For the best experience, open
https://m.hosakannada.com
on your mobile browser.
Advertisement

Virat Kohli: ಕೊಹ್ಲಿ ಮೊಬೈಲ್ ವಾಲ್'ಪೇಪರ್ ನಲ್ಲಿ ಇರೋ ಆ ತಾತ ಯಾರು? ಹೆಂಡತಿ, ಮಗಳ ಫೋಟೋ ಬಿಟ್ಟು ಅವರ ಫೋಟೋ ಸೆಟ್ ಮಾಡಿದ್ಯಾಕೆ?

Virat Kohli: ಭಾರತ ಕ್ರಿಕೆಟ್ ಲೋಕದ ದೃವ ತಾರೆ ವಿರಾಟ್ ಕೊಹ್ಲಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನದಿಂದ ಅವರನ್ನು ಅನುಸರಿಸುವವರೂ ಅನೇಕ ಮಂದಿ ಇದ್ದಾರೆ.
03:22 PM Jul 13, 2024 IST | ಸುದರ್ಶನ್
UpdateAt: 03:22 PM Jul 13, 2024 IST
virat kohli  ಕೊಹ್ಲಿ ಮೊಬೈಲ್ ವಾಲ್ ಪೇಪರ್ ನಲ್ಲಿ ಇರೋ ಆ ತಾತ ಯಾರು  ಹೆಂಡತಿ  ಮಗಳ ಫೋಟೋ ಬಿಟ್ಟು ಅವರ ಫೋಟೋ ಸೆಟ್ ಮಾಡಿದ್ಯಾಕೆ
Advertisement

Virat Kohli: ಭಾರತ ಕ್ರಿಕೆಟ್ ಲೋಕದ ದೃವ ತಾರೆ ವಿರಾಟ್ ಕೊಹ್ಲಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನದಿಂದ ಅವರನ್ನು ಅನುಸರಿಸುವವರೂ ಅನೇಕ ಮಂದಿ ಇದ್ದಾರೆ. ಅನುಸರಣೆಯೊಂದಿಗೆ ಕೆಲವರಿಗೆ ಕುತೂಹಲ ಕೂಡ ಇರುವುದುಂಟು. ಅವರು ಹಾಕೋ ಬಟ್ಟೆ ಯಾವುದು, ಬಳಸೋ ಪರ್ಫೀಮ್ ಯಾವುದು, ಇಷ್ಟವಾದ ಬ್ರಾಂಡ್ ಯಾವುದು ಎಂದು. ಹೀಗೆ ಹಲವು ವಿಷಯಗಳ ಮೇಲೆ ಕುತೂಹಲ ಇದ್ದೇ ಇರುತ್ತದೆ. ಅಂತೆಯೇ ಇದೀಗ ಕೆಲವು ಕೊಹ್ಲಿ ಮೊಬೈಲ್ ವಾಲ್ ಪೇಪರ್(Mobile Wallpaper)ಮೇಲೆ ಕಣ್ಣಿಟ್ಟಿದ್ದಾರೆ.

