For the best experience, open
https://m.hosakannada.com
on your mobile browser.
Advertisement

Ration card: ಇನ್ಮುಂದೆ ಈ ಪಡಿತರ ಕಾರ್ಡ್'ಗಳಿಗೆ ಸಿಗೋದಿಲ್ಲ ಯಾವುದೇ ರೇಷನ್- ಹೊಸ ವರ್ಷಕ್ಕೆ ಹೊಸ ರೂಲ್ಸ್ ತಂದ ಸರ್ಕಾರ !!

02:03 PM Dec 18, 2023 IST | ಹೊಸ ಕನ್ನಡ
UpdateAt: 02:54 PM Dec 18, 2023 IST
ration card  ಇನ್ಮುಂದೆ ಈ ಪಡಿತರ ಕಾರ್ಡ್ ಗಳಿಗೆ ಸಿಗೋದಿಲ್ಲ ಯಾವುದೇ ರೇಷನ್  ಹೊಸ ವರ್ಷಕ್ಕೆ ಹೊಸ ರೂಲ್ಸ್ ತಂದ ಸರ್ಕಾರ
Advertisement

Ration card: ಆಹಾರ ಇಲಾಖೆಯು ಎಪಿಎಲ್ ಕಾರ್ಡ್(APL Card) ಹೊಂದಿರುವವರಿಗೆ ಇನ್ಮುಂದೆ ರೇಷನ್ ಕೊಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದು, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದೆ. ಈ ರೀತಿಯ ಮಹತ್ವದ ನಿರ್ಧಾರ ಕೈಗೊಳ್ಳಲು ಎಪಿಎಲ್ ಕಾರ್ಡ್ ದಾರರ ಉದಾಸೀನ, ನಿರಾಸಕ್ತಿಯೇ ಕಾರಣ ಎನ್ನಲಾಗಿದೆ.

Advertisement

ಸರ್ಕಾರವು ಜನಸಾಮಾನ್ಯರಿಗೆ ಎಪಿಎಲ್ ಹಾಗೂ ಬಿಪಿಎಲ್ ಎಂಬಂತೆ ರೀತಿ ಪಡಿತರ ಚೀಟಿಗಳನ್ನು(Ration card) ನೀಡಿದೆ. ಇದರಲ್ಲಿ ಬಡವರಿಗೆ, ಆರ್ಥಿಕ ಕೆನೆಪದರಕ್ಕಿಂತ ಕಡಿಮೆ ಆದಾಯ ಇರುವವರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡಿದರೆ, ಒಂದು ರೀತಿಯಲ್ಲಿ ಎಲ್ಲಾ ತರದ ಸವಲತ್ತು ಹೊಂದಿರುವವರಿಗೆ, ಆರ್ಥಿಕವಾಗಿ ಸಧೃಡವಾಗಿರುವವರಿಗೆ ಅಥವಾ ಸರ್ಕಾರಿ ನೌಕರರಿಗೆ ಎಪಿಎಲ್ ಕಾರ್ಡ್ ಗಳನ್ನು ನೀಡಿದೆ.

ಇದನ್ನು ಓದಿ: Halal Products: ಹಲಾಲ್ ಮಾಂಸ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?! ಕೇಂದ್ರ ಸಚಿವರಿಂದ ಅಚ್ಚರಿ ಸ್ಟೇಟ್ಮೆಂಟ್

Advertisement

BPL ಕಾರ್ಡ್ ಗಳಿಗೆ ಸರ್ಕಾರ ಅನ್ನಭಾಗ್ಯ(Anna bhagya)ದಡಿ ಉಚಿತ ರೇಷನ್ ಸೇರಿದಂತೆ ಹಲವಾರು ಉಚಿತವಾಗಿ ಸವಲತ್ತುಗಳನ್ನು ನೀಡುತ್ತಿದೆ. ಆದರೆ APL ದಾರರಿಗೂ ರೇಷನ್ ನೀಡುತ್ತಿದ್ದು ಅದಕ್ಕೆ ನಿಗದಿಪಡಿಸಿದಷ್ಟು ಹಣ ನೀಡಬೇಕಾಗುತ್ತದೆ. ಮತ್ತೆ ಇವರು ಎಲ್ಲಾ ರೀತಿಯಿಂದಲೂ ಅನುಕಕೂಲವಾಗಿರುವುದರಿಂದ ಹೆಚ್ಚಿನವರು ಸರ್ಕಾರದ ರೇಷನ್ ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ ಇವರ ನಿರಾಸಕ್ತಿಯಿಂದ ಸರ್ಕಾರಕ್ಕೂ ನಷ್ಟವಾಜುತ್ತಿದ್ದು, APL ಕಾರ್ಡ್ ಗಳಿಗೆಂದು ಮೀಸಲಿಟ್ಟ ರೇಷನ್ ಅನ್ನು ಅಂಗಡಿ ಮಾಲಿಕರು ಹೊರಗೆ ಖಾಸಗೀಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ APL ಕಾರ್ಡ್ ದಾರರಿಗೆ ನೀಡುತ್ತಿದ್ದ ರೇಷನ್ ಅನ್ನು ನಿಲ್ಲಿಸಲು, ಸಂಪೂರ್ಣವಾಗಿ ರದ್ಧುಮಾಡಲು ನಿರ್ಧರಿಸಿದೆ.

ಅಂದಹಾಗೆ ರಾಜ್ಯಾದ್ಯಂತ 24 ಲಕ್ಷ ಎಪಿಎಲ್ ಕಾರ್ಡ್​ಗಳಿದ್ದು, ಶೇ.80 ಕಾರ್ಡ್​ದಾರರು ಪ್ರತಿ ತಿಂಗಳು ರೇಷನ್ ಪಡೆಯುತ್ತಿಲ್ಲ. ಹೀಗಾಗಿ, ಇನ್ಮುಂದೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ರೇಷನ್​ಗಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಕಾರ್ಡ್ ಮಂಜೂರು ಮಾಡಲಾಗುತ್ತಿದೆ. ಹೀಗಾದರೆ ಗುರುತಿನ ಚೀಟಿಗಾಗಿ ಕಾರ್ಡ್ ಪಡೆಯುವವರಿಗೆ ರೇಷನ್ ಸಿಗುವುದಿಲ್ಲ. ಸದ್ಯದಲ್ಲೇ ಈ ಬಗ್ಗೆ ಮಹತ್ವದ ಆದೇಶ ಹೊರಬೀಳುವುದು.

ಇದನ್ನು ಓದಿ: Mask Rule: ಕೊರೊನಾ ಹೆಚ್ಚಳ - ರಾಜ್ಯದಲ್ಲಿನ್ನು ಮಾಸ್ಕ್ ಕಡ್ಡಾಯ !!

Advertisement
Advertisement
Advertisement