For the best experience, open
https://m.hosakannada.com
on your mobile browser.
Advertisement

Government Rules: LKG, UKG, 1ನೇ ತರಗತಿ ದಾಖಲಾತಿಗೆ ಈ ರೂಲ್ಸ್ ಕಡ್ಡಾಯ

Government Rules: LKG, UKG ಮತ್ತು 1ನೇ ತರಗತಿಗೆ ಮಕ್ಕಳ ಶಾಲಾ ಪ್ರವೇಶದ ದಾಖಲಾತಿಗೆ ಅರ್ಹ ಗರಿಷ್ಟ ವಯೋಮಾನವನ್ನು ಪರಿಷ್ಕರಿಸುವುದರ ಬಗ್ಗೆ ಇತ್ತೀಚೆಗೆ ಸರ್ಕಾರವು ಸುತ್ತೋಲೆಯನ್ನು ಹೊರಡಿಸಲಾಗಿದೆ.
09:34 AM Jul 11, 2024 IST | ಕಾವ್ಯ ವಾಣಿ
UpdateAt: 09:34 AM Jul 11, 2024 IST
government rules  lkg  ukg  1ನೇ ತರಗತಿ ದಾಖಲಾತಿಗೆ ಈ ರೂಲ್ಸ್ ಕಡ್ಡಾಯ
Advertisement

Government Rules: ಪೋಷಕರು ಇನ್ಮುಂದೆ ತಮ್ಮ ಮಕ್ಕಳನ್ನು ಶಾಲೆಗೆ ಪ್ರವೇಶ ದಾಖಲಾತಿ ಮಾಡಲು ಇನ್ನುಮುಂದೆ ವಯಸ್ಸಿನ ಅಂತರ ಹೆಚ್ಚು ಕಮ್ಮಿ ಇರಬಾರದು. ಮುಖ್ಯವಾಗಿ ಮಕ್ಕಳ ಶಾಲಾ ದಾಖಲಾತಿಗೆ ಅರ್ಹ ಗರಿಷ್ಟ ವಯೋಮಾನವನ್ನು ಪರಿಷ್ಕರಣೆ ಮಾಡಲಾಗಿದೆ. ಹೌದು, LKG, UKG ಮತ್ತು 1ನೇ ತರಗತಿಗೆ ಮಕ್ಕಳ ಶಾಲಾ ಪ್ರವೇಶದ ದಾಖಲಾತಿಗೆ ಅರ್ಹ ಗರಿಷ್ಟ ವಯೋಮಾನವನ್ನು ಪರಿಷ್ಕರಿಸುವುದರ ಬಗ್ಗೆ ಇತ್ತೀಚೆಗೆ ಸರ್ಕಾರವು ಸುತ್ತೋಲೆಯನ್ನು ಹೊರಡಿಸಲಾಗಿದೆ.

Advertisement

ಈಗಾಗಲೇ ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷ ಪೂರ್ಣಗೊಂಡಿರುವಂತಹ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗಧಿಪಡಿಸಲಾಗಿರುತ್ತದೆ.

ಕ್ರಮಾಂಕ (2)ರಲ್ಲಿ ಸರ್ಕಾರದ ಆದೇಶದ (Government Rules) ಸಂಖ್ಯೆ:ಇಪಿ 260 ಪಿಜಿಸಿ 2021, ದಿನಾಂಕ:26.07.2022ರ ಆದೇಶದಲ್ಲಿ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷ ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲು ಮಾಡಲು ವಯೋಮಿತಿಯನ್ನು ನಿಗಧಿಪಡಿಸಲಾಗಿರುವುದನ್ನು 2025-26ನೇ ಶೈಕ್ಷಣಿಕವಾದ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿಯನ್ನು ಮಾಡಿ ಆದೇಶಿಸಲಾಗಿರುತ್ತದೆ.

Advertisement

ಇನ್ನು ಕ್ರಮಾಂಕ (3)ರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರದಲ್ಲಿ LKG, UKG ಮತ್ತು 01ನೇ ತರಗತಿಯ ಪ್ರವೇಶಕ್ಕೆ ಈಗಾಗಲೇ ದಾಖಲಾತಿಗೆ ಕನಿಷ್ಟವಾದ ಅರ್ಹ ವಯೋಮಾನವನ್ನು ಪರಿಷ್ಕರಿಸಿ ನಿಗಧಿಪಡಿಸಲಾಗಿದೆ. ಅದರೆ ಗರಿಷ್ಟವಾದ ವಯೋಮಾನಗಳನ್ನು ಪರಿಷ್ಕರಿಸಿರುವುದಿಲ್ಲ.

ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸುವುದರಿಂದ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯನ್ನು ಕೂಡ ತಗ್ಗಿಸಬಹುದಾಗಿರುವುದರಿಂದ LKG, UKG ಮತ್ತು 01ನೇ ತರಗತಿಗಳಿಗೆ ಈಗಾಗಲೇ ಮಕ್ಕಳ ದಾಖಲಾತಿಗಾಗಿ ಕನಿಷ್ಠವಾದ ವಯೋಮಿತಿಯನ್ನು ಪರಿಷ್ಕರಿಸಿ ನಿಗಧಿಯನ್ನು ಪಡಿಸಿರುವಂತೆ ಗರಿಷ್ಠವಾದ ವಯೋಮಾನದ ಮಾನದಂಡವನ್ನು ಸಡಿಲಿಸಿ ಪರಿಷ್ಕರಿಸುವ ಅಗತ್ಯವಿದ್ದು, ಈ ಕೆಳಗಿನಂತೆ ಪರಿಷ್ಕರಿಸಲು ಕೋರಿರುತ್ತಾರೆ.

BPL Card: ಬಿಪಿಎಲ್‌ ಕಾರ್ಡ್‌ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ; ಅರ್ಜಿ ಸಲ್ಲಿಸಲು ಇಲಾಖೆ ಒಪ್ಪಿಗೆ

Advertisement
Advertisement
Advertisement