ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Google Photos: ನಿಮ್ಮ ಗೂಗಲ್ ಫೋಟೋ ಆ್ಯಪ್ ನಿಷ್ಕ್ರೀಯವಾಗಿದೆಯಾ?? ಹಾಗಿದ್ರೆ ಹುಷಾರ್!! ಡಿಸೆಂಬರ್ ಅಂತ್ಯಕ್ಕೆ ಈ ಕೆಲಸ ಮಾಡದಿದ್ದರೆ ನಿಮ್ಮ ಫೋಟೋಸ್ ಆಗಲಿದೆ ಡಿಲೀಟ್!!

02:25 PM Dec 28, 2023 IST | ಅಶ್ವಿನಿ ಹೆಬ್ಬಾರ್
UpdateAt: 02:25 PM Dec 28, 2023 IST
Advertisement

Google Drive: ಹೊಸ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೊಸ ವರ್ಷದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಈ ನಡುವೆ ನಿಮ್ಮ ಗೂಗಲ್(Google)ಖಾತೆಯಲ್ಲಿರುವ(Google Drive)ಫೋಟೋಗಳು(Photos) ಡಿಲೀಟ್(delete)ಆಗಬಹುದು. ಡಿಸೆಂಬರ್ 31, 2023ರ ಡೆಡ್‌ಲೈನ್(Deadline)ಮುಗಿಯುವ ಮುನ್ನ ಈ ಕೆಲಸ ಮಾಡಿ ಬಿಡಿ!! ಇಲ್ಲದಿದ್ದರೆ ನಿಮ್ಮ ಅಮೂಲ್ಯ ಫೋಟೋಗಳು ಫೋನ್‌ನ ಗೂಗಲ್ ಫೋಟೋಸ್‌ನಿಂದ( Google Photos)ಡಿಲೀಟ್ ಆಗಿಬಿಡಬಹುದು.

Advertisement

 

ಪ್ರತಿಯೊಬ್ಬರ ಫೋನ್‌ನಲ್ಲಿ ಗೂಗಲ್ ಫೋಟೋ ಆ್ಯಪ್, ಗೂಗಲ್ ಕ್ಯಾಲೆಂಡರ್, ಜಿಮೇಲ್, ಡ್ರೈವ್, ಮೀಟ್ ಒಳಗೊಂಡಂತೆ ಹಲವು ಗೂಗಲ್ ಆ್ಯಪ್‌ಗಳಿರುತ್ತವೆ. ಇದರಲ್ಲಿ ಗೂಗಲ್ ಫೋಟೋ ಆ್ಯಪ್ ಮೂಲಕ ಅನೇಕ ಫೋಟೋಗಳನ್ನು ಸ್ಟೋರ್ ಮಾಡಬಹುದು.

Advertisement

ನಿಮ್ಮ ಗೂಗಲ್ ಫೋಟೋ ಆ್ಯಪ್ ಕನಿಷ್ಠ 2 ವರ್ಷದಿಂದ ನಿಷ್ಕ್ರೀಯವಾಗಿದೆಯಾ? ಒಮ್ಮೆ ಚೆಕ್ ಮಾಡಿಕೊಳ್ಳಿ. ಏಕೆಂದರೆ, ಹೊಸ ವರ್ಷದಿಂದ ನಿಮ್ಮ ಖಾತೆ ನಿಷ್ಕ್ರಿಯ ವಾಗಿದ್ದರೆ ಫೋಟೋ ಡಿಲೀಟ್ ಆಗಬಹುದು. ಗೂಗಲ್ ಈಗಾಗಲೇ ನಿಷ್ಕ್ರೀಯ ಖಾತೆಗಳಿಗೆ ನೋಟಿಫಿಕೇಶನ್ ಕಳುಹಿಸುತ್ತಿದ್ದು, ನಿಷ್ಕ್ರೀಯ ಖಾತೆ ಹಾಗೂ ರಿಕವರಿ ಇಮೇಲ್ ಐಡಿಗೆ ನೋಟಿಫಿಕೇಶನ್ ರವಾನಿಸುತ್ತಿದೆ.

 

 

ನಿಮ್ಮ ಫೋನ್ ಇಲ್ಲವೇ ವ್ಯಾಟ್ಸ್ಆ್ಯಪ್ ಮೂಲಕ ಬಂದ ಫೋಟೋಗಳನ್ನು ಗೂಗಲ್ ಫೋಟೋ ಆ್ಯಪ್‌ನಲ್ಲಿ ಲಾಗಿನ್ ಮಾಡಿಕೊಂಡು ಸುರಕ್ಷಿತವಾಗಿ ಸಂಗ್ರಹಿಸಿಡಬಹುದು. ಫೋನ್ ಬದಲಾಯಿಸಿದರೂ ಕೂಡ ಹಳೇ ಫೋಟೋಗಳು ಖಾತೆಯಲ್ಲಿ ಹಾಗೇ ಇರುತ್ತದೆ. ಗೂಗಲ್ ಕ್ಲೌಡ್ ಸ್ಪೇಸ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗೂಗಲ್ ಮಹತ್ವದ ನಿರ್ಧಾರ ಕೈಗೊಂಡಿದೆ. 2 ವರ್ಷದಿಂದ ನಿಷ್ಕ್ರೀಯವಾಗಿರುವ ಗೂಗಲ್ ಫೋಟೋ ಆ್ಯಪ್‌ಗಳನ್ನು ಗೂಗಲ್ ಡಿಲೀಟ್ ಮಾಡಲಿದೆ. ಇದೀಗ ಡಿಸೆಂಬರ್ 31, 2023ಕ್ಕೆ ಗೂಗಲ್ ನೀಡಿರುವ ಡೆಡ್‌ಲೈನ್ ಮುಗಿಯಲಿದೆ.

 

ಗೂಗಲ್ ಫೋಟೋ ಆ್ಯಪ್ ಮಾತ್ರವಲ್ಲದೆ ನಿಷ್ಕ್ರೀಯ ಜಿಮೇಲ್ ಕೂಡ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಿದೆ. ಕನಿಷ್ಠ 2 ವರ್ಷದಿಂದ ಗೂಗಲ್ ಫೋಟೋ ಆ್ಯಪ್ ಇಲ್ಲವೇ ಜಿಮೇಲ್ ನಿಷ್ಕ್ರೀಯವಾಗಿದ್ದರೆ ಅಂತಹ ಖಾತೆಗಳನ್ನು ಗೂಗಲ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಮಾಡಲಿದೆ.ಹೀಗಾಗಿ ಈಗಲೇ ನಿಷ್ಕ್ರೀಯವಾಗಿರುವ ಗೂಗಲ್ ಖಾತೆ, ಆ್ಯಪ್‌ಗಳನ್ನು ಸಕ್ರೀಯ ಮಾಡಿಕೊಳ್ಳಿ. 2 ಸ್ಟೆಪ್ ವೆರಿಫಿಕೇಶನ್ ಮೂಲಕ ಮತ್ತೆ ಸಕ್ರೀಯ ಮಾಡಬಹುದು.

ಇದನ್ನು ಓದಿ: Bigg Boss: ಬಿಗ್ ಬಾಸ್ ಫ್ಯಾನ್ಸ್ಗೆ ಗುಡ್ ನ್ಯೂಸ್, ಫೆಬ್ರವರಿಯಿಂದ ಹೊಸ ಸೀಸನ್ ಮತ್ತೆ ಆರಂಭ!

Advertisement
Advertisement