For the best experience, open
https://m.hosakannada.com
on your mobile browser.
Advertisement

Good Relationship Tips: ಗಂಡ ನಿಮ್ಮ ಮಾತನ್ನು ಕೇಳುತ್ತಿಲ್ಲವೇ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ !

10:50 PM Nov 14, 2023 IST | ಹೊಸ ಕನ್ನಡ
good relationship tips  ಗಂಡ ನಿಮ್ಮ ಮಾತನ್ನು ಕೇಳುತ್ತಿಲ್ಲವೇ  ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಕೆಲವೊಮ್ಮೆ ಹೆಂಗಸರಿಗೆ ಪತಿಯಂದಿರು ನಮ್ಮ ಮಾತು ಕೇಳೋದೆ ಇಲ್ಲ ಎಂದು ಅನಿಸುತ್ತಿರುತ್ತದೆ. ನನ್ನ ಗಂಡ ನನಗೆ ಬೆಲೆಯೇ ಕೊಡಲ್ಲ, ನನ್ನ ಮಾತನ್ನು ಸ್ವಲ್ಪವೂ ಕೇಳಲ್ಲ ಅಂತ ಅನಿಸುತ್ತೆ. ಅದು ವಾಸ್ತವಿಕವಾಗಿ ನಿಜವೇ ಆಗಿರಬಹುದು. ಆದರೆ ಅವರು ನಿಮ್ಮ ಮಾತನ್ನು ಕೇಳುವಂತೆ ನೀವು ಏನನ್ನಾದರೂ ಮಾಡುತ್ತಿದ್ದೀರಾ? ಕೋಪದಿಂದ ಅಲ್ಲ... ನೀವು ಈ ರೀತಿಯ ಟ್ರಿಕ್ಸ್ ಫಾಲೋ ಮಾಡಿದರೆ ಗಂಡ ನಿಮ್ಮ ಮಾತನ್ನು ಖಂಡಿತ ಕೇಳಿಯೇ ಕೇಳುತ್ತಾನೆ.

Advertisement

ಒಂದು ಲೆಕ್ಕದಲ್ಲಿ ಹೆಂಡತಿ ಮತ್ತು ಗಂಡನ ನಡುವಿನ ಸಂಬಂಧ (relationship) ಸಮಾನವಾಗಿರುತ್ತದೆ. ಆದರೆ ನಡಿತಿರೋದೇನು? ಹೆಚ್ಚಿನ ಸಂಬಂಧಗಳಲ್ಲಿ, ಗಂಡ ತನ್ನ ಹೆಂಡತಿಯ ಮೇಲೆ ಪ್ರಾಬಲ್ಯ ಸಾಧಿಸುತ್ತಾ, ಅನೇಕ ಬಾರಿ ಹೆಂಡತಿಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವನ್ನೇ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ.
ಗಂಡಹೆಂಡತಿಯರ ನಡುವಿನ ಮಾತುಕತೆ (ಸಂವಹನೆ) ಚೆನ್ನಾಗಿದ್ದರೆ ಮಾತ್ರ ಮದುವೆ ಎಂಬ ಸಂಬಂಧ ಗಟ್ಟಿಯಾಗಿರುತ್ತದೆ. ಆದರೆ ತಮ್ಮ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳದ ಹೊರತು ಸಂಬಂಧ ಸ್ಟ್ರಾಂಗ್ ಆಗುವುದು ಅಸಾಧ್ಯ. ಯಾವುದೇ ಸಂಬಂಧವಿದ್ದರೂ ಅದರಲ್ಲಿ ಮನಬಿಚ್ಚಿ ಮಾತನಾಡುವುದು ತುಂಬಾ ಅವಶ್ಯಕ.

ಹೆಚ್ಚಿನ ಸಂಬಂಧಗಳಲ್ಲಿ ಏನಾಗುತ್ತದೆ ಅಂದ್ರೆ, ಗಂಡಸರು ಹೆಂಗಸರ ಮೇಲೆ ಪ್ರಾಬಲ್ಯ ಬೀರುತ್ತಾ, ತಾವು ಹೇಳಿದ್ದು ಮಾತ್ರ ಸರಿ ಎಂಬಂತೆ ನಡೆದುಕೊಳ್ಳುತ್ತಾರೆ. ಹೀಗೆ ನಿಮ್ಮ ಪತಿಯು ಕೂಡ ನಿಮ್ಮ ಮಾತನ್ನು ಕೇಳದೆ ಇದ್ದಾಗ, ನಿಮ್ಮ ಮನಸ್ಸಿನಲ್ಲಿ ಏನಿದೆ ಹೃದಯದಲ್ಲಿ ಯಾವ ಭಾವನೆ ಇದೆ ಎಂಬುದನ್ನು ಅರಿಯದೆ, ನಿಮ್ಮ ಬಗ್ಗೆ ಕಾಳಜಿ (care) ವಹಿಸದೇ ಇದ್ದಾಗ ತುಂಬಾ ದುಃಖವಾಗುತ್ತದೆ. ಆವಾಗ ನೀವು ಏನು ಮಾಡಬಹುದು?