Advertisement

ಹೌದು, ವಿರಾಟ್ ಕೊಹ್ಲಿ(Virat Kolhi) ಮೊಬೈಲ್ ವಾಲ್ ಪೇಪರ್ ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ವಾಲ್ ಪೇಪರ್ ಅಂದ್ರೆ ಹೆಂಡತಿ, ಮಗು, ಕುಟುಂಬ, ದೇವರು ಅಥವಾ ನೇಚರ್ ನ ಯಾವುದಾದರೂ ಫೋಟೋ ಇಟ್ಟುಕೊಳ್ಳುವುದು ಸಹಜ. ಆದರೆ ಕೊಹ್ಲಿ ಮಾತ್ರ ಒಬ್ಬ ತಾತನ ಫೋಟೋ ಇಟ್ಟುಕೊಂಡಿದ್ದಾರೆ. ಅದು ಕೂಡ ಯಾವುದೇ ರೀತಿ ಸಂಬಂಧವೇ ಇಲ್ಲದ ತಾತನ ಫೋಟೋ. ಯಾರು ಈ ತಾತ? ಈ ಪ್ರಶ್ನೆ ಜಾಡು ಹಿಡಿದು ಹೋದರೆ ಅವರು ಒಬ್ಬ ಅವಧೂತ, ದೇವ ಮಾನವರಾದ ನೀಮ್‌ ಕರೋಲಿ ಬಾಬಾ(Nim Karoli Baba) ಎಂದು ತಿಳಿದುಬರುತ್ತದೆ. ಹಾಗಿದ್ರೆ ಯಾರು ಇವರು? ಕೊಹ್ಲಿ ಇವರನ್ನು ಅಷ್ಟು ಇಷ್ಟಪಡುವುದೇಕೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ನೀಮ್‌ ಕರೋಲಿ ಬಾಬಾ ಯಾರು?
ಮಹಾರಾಜ್ ಜಿ ಎಂದೂ ಕರೆಯಿಸಿಕೊಳ್ಳುವ ನೀಮ್‌ ಕರೋಲಿ ಬಾಬಾ ಅವರು ಓರ್ವ ಹಿಂದೂ ಗುರು. ಇವರು ಹನುಮಂತನ ಭಕ್ತರಾಗಿದ್ದರು. ಭಕ್ತಿ ಯೋಗದ ಪ್ರವೀಣರಾಗಿದ್ದರು. ಇವರ ಮೂಲ ಹೆಸರು ಲಕ್ಷ್ಮಣ್ ನಾರಾಯಣ ಶರ್ಮಾ ಎಂದು. ನಂತರ ತಮ್ಮ 14 ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ನಂತರ, ಸಾಧು ಜೀವನವನ್ನು ನಡೆಸಲು ತಮ್ಮ ಬ್ರಾಹ್ಮಣ ಕುಟುಂಬವನ್ನೇ ತೊರೆದರು. ಆದರೂ ತಂದೆಯ ಒತ್ತಾಸೆಯಿಂದ ಮನೆಗೆ ಮರಳಿದರು.

Advertisement

ಆದರೆ ಮತ್ತೆ ಮನೆ ಬಿಟ್ಟು ಹೀಗೆ ಅಲೆದಾಡುವ ಸಂತನಾಗಿ ಅವರ ಪ್ರಯಾಣ ಪ್ರಾರಂಭವಾಯಿತು. ಹೀಗೆ ಕ್ರಮೇಣ ಅವರು ಗುರುಗಳಾಗಿ ಅಪಾರ ಜನಪ್ರೀಯತೆ ಗಳಿಸಿದರು. ನಂತರ ಅವರು ತಮ್ಮ ಆಶ್ರಮದಲ್ಲಿ ನೆಲೆಸಿದರು, ಹನುಮಾನ್ ದೇವಾಲಯವನ್ನು ನಿರ್ಮಿಸಿದರು. ನಂತರದಲ್ಲಿ ಅನಾರೋಗ್ಯದಿಂದ 1973 ರಂದು ವೃಂದಾವನದ ಆಸ್ಪತ್ರೆಯಲ್ಲಿ ನಿಧನರಾದರು.

ಭೇಟಿ ನೀಡ್ತಾರೆ ಅನೇಕ ಸೆಲೆಬ್ರಿಟಿಗಳು :
ಬಾಬಾ ನೀಮ್ ಕರೋಲಿ ಅವರು 1960 ಮತ್ತು 70 ರ ದಶಕಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದರು. ಈ ಸಮಯದಲ್ಲಿ ಭಾರತಕ್ಕೆ ಪ್ರಯಾಣಿಸಿದ ಹಲವಾರು ಅಮೇರಿಕನ್ನರ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರಲ್ಲಿ ಆಧ್ಯಾತ್ಮಿಕ ಗುರುಗಳಾದ ರಾಮ್ ದಾಸ್ ಮತ್ತು ಭಗವಾನ್ ದಾಸ್ ಮತ್ತು ಸಂಗೀತಗಾರರಾದ ಕೃಷ್ಣ ದಾಸ್ ಮತ್ತು ಜೈ ಉತ್ತಲ್ ಪ್ರಮುಖರು. ಅಲ್ಲದೆ ವಿಶ್ವದಾದ್ಯಂತ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಕೊಹ್ಲಿ ಕೂಡ ಈ ಬಾಬನ ಭಕ್ತ.

Snake Bite: ಪ್ರತಿ ಶನಿವಾರ ಹಾವು ಕಚ್ಚುತ್ತೆ ಈತನಿಗೆ; ಭವಿಷ್ಯದಲ್ಲಿದೆ ಒಂದು ವಿಶೇಷ ಅಚ್ಚರಿ

Advertisement
Advertisement
Advertisement