For the best experience, open
https://m.hosakannada.com
on your mobile browser.
Advertisement

Dharmasthala: ಧರ್ಮಸ್ಥಳ ಭಕ್ತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್?!

Dharmasthala: ಕೇಂದ್ರದ ನೂತನ ಸರ್ಕಾರವು ನಾಳೆ ತನ್ನ ಮೊದಲ ಬಜೆಟ್(Budget) ಮಂಡಿಸಲಿದೆ. ಈ ವೇಳೆ ಕರ್ನಾಟಕದ ಪುಣ್ಯ ಕ್ಷೇತ್ರವಾದ ಧರ್ಮಸ್ಥಳದ ಭಕ್ತರಿಗೆ ಗುಡ್ ನ್ಯೂಸ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
04:25 PM Jul 22, 2024 IST | ಸುದರ್ಶನ್
UpdateAt: 04:25 PM Jul 22, 2024 IST
dharmasthala  ಧರ್ಮಸ್ಥಳ ಭಕ್ತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
Advertisement

Dharmasthala: ಕೇಂದ್ರದ ನೂತನ ಸರ್ಕಾರವು ನಾಳೆ ತನ್ನ ಮೊದಲ ಬಜೆಟ್(Budget) ಮಂಡಿಸಲಿದೆ. ಈ ವೇಳೆ ಕರ್ನಾಟಕದ ಪುಣ್ಯ ಕ್ಷೇತ್ರವಾದ ಧರ್ಮಸ್ಥಳದ ಭಕ್ತರಿಗೆ ಗುಡ್ ನ್ಯೂಸ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಧರ್ಮಸ್ಥಳ(Dharmasthala) ಕ್ಷೇತ್ರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸರ್ಕಾರವು ಬಸ್ಸಿನ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಮಂಜುನಾಥನ ದರ್ಶನಕ್ಕೆ ಎಲ್ಲಾ ಭಾಗದಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಅಲ್ಲದೆ ಇತ್ತೀಚೆಗೆ ಸರ್ಕಾರದ ಶಕ್ತಿಯೋಜನೆಯ ಮೂಲಕ ಇನ್ನೂ ಭಕ್ತಾದಿಗಳು ಹೆಚ್ಚಾಗಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ರೈಲು ಸಂಪರ್ಕವಿಲ್ಲ. ಎಲ್ಲಾ ಸೌಲಭ್ಯ ಇರೋ ಧರ್ಮಸ್ಥಳದಲ್ಲಿ ಇದೊಂದು ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈ ಸಲದ ಬಜೆಟ್ ನಲ್ಲಿ ಧರ್ಮಸ್ಥಳಕ್ಕೆ ರೈಲು ಸೌಭ್ಯನ್ನು ಕೇಂದ್ರ ಘೋಷಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಅಂದಹಾಗೆ ರೈಲ್ವೆ ಬಜೆಟ್ ಮೇಲೆ ಕರ್ನಾಟಕಕ್ಕೆ(Karnataka) ಅಪಾರವಾರ ನಿರೀಕ್ಷೆ ಇದ್ದು, ಅದರಲ್ಲಿ ಧರ್ಮಸ್ಥಳವೂ ಒಂದಾಗಿದೆ. ಕಾರಣ ಸಚಿವೆ ನಿರ್ಮಲಾ ಸೀತಾರಾಮನ್(Nirmala Seetaraman) ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾದವರು. ಅಲ್ಲದೇ ತುಮಕೂರು ಸಂಸದ ವಿ. ಸೋಮಣ್ಣ(V Somanna) ರೈಲ್ವೆ ಖಾತೆಯ ರಾಜ್ಯ ಸಚಿವರು. ಆದ್ದರಿಂದ ರಾಜ್ಯಕ್ಕೆ ಹಲವು ಕೊಡುಗೆ ನಿರೀಕ್ಷೆ ಮಾಡಲಾಗಿದೆ.

Advertisement

ಅಲ್ಲದೆ ಕಳೆದ ವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದರು. ಜಿಲ್ಲೆಗೆ ಸಂಬಂಧಿಸಿದ ರೈಲು ಯೋಜನೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದು, ಜನಪ್ರತಿನಿಧಿಗಳ ಮನವಿ ಸ್ವೀಕಾರ ಮಾಡಿದ್ದರು. ಬಳಿಕ ಬೆಳ್ತಂಗಡಿಯಲ್ಲಿ ಅಭಿನಂದನೆ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ್ದ ವಿ. ಸೋಮಣ್ಣ, "ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ಕೊಲ್ಲೂರು-ಧರ್ಮಸ್ಥಳ-ಕುಕ್ಕೆ ಸುಬ್ರಮಣ್ಯ ರೈಲು ಯೋಜನೆ ಸಮೀಕ್ಷೆ ಕಾರ್ಯ ಆರಂಭಿಸಲಾಗುತ್ತದೆ" ಎಂದು ಹೇಳಿದ್ದರು.

ಶಾಸಕ ಹರೀಶ್ ಪೂಂಜ ಮಾತನಾಡಿ, "ಬೆಳ್ತಂಗಡಿ ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ತಾಲೂಕು. ಕೊಲ್ಲೂರು ಮಾರ್ಗವಾಗಿ ಕಾರ್ಕಳ, ಹೆಬ್ರಿ, ಬೈಂದೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸಂಪರ್ಕ ಮತ್ತು ಹಾಸನ, ಬೇಲೂರು, ಬೈರಾಪುರ, ಶಿಶಿಲ, ಉಪ್ಪಿನಂಗಡಿ, ಬಿ. ಸಿ. ರೋಡ್ ಸಂಪರ್ಕಿಸಲು ಸಮೀಕ್ಷೆ ನಡೆಸಿ, ಯೋಜನೆ ಅನುಷ್ಠಾನಗೊಳಿಸಿದರೆ ಅನುಕೂಲವಾಗಲಿದೆ" ಎಂದರು

ಧರ್ಮಸ್ಥಳಕ್ಕೆ ಏನಾದರೂ ರೈಲು ಮಾರ್ಗ ಘೋಷಣೆಯಾಗಿ, ಅದು ಆದಷ್ಟು ಬೇಗ ಜಾರಿಯಾದರೆ ನಾಡಿನ ಮಾತ್ರವಲ್ಲ ದೇಶದ ಹಲವು ಮಂಜುನಾಥನ ಭಕ್ತಾದಿಗಳಿಗೆ ಅನುಕೂಲವಾಗಲಿದೆ.

Ahmedabad: IAS ಗಂಡನನ್ನು ಬಿಟ್ಟು ರೌಡಿ ಜೊತೆ ಓಡಿದ ಪತ್ನಿ; 9 ತಿಂಗಳ ನಂತರ ವಾಪಸು ಬಂದು ಮಾಡಿದ್ದೇನು ಗೊತ್ತೇ?

Advertisement
Advertisement
Advertisement