ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Petrol-desel price : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ !!

04:58 PM Dec 11, 2023 IST | ಹೊಸ ಕನ್ನಡ
UpdateAt: 05:20 PM Dec 11, 2023 IST

Petrol-desel price : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವಾಗಲೂ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇರುತ್ತದೆ. ಆದರೆ ಕಳೆದೊಂದು ವರ್ಷದಿಂದ ಪೆಟ್ರೋಲ್ ಡೀಸೆಲ್ಗಳ ಬೆಲೆ ತಟಸ್ಥವಾಗಿದೆ. ಒಂದು ವರ್ಷಗಳು ಕಳೆದರೂ ಕೂಡ ಇಂಧನ ಬೆಲೆ ಇಳಿಕೆಯಾಗಲೇ ಇಲ್ಲ. ಆದರೆ ಇದೀಗ ಸಂತೋಷದ ಸುದ್ದಿ ಒಂದು ಹೊರಬಿದ್ದಿದ್ದು ಕೆಲವೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್(Petrol-desel price ) ನ ಬೆಲೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ.

Advertisement

ಹೌದು, ದೇಶದಲ್ಲಿ ಮುಂದಿನ ವರ್ಷ ಲೋಕಸಭಾ ಚುನಾವಣೆ(Parliament election) ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೆಲವೊಂದು ಬೆಲೆ ಏರಿಕೆಗಳ ಬಗ್ಗೆ ಕ್ರಮವನ್ನು ಕೈಗೊಂಡಿದ್ದು ಹಲವು ದಿನನಿತ್ಯದ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಅಂತೆಯೇ ಕೆಲವು ದಿನಗಳ ಹಿಂದಷ್ಟೇ LPG ಗ್ಯಾಸ್ ದರವನ್ನು ಕಡಿಮೆ ಮಾಡಿ ಸಬ್ಸಿಡಿಯನ್ನು ಹೆಚ್ಚಳ ಮಾಡಿತ್ತು. ಇದೀಗ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆಯನ್ನೂ ಕಡಿಮೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Google Pay: ಗೂಗಲ್ ಪೇನಲ್ಲಿ ರೀಚಾರ್ಜ್ ಮಾಡ್ತೀರಾ ?! ಹಾಗಿದ್ರೆ ಇನ್ನು ಫೀಸ್ ಎಂದು ಖಾತೆಯಿಂದ ಕಟ್ ಆಗುತ್ತೆ ಇಷ್ಟು ಮೊತ್ತ?!

Advertisement

ಅಂದಹಾಗೆ 2022ರಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಮತ್ತು ಡೀಸೆಲ್‌ಗೆ 35 ರೂ.ನಷ್ಟು ಗರಿಷ್ಠ ನಷ್ಟಕ್ಕೆ ವ್ಯತಿರಿಕ್ತವಾಗಿ, OMC ಗಳು ಈಗ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ ₹ 8-10 ಮತ್ತು ಡೀಸೆಲ್‌ನಲ್ಲಿ ₹ 3-4 ಲಾಭ ಗಳಿಸುತ್ತಿವೆ. ವರದಿಯ ಪ್ರಕಾರ, ಸಚಿವಾಲಯವು ಈಗಾಗಲೇ OMC ಗಳೊಂದಿಗೆ ಕಚ್ಚಾ ಮತ್ತು ಚಿಲ್ಲರೆ ಬೆಲೆಯ ಸನ್ನಿವೇಶಗಳನ್ನು ಚರ್ಚಿಸಿದೆ. ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಈಗ ಲಾಭ ಗಳಿಸುತ್ತಿವೆ. ಇನ್ನು ಜನರಿಗೂ ಸ್ವಲ್ಪ ಉಪಕಾರವಾಗಲಿ, ಅವರಿಗೂ ಬೆಲೆ ಏರಿಕೆ ಬಿಸಿ ನಿಲ್ಲಲಿ ಎಂಬುದು ಸರ್ಕಾರದ ನಿಲುವು. ಹೀಗಾಗಿ ಸರ್ಕಾರವು ಈ ವಿಷಯದ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿದ್ದು ಮುಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement
Advertisement
Next Article