Ration Card: ರೇಷನ್ ಕಾರ್ಡ್'ಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ!!
Ration Card: ರೇಷನ್ ಕಾರ್ಡ ವಿಚಾರವಾಗಿ ಸರ್ಕಾರವು ಹಲವಾರು ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ APL ಹಾಗೂ BPL ಕಾರ್ಡ್ ಕುರಿತು ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಇದನ್ನೂ ಓದಿ: Bore Point: ತೆಂಗಿನಕಾಯಿಯಿಂದ ಅತಂರ್ಜಲ ಕಂಡು ಹಿಡಿಯಬಹುದಾ? ಇದು ವಿಜ್ಞಾನವೋ, ಇಲ್ಲ ಕಾಕತಾಳೀಯವೋ?
ಸರ್ಕಾರವು ಜನಸಾಮಾನ್ಯರಿಗೆ ಎಪಿಎಲ್ ಹಾಗೂ ಬಿಪಿಎಲ್ ಎಂಬಂತೆ ರೀತಿ ಪಡಿತರ ಚೀಟಿಗಳನ್ನು(Ration card) ನೀಡಿದೆ. ಇದರಲ್ಲಿ ಬಡವರಿಗೆ, ಆರ್ಥಿಕ ಕೆನೆಪದರಕ್ಕಿಂತ ಕಡಿಮೆ ಆದಾಯ ಇರುವವರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡಿದರೆ, ಒಂದು ರೀತಿಯಲ್ಲಿ ಎಲ್ಲಾ ತರದ ಸವಲತ್ತು ಹೊಂದಿರುವವರಿಗೆ, ಆರ್ಥಿಕವಾಗಿ ಸಧೃಡವಾಗಿರುವವರಿಗೆ ಅಥವಾ ಸರ್ಕಾರಿ ನೌಕರರಿಗೆ ಎಪಿಎಲ್ ಕಾರ್ಡ್ ಗಳನ್ನು ನೀಡಿದೆ. ಆದರೆ ಇದರಲ್ಲಿ ಲಾಕ್ಡೌನ್(Lock Down) ಸಂದರ್ಭದಿಂದ ಸರ್ಕಾರ ಪ್ರಾರಂಭಿಸಿದ ಉಚಿತ ಪಡಿತರವನ್ನು ಅನರ್ಹರು ಪಡೆಯುತ್ತಿದ್ದಾರೆ. ಹೀಗಾಗಿ ಇಂತವರಿಗೆ ಈ ರೀತಿ ಉಚಿತ ಪಡಿತರವನ್ನು ನೀಡುವುದನ್ನ ರದ್ದು ಮಾಡುವಂತಹ ಯೋಜನೆ ಕೂಡ ನಡೆಯುತ್ತಿದೆ.
ಇದನ್ನೂ ಓದಿ: HSRP ಕುರಿತು ಸಿಹಿ ಸುದ್ದಿ ಹಂಚಿಕೊಂಡ ಸಾರಿಗೆ ಇಲಾಖೆ!!
ಹೌದು, ಬೇಸರದ ವಿಚಾರ ಅಂದ್ರೆ ಅರ್ಹರಾಗಿಲ್ಲದೆ ಇದ್ದರೂ ಕೂಡ ಬಡತನದ ರೇಖೆಗಿಂತ ಮೇಲಿರುವವರು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿರುವ ಅಂತಹ ಸರ್ಕಾರ ಇಂತಹ ಅರ್ಹರಾಗಿಲ್ಲದೆ ಇರುವಂತಹ ವ್ಯಕ್ತಿಗಳ ಬಳಿ ಇರುವ ಬಿಪಿಎಲ್ ರೇಷನ್ ಕಾರ್ಡ್ ಅನ್ನು ರದ್ದು ಮಾಡುವಂತ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದೆ.
ಇವರಿಗಿಲ್ಲ BPL ಕಾರ್ಡ್!!
• ನೂರು ಚದರ ಮೀಟರ್ ಪ್ಲಾಟ್ ಅಥವಾ ಪ್ರಾಪರ್ಟಿಯನ್ನು (Property) ಹೊಂದಿರುವವರಿಗೆ.
• ನಾಲ್ಕು ಚಕ್ರದ ವಾಹನ (Four Wheeler) ಅಥವಾ ಟ್ರ್ಯಾಕ್ಟರ್ (Tractor) ಅನ್ನು ಹೊಂದಿರುವವರಿಗೆ.
• ಶಸ್ತ್ರಾಸ್ತ್ರಗಳ ಪಡೆದುಕೊಳ್ಳುವವರಿಗೆ.
• ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದವರಿಗೆ.
• ಸರ್ಕಾರಿ ಕೆಲಸದಲ್ಲಿ ಇರುವವರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದು ಹಾಗಿಲ್ಲ
ಈ ನಿಯಮದ ಪ್ರಕಾರ ಒಂದು ವೇಳೆ ನೀವು BPL ಕಾರ್ಡ್ ಹೊಂದಿದ್ದರೂ ತಕ್ಷಣ ತಹಶೀಲ್ದಾರರ ಕಚೇರಿಗೆ ಹೋಗಿ ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಸರೆಂಡರ್ ಮಾಡ ಬೇಕಾಗಿರುತ್ತದೆ. ಇಲ್ಲದಿದ್ದರೆ ಅನ್ಯಮಾರ್ಗದ ಮೂಲಕ BPL ಕಾರ್ಡ್ ಪಡೆದರೆ ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿಸುವುದು ಮಾತ್ರವಲ್ಲದೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೂಡ ಸರ್ಕಾರ ಕೈ ತೆಗೆದುಕೊಳ್ಳಲಿದೆ.