D K Shivkumar: ಗೃಹಲಕ್ಷ್ಮೀ ದುಡ್ಡಿನ ಕುರಿತು ಪಬ್ಲಿಕ್ ಅಲ್ಲೇ ಡಿಕೆಶಿ ಗೆ ಮುಜುಗರ ತಂದ ಪೌರಕಾರ್ಮಿಕ ಮಹಿಳೆ !! ವೈರಲ್ ಆಯ್ತು ವಿಡಿಯೋ
D K Shivkumar : ಪೌರಕಾರ್ಮಿಕರ ಸಮಸ್ಯೆಯನ್ನು ಆಲಿಸುವಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್(DK Shivkumar)ಅವರಿಗೆ ಪೌರಕಾರ್ಮಿಕ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಅವಮಾನ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ(BBMP) ಪೌರಕಾರ್ಮಿಕರು ಡಿಕೆ ಶಿವಕುಮಾರ್ ಅವರಿಗೆ ತಮ್ಮ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಾ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಈ ವೇಳೆ ಅವರು ತಮ್ಮ ಬೇಡಿಕೆಯನ್ನು ಮುಂದಿಡುತ್ತಾ ಪೌರಕಾರ್ಮಿಕ ರನ್ನು ಖಾಯಂ ಮಾಡಿಕೊಳ್ಳಿರೆಂದು ಮನವಿ ಮಾಡುತ್ತಾರೆ. ಆಗ ಡಿಕೆಶಿ ಅವರು ಈಗಾಗಲೇ ಗೃಹಲಕ್ಷ್ಮೀ(Gruhalakshmi) ದುಡ್ಡು ಎಂದು ಮಹಿಳೆಯರಿಗೆ ತಿಂಗಳಿಗೆ 2,000 ಕೊಡುತ್ತಿದ್ದೇವೆ. ಫ್ರೀ ಬಸ್ ಮಾಡಿದ್ದೇವೆ ಎಂದು ಹೇಳುತ್ತಾರೆ. ಆಗ ಪಕ್ಕದಲೇ ನಿಂತಿದ್ದು ಪೌರಕಾರ್ಮಿಕ ಮಹಿಳೆ 'ಎಲ್ಲಿ ಸಾರ್ ಯಾವ ದುಡ್ಡು ಬರ್ತಿಲ್ಲ' ಎಂದು ಮಧ್ಯ ಮಾತನಾಡುತ್ತಾರೆ.
ಆಗ ಡಿಕೆಶಿ ಅವರು ಏ.. ಏನು ಹೇಳ್ತೀಯಮ್ಮಾ ಎಂದು ಮಹಿಳೆ ಕಡೆ ಶಾಕ್ ಆಗಿ ನೋಡುತ್ತಾ ಯಾರಿಗೆ ಬರ್ತಿಲ್ಲಾ.. ಎಲ್ಲರಿಗೂ ಬರ್ತಿದೆ ಅನ್ನುತ್ತಾರೆ. ಅಷ್ಟರಲ್ಲಿ ಪಕ್ಕದಲ್ಲಿದ್ದ ಉಳಿದ ಕಾರ್ಮಿಕರೆಲ್ಲರು ಹಾಗೆ ಮಾತಾಡಬೇಡಮ್ಮೋ, ಸರ್ಕಾರ ಎಲ್ಲಾ 5 ಘೋಷಣೆ ಜಾರಿಗೆ ತಂದಿದೆ ಎಂದು ಹೇಳಿ ಕಿರುಚಾಡುತ್ತಾರೆ. ಆಗ ಆ ಮಹಿಳೆ ಸುಮ್ಮನಾಗುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಅಡಿ ಈಗಾಗಲೇ ಹಲವಾರು ಮಹಿಳೆಯರಿಗೆ ನಾಲ್ಕು ಕಂತಿನ ರೂಪದಲ್ಲಿ 2000 ಹಣ ದೊರಕಿದೆ. ಆದರೆ ಕೆಲವು ಮಹಿಳೆಯರಿಗೆ ಈ ಹಣ ಸಿಕ್ಕಿಲ್ಲ ಎಂದು ಅಪವಾದಗಳು ಕೇಳಿ ಬರುತ್ತಿದೆ. ಮಾಧ್ಯಮಗಳಲ್ಲಿಯೂ ಕೂಡ ನಾವು ಈ ಕುರಿತಂತೆ ಪ್ರತಿಕ್ರಿಯೆಗಳನ್ನು ನೋಡಬಹುದು. ಹಲವಾರು ಮಹಿಳೆಯರು ನಮಗೆ ಹಣ ಬಂದಿಲ್ಲ, ಯಾರಿಗೆ ಸಿಗುತ್ತದೆ ಗೊತ್ತಿಲ್ಲ, ಸರ್ಕಾರ ಸುಳ್ಳು ಆಶ್ವಾಸನೆ ನೀಡಿದೆ ಎಂದು ಮಾತನಾಡುವುದನ್ನು ಗಮನಿಸಬಹುದು. ಇದೀಗ ಪೌರಕಾರ್ಮಿಕ ಮಹಿಳೆಯು ಧೈರ್ಯ ಮಾಡಿ ಡಿಕೆಶಿ ಅವರಲ್ಲಿ ಈ ಬಗ್ಗೆ ದೂರಿದ್ದಾರೆ.
https://www.instagram.com/reel/CyDpFW4OlsH/?igshid=MTc4MmM1YmI2Ng==