Police Constable: 454 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಭರ್ತಿ- ಲಿಖಿತ ಪರೀಕ್ಷೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ !!
Police Constable: ಕಲ್ಯಾಣ ಕರ್ನಾಟಕ ವೃಂದದ 454 ಸಿಪಿಸಿ ಹುದ್ದೆಗಳ ಲಿಖಿತ ಪರೀಕ್ಷೆ ಕೇಂದ್ರಗಳ ಕುರಿತು ಮಹತ್ವದ ಸೂಚನೆ ಒಂದನ್ನು ನೀಡಲಾಗಿದೆ. ಹೌದು, ಕರ್ನಾಟಕ ಪೊಲೀಸ್ ಇಲಾಖೆಯು ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ (Police Constable) (ಪುರುಷ ಮತ್ತು ಮಹಿಳಾ) & (ತೃತೀಯಲಿಂಗ ಪುರುಷ & ಮಹಿಳಾ) ಹಾಗೂ ಸೇವಾನಿರತ & ಬ್ಯಾಕ್‌ಲಾಗ್ - 454 ಖಾಲಿ ಹುದ್ದೆಗಳ ನೇರ ನೇಮಕಾತಿ ಸಂಬಂಧ, ಇದೀಗ ಲಿಖಿತ ಪರೀಕ್ಷೆ ಕೇಂದ್ರದ ಕುರಿತು ಕೆಲವು ಸೂಚನೆ ಬಿಡುಗಡೆ ಮಾಡಲಾಗಿದೆ.
454 ಸಿಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಘಟಕ / ಜಿಲ್ಲೆಯ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ SMS ಕಳುಹಿಸಲಾಗಿದೆ. ಒಂದು ವೇಳೆ ಈ ಎಸ್‌ಎಂಎಸ್ ಸ್ವೀಕರಿಸದ ಅಭ್ಯರ್ಥಿಗಳು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, 'My Application' ಪೇಜ್‌ನಲ್ಲಿ ಲಾಗಿನ್ ಆಗುವ ಮೂಲಕ ಲಿಖಿತ ಪರೀಕ್ಷೆ ಘಟಕ / ಜಿಲ್ಲೆಯ ಮಾಹಿತಿಗಳನ್ನು ಚೆಕ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಪೊಲೀಸ್ ಇಲಾಖೆ ವೆಬ್‌ಸೈಟ್‌ನಲ್ಲಿ ಪರೀಕ್ಷೆ ಕೇಂದ್ರ, ಜಿಲ್ಲೆ ಚೆಕ್ ಮಾಡುವ ವಿಧಾನ:
- ಸಿಪಿಸಿ 454 ಕೆಕೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೆಎಸ್‌ಪಿ ವೆಬ್‌ಸೈಟ್ https://cpc454.ksp-recruitment.in/ ಗೆ ಭೇಟಿ ನೀಡಿ. ಓಪನ್ ಆದ ವೆಬ್‌ಪುಟದಲ್ಲಿ 'My Application' ಎಂದಿರುವಲ್ಲಿ ಕ್ಲಿಕ್ ಮಾಡಿ. ಮತ್ತೊಂದು ವೆಬ್‌ಪುಟ ತೆರೆಯುತ್ತದೆ. ಅಲ್ಲಿ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆದ ನಂತರ ಪರೀಕ್ಷೆ ಘಟಕ / ಜಿಲ್ಲೆ ಮಾಹಿತಿಗಳನ್ನು ಚೆಕ್ ಮಾಡಬಹುದಾಗಿದೆ.
ಮುಖ್ಯವಾಗಿ ಪೊಲೀಸ್ ಇಲಾಖೆಯು ಆಫ್‌ಲೈನ್ SMS ಕಳುಹಿಸಿರುವುದರಿಂದ ಹಲವು ಅಭ್ಯರ್ಥಿಗಳು ಚೆಕ್ ಮಾಡಿಕೊಂಡಿರುವುದಿಲ್ಲ. ಆದ್ದರಿಂದ ಈಗಾಗಲೇ ಪರೀಕ್ಷೆ ಕೇಂದ್ರದ ಕುರಿತು ಮೆಸೇಜ್ ಪಡೆದ ಅಭ್ಯರ್ಥಿಗಳು ಇತರ ತಮ್ಮ ಸಹ ಅಭ್ಯರ್ಥಿಗಳಿಗೆ ಮಾಹಿತಿ ತಿಳಿಸಿ.
ಕರ್ನಾಟಕ ಪೊಲೀಸ್ ಇಲಾಖೆಯು ಕಲ್ಯಾಣ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ -454 ಹುದ್ದೆಗಳಿಗೆ, ಶೀಘ್ರದಲ್ಲೇ ಪರೀಕ್ಷೆ ದಿನಾಂಕವನ್ನು ನಿರೀಕ್ಷಿಸಬಹುದಾಗಿದೆ.
ಕೆಲವು ಮೂಲಗಳ ಪ್ರಕಾರ, ಅಭ್ಯರ್ಥಿಗಳು ಡಿಸೆಂಬರ್ 7, 2023 ರಂದು ಪರೀಕ್ಷೆ ಕೇಂದ್ರ, ಪರೀಕ್ಷೆ ಪ್ರವೇಶ ಪತ್ರದ ಲಿಂಕ್ ಅನ್ನು ನಿರೀಕ್ಷಿಸಬಹುದು .
ಇದನ್ನೂ ಓದಿ: Karnataka Weather: ಮತ್ತೆ ರಜೆ ಹಾಕಿದ ಮಳೆರಾಯ - ಇನ್ಯಾವಾಗ ಪ್ರತ್ಯಕ್ಷ ಆಗ್ತಾನೆ ಗೊತ್ತಾ ?!