ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KSRTC ಕಡೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ !!

KSRTC: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ KSRTC ಸಂಸ್ಥೆಯು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಶೀಘ್,ದಲ್ಲೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ ಓಡಾಟಕ್ಕೆ ಅನಾನುಕೂಲವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.
02:54 PM Jun 26, 2024 IST | ಸುದರ್ಶನ್
UpdateAt: 02:54 PM Jun 26, 2024 IST
Advertisement

KSRTC: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ KSRTC ಸಂಸ್ಥೆಯು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಶೀಘ್,ದಲ್ಲೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ ಓಡಾಟಕ್ಕೆ ಅನಾನುಕೂಲವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.

Advertisement

Renukaswamy: 17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ; ಇಮೇಲ್‌ ಶೋಧ

Advertisement

ಹೌದು, ಸಮಯಕ್ಕೆ ಸರಿಯಾಗಿ ಬಸ್ ಬಾರದೇ ಇರುವುದು, ಬಂದರೂ ಚಾಲಕರು ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋಗುವುದು ಹಾಗೂ ರಾಜ್ಯ ಸರ್ಕಾರದ ಶಕ್ತಿ ಯೋಜನೆ(Shakthi Yojane)ಯಿಂದ ಬಸ್ ತುಂಬಿ ತುಳುಕುತ್ತಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಸರಿಯಾಗಿ ತರಗತಿಗಳಿಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ಇದನ್ನು ಗಮನದಲ್ಲಿರಿಸಿಕೊಂಡು KSRTC ಸಂಸ್ಥೆಯು ಬೇಡಿಕೆ ಹೆಚ್ಚಿರುವ ಕೆಲವು ಮಾರ್ಗಗಳಲ್ಲಿ ಪೀಕ್ ಅವರ್​ನಲ್ಲಿ ಈಗಾಗಲೇ ಹೆಚ್ಚುವರಿ ಬಸ್​ಗಳನ್ನು ಬಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್​​ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುವುದು ಎಂದು ತಿಳಿಸಿದೆ.

ಅಂದಹಾಗೆ ಇತ್ತೀಚೆಗೆ ವಿದ್ಯಾರ್ಥಿಗಳು ಪ್ರಾಣವನ್ನು ಪಣಕ್ಕಿಟ್ಟು ಕಿಕ್ಕಿರಿದು ತುಂಬಿದ ಬಸ್‌ಗಳ ಹಿಂದೆ ಓಡುವ ಹಾಗೂ ಫುಟ್‌ಬೋರ್ಡ್​​ನಲ್ಲಿ ನಿಂತು ಪ್ರಯಾಣಿಸುವ ಕೆಲವು ವೀಡಿಯೊಗಳು ವೈರಲ್ ಆದ ನಂತರ ಕೆಎಸ್‌ಆರ್‌ಟಿಸಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ ಶಕ್ತಿ ಯೋಜನೆ ವಿರುದ್ಧ ವಿದ್ಯಾರ್ಥಿಗಳೇ ಪ್ರತಿಭಟನೆಗೆ ಇಳಿದು ನಮಗೆ ಬೇರೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಇದೀಗ ಸಂಸ್ಥೆಯು ಈ ಮಹತ್ತರ ನಿರ್ಧಾರ ಕೈಗೊಂಡಿದೆ.

Chanappattana By Election: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು?!

Advertisement
Advertisement