Advertisement

ಮನ ಬಿಚ್ಚಿ ಮಾತನಾಡಲು ಒಂದು ಸುಂದರವಾದ ವಾತಾವರಣವನ್ನು ಸೃಷ್ಟಿಸಿ :
ನೀವಿಬ್ಬರು ಶಾಂತವಾದ ವಾತಾವರಣ ಮತ್ತು ಗೊಂದಲವಿಲ್ಲದೆ ಸಂಭಾಷಣೆ (communication) ನಡೆಸಬಹುದಾದಂತಹ ಸಮಯ ಮತ್ತು ಸ್ಥಳವನ್ನು ಆರಿಸಿಕೊಳ್ಳಿ. ಬ್ಯುಸಿ ಆಗಿರುವ ಸಂದರ್ಭದಲ್ಲಿ ನಿಮ್ಮ ಸೂಕ್ಷ್ಮ ಭಾವನೆಗಳನ್ನು ಮತ್ತು ಗಂಭೀರ ವಿಷಯಗಳನ್ನು ಗಂಡನೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ. ಆದಷ್ಟು ಸಂಜೆಯ ಹೊತ್ತು ಮನೆಯಲ್ಲಿ ಅದ್ಭುತ ವಾತಾವರಣವನ್ನು ಕ್ರಿಯೇಟ್ ಮಾಡಿ ಅವರು ನಿಮ್ಮೊಂದಿಗೆ ಮಾತನಾಡುವಂತೆ ಮಾಡಿ.

ಗಮನವಿಟ್ಟು ಆಲಿಸಿ:
ಒಂದು ವೇಳೆ ನಿಮ್ಮ ಗಂಡ ನಿಮ್ಮ ಮಾತನ್ನು ಕೇಳುವಲ್ಲಿ ಆಸಕ್ತಿಯನ್ನು ತೋರದಿರಬಹುದು. ಏಕೆಂದರೆ ನೀವು ಕೂಡ ಅವರ ಮಾತನ್ನು ಗಮನವಿಟ್ಟು ಕೇಳಿಸಿಕೊಂಡಿರುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವಿಬ್ಬರು ಪರಸ್ಪರ ಮಾತನಾಡುವಾಗ ಆಡುವ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿ, ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತಲೆ ಅಲ್ಲಾಡಿಸುವ ಮೂಲಕ ಒಪ್ಪಿಗೆ ಸೂಚನೆ ನೀಡುತ್ತಾ ಸೂಕ್ತವಾದ ಪ್ರತಿಕ್ರಿಯೆ ನೀಡಿ. ಆಗ ನಿಮ್ಮ ಸಂಗಾತಿಯ ವರ್ತನೆಯು ಇದೇ ರೀತಿ ಆಗಿರುತ್ತದೆ.

ಸುತ್ತು ಬಳಸಿ ಮಾತನಾಡಬೇಡಿ:
ನೀವು ಹೇಳಬೇಕಾದ ವಿಷಯವನ್ನು ಸುತ್ತು ಬಳಸಿ ಮಾತನಾಡಿದರೆ ಸಮಸ್ಯೆಗಳೇ ಹೆಚ್ಚಾಗುವುದರಿಂದ, ನೀವು ಏನನ್ನು ತಿಳಿಸ ಬಯಸುತ್ತೀರೋ ಅದರ ಬಗ್ಗೆ ಸ್ಪಷ್ಟವಾಗಿ ನೇರವಾಗಿ ಮಾತನಾಡಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಾಗೂ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ.

ನಿಮ್ಮ ಸಂಗಾತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ ಎಂಬುದು ಅವರಿಗೆ ಮನವರಿಕೆಯಾಗಲಿ:
ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಾಗ ಸಂಬಂಧ ಸುಂದರವಾಗಿರುತ್ತದೆ. ನೀವು ಅವರ ದೃಷ್ಟಿಕೋನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಿ ಎಂದು ಅವರಿಗೆ ಅನಿಸುವಂತೆ ಮಾಡಿ. ನೀವು ಪ್ರತಿಸಲವೂ ನಿಮ್ಮ ಗಂಡನ ಮಾತುಗಳ ಬಗ್ಗೆ ಕಾಳಜಿ ವಹಿಸುವುದನ್ನು ಅವರು ಗಮನಿಸಿದಾಗ, ಅವರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗಿ, ಅವರು ಕೂಡ ನಿಮ್ಮ ಮಾತುಗಳನ್ನು ಖಂಡಿತವಾಗಿಯೂ ಗಂಭೀರವಾಗಿ ಪರಿಗಣಿಸುತ್ತಾರೆ.

Advertisement
Advertisement