For the best experience, open
https://m.hosakannada.com
on your mobile browser.
Advertisement

Good News for Gram Panchayat Employees: ಗ್ರಾಮ ಪಂಚಾಯಿತಿ ಸಿಬ್ಬಂದಿಗಳೇ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ !!

02:47 PM Dec 02, 2023 IST | ಕಾವ್ಯ ವಾಣಿ
UpdateAt: 02:47 PM Dec 02, 2023 IST
good news for gram panchayat employees  ಗ್ರಾಮ ಪಂಚಾಯಿತಿ ಸಿಬ್ಬಂದಿಗಳೇ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ
Image source: Oneindia kannada
Advertisement

Good News for Gram Panchayat Employees: ಗ್ರಾಮ ಪಂಚಾಯತ್ ಗೆ ಸಂಬಂಧ ಪಟ್ಟ ನಿರ್ದೇಶಕರು (ಆಡಳಿತ-1) ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಿಹಿಸುದ್ದಿ ನೀಡಿದೆGood (News for Gram Panchayat Employees). ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಒಂದು ಬಾರಿಗೆ ಜಿಲ್ಲಾ ಪಂಚಾಯಿತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಆದೇಶಿಸಿದೆ.

Advertisement

ಹೌದು, ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ವಿವಿಧ ಸಂಘಗಳೊಂದಿಗೆ ಸದರಿ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಬೇಡಿಕೆಗಳ ಕುರಿತು ಸಭೆಯನ್ನು ದಿನಾಂಕ 21/07/2023ರಂದು ನಡೆಸಲಾಗಿತ್ತು.

ಸಭೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಿಲ್ಲಾ ಪಂಚಾಯತಿ ಅನುಮೋದನೆಯಾಗದೇ ಅಭದ್ರತೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ವಿದ್ಯಾರ್ಹತೆ ಹೊರತುಪಡಿಸಿ, ಅದರಲ್ಲೂ ಜವಾನ, ಸ್ವಚ್ಛತಾಗಾರರು, ನೀರುಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ಸಭಾನಡವಳಿ, ವೇತನ ಪಾವತಿ, ಹಾಜರಾತಿ ಆಧಾರದಲ್ಲಿ ಒಂದು ಬಾರಿಗೆ ಅನುಮೋದನೆ ನೀಡಬೇಕಾಗಿ ಕೋರಿದ್ದು, ಅದರಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸದರಿ ಸಿಬ್ಬಂದಿಗೆ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ, ಅನುಮೋದನೆಗಾಗಿ ಬಾಕಿ ಇರುವುದು ಕಂಡುಬಂದಿರುತ್ತದೆ.

Advertisement

ಆದ್ದರಿಂದ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಗೆ ಬಾಕಿ ಇರುವ ಮೇಲಿನ ಒಟ್ಟು 11,170 ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊರತು ಪಡಿಸಿ ಒಂದು ಬಾರಿಗೆ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ನೀಡಲು ಸರ್ಕಾರವು ತೀರ್ಮಾನಿಸಿರುತ್ತದೆ. ಅದರಂತೆ ಈ ಆದೇಶ ಹೊರಡಿಸಲಾಗಿದೆ.

ಆದೇಶ ಪ್ರಕಾರ, ದಿನಾಂಕ 31/10/2017ರ ಪೂರ್ವದಲ್ಲಿ ಗ್ರಾಮ ಪಂಚಾಯತಿಯಿಂದ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ವಾಟರ್ ಆಪರೇಟರ್, ಅಟೆಂಡರ್ ಹಾಗೂ ಸ್ವಚ್ಛತಾಗಾರರಿಗೆ, ಸಭಾನಡವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಒಂದು ಬಾರಿಗೆ ಜಿಲ್ಲಾ ಪಂಚಾಯತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಆದೇಶಿಸಿದೆ ಎಂದು ಆದೇಶ ನೀಡಲಾಗಿದೆ .

ಇದನ್ನೂ ಓದಿ: LIC ಯಿಂದ ಪರಿಚಯಿಸಲ್ಪಟ್ಟಿದೆ ಹೊಸ ಪಾಲಿಸಿ ಸ್ಕೀಮ್ ?! ಅಬ್ಬಬ್ಬಾ.. ಹೂಡಿಕೆ ಮಾಡಿದ್ರೆ ಇಷ್ಟೆಲ್ಲಾ ಲಾಭ ಉಂಟಾ?!

Advertisement
Advertisement
Advertisement