For the best experience, open
https://m.hosakannada.com
on your mobile browser.
Advertisement

Government Jobs: ನಿರುದ್ಯೋಗಿಗಳೇ ಒಮ್ಮೆ ಇತ್ತ ಕಣ್ಣು ಹಾಯಿಸಿ; ಬರೋಬ್ಬರಿ 5151 ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!!

02:08 PM Jan 12, 2024 IST | ಹೊಸ ಕನ್ನಡ
UpdateAt: 02:38 PM Jan 12, 2024 IST
government jobs  ನಿರುದ್ಯೋಗಿಗಳೇ ಒಮ್ಮೆ ಇತ್ತ ಕಣ್ಣು ಹಾಯಿಸಿ  ಬರೋಬ್ಬರಿ 5151 ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Government Jobs: ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 5,151 ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ಹುದ್ದೆಗಳಿಗೆ ನೇರನೇಮಕಾತಿಯಡಿ ಭರ್ತಿಗೆ ಶೀಘ್ರ ಅಧಿಸೂಚನೆ ಹೊರಬೀಳಲಿದೆ ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ. ಇದರಲ್ಲಿ BMTC ಯಲ್ಲಿ 2500 ಹುದ್ದೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1737 ನಿರ್ವಾಹಕ ಹುದ್ದೆ ಸೇರಿದೆ.

Advertisement

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಹಾಯಕ ಆಡಳಿತಾಧಿಕಾರಿ, ಉಗ್ರಾಣಾಧಿಕಾರಿ ಸೇರಿ ವಿವಿಧ 23 ಹುದ್ದೆಗಳು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 500 ತಾಂತ್ರಿಕ ಸಹಾಯಕ (ದರ್ಜೆ -ಎ) ಹುದ್ದೆಗಳು ಸೇರಿದಂತೆ ಒಟ್ಟು 727 ಹುದ್ದೆಗಳು, ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ.ನಲ್ಲಿ ಖಾಲಿ ಇರುವ ವಿವಿಧ 38 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1737 ನಿರ್ವಾಹಕ, 15 ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಜಿಲ್ಲೆಯ ಮಠ ಮಂದಿರಗಳ 'ಕೈ' ಹಿಡಿಯುವುದೇ ರಾಜ್ಯ ಸರ್ಕಾರ!? ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಶೀಘ್ರ ಬಿಡುಗಡೆಯತ್ತ ಬೇಕಿದೆ ಕರಾವಳಿಯ ಕೈ ನಾಯಕರ ಶ್ರಮ

Advertisement

ಸುವರ್ಣ ನ್ಯೂಸ್‌ ವರದಿ ಮಾಡಿದ ಪ್ರಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 50 ಸಹಾಯಕ ಎಂಜಿನಿಯ‌ರ್ (ಸಿವಿಲ್) ಹುದ್ದೆ, 14 ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ -ಸಿ) ಹುದ್ದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ, ತಲಾ ಒಂದು ಸಹಾಯಕ ಲೆಕ್ಕಿಗ, ಸ್ಟಾಫ್ ನರ್ಸ್, ಮಾರ್ಪಸಿಸ್ಟ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಒಬ್ಬ ಸಹಾಯಕ ಗ್ರಂಥಪಾಲಕ, ಓರ್ವ ಸಹಾಯಕ ಎಂಜಿನಿಯರ್, 5 ಜೂನಿಯರ್ ಪ್ರೋಗ್ರಾಮರ್, 12 ಸಹಾಯಕ, 25 ಹಿರಿಯ ಸಹಾಯಕ ಹುದ್ದೆಗಳು ಎಂದು ವರದಿಯಾಗಿದೆ.

Advertisement
Advertisement
Advertisement