಗಿಯೇ ಜಾರಿಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಹೀಗಾಗಿ ಕೋಟ್ಯಂತರ ಮಹಿಳೆಯರಿಗೆ ಆತಂಕ ಉಂಟಾಗಿದ್ದು,ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ತಲುಪದ ಕಾರಣ ಯಾವಾಗ ಹಣ ಬರುತ್ತದೆ ಅಂತಾ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Scheme) ಯಾವಾಗ ಬರುತ್ತದೆ ಅಂತಾ ಕಾಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಗ್ಗೆ ಸ್ವತಃ ಸರ್ಕಾರವೇ ಈ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದು, ಜೂನ್ ಮತ್ತು ಜುಲೈ ತಿಂಗಳ 2 ತಿಂಗಳ ಕಂತಿನ ಹಣವನ್ನು ಒಟ್ಟಿಗೆ ₹4,000 ವನ್ನು ಇದೇ ಆಗಸ್ಟ್ ಮೊದಲ ವಾರದಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಯಾಗಿಲ್ಲ. ಈ ಬಾಕಿ ಮೊತ್ತವನ್ನು ಆಗಸ್ಟ್ ಮೊದಲ ವಾರದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ನಮ್ಮ ಸರ್ಕಾರವು ಬದ್ಧವಾಗಿದೆ. ಮಹಿಳೆಯರು ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಶೀಘ್ರವೇ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ 4,000 ರೂ. ಹಣ ಜಮಾ ಆಗಲಿದೆ ಎಂದಿದ್ದಾರೆ.
Harsha Sai: ಬಡವರಿಗೆ ಕಂತೆ ಕಂತೆ ಹಣ ದಾನ ಮಾಡೋ ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟು ಗೊತ್ತೆ..?