ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Senior Citizen: ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಈ ಕಾರ್ಡ್ ಮೂಲಕ ಹಲವು ಸೇವಾ ಸೌಲಭ್ಯ ಪಡೆಯಲಿದ್ದೀರಿ!

Senior Citizen: ಹಿರಿಯ ನಾಗರಿಕರ ಕಾರ್ಡ್ (Senior Citizen Card) ಪೋರ್ಟಲ್ ಅನ್ನು ಪುನರ್ ಆರಂಭ ಮಾಡಲಾಗುತ್ತಿದೆ. ಕಳೆದ ಮಾರ್ಚ್ 16ರಿಂದ ಜೂನ್ 8ರ ವರೆಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಡ್ ಅನ್ನು ಸ್ಥಗಿತ ಮಾಡಲಾಗಿತ್ತು.
12:47 PM Jun 18, 2024 IST | ಕಾವ್ಯ ವಾಣಿ
UpdateAt: 01:20 PM Jun 18, 2024 IST
Advertisement

Senior Citizen: ಕಾನೂನಿನ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯನ್ನು ಹಿರಿಯ ನಾಗರಿಕ ಎಂದು ವರ್ಗೀಕರಿಸಲಾಗಿದೆ. ಮುಖ್ಯವಾಗಿ ಹಿರಿಯ ನಾಗರಿಕರು ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳಲ್ಲಿ ನೀಡುವ ಸೇವೆ, ಮತ್ತು ಸವಲತ್ತುಗಳಿಗೆ ಅರ್ಹರಾಗುತ್ತೀರಿ.  ಇಂತಹ ಸೌಲಭ್ಯವನ್ನು ಹಿರಿಯ ನಾಗರಿಕರು ಪಡೆಯಲು ಹಿರಿಯ ನಾಗರಿಕರು ಎನ್ನುವ ಕಾರ್ಡ್ (Senior Citizen Card ) ಅತ್ಯಗತ್ಯವಾಗಿದೆ. ಹಿರಿಯ ನಾಗರಿಕರಿಗೆ ಈ ಒಂದು ಕಾರ್ಡ್ ಅನ್ನು ಪೋರ್ಟಲ್ ಮೂಲಕ ನೀಡಲಾಗುತ್ತಿತ್ತು ಆದರೆ ಲೋಕಸಭೆ ಚುನಾವಣೆ ಇದ್ದ ಕಾರಣ ಈ ಕಾರ್ಡ್ ನೀಡುವ ಪೋರ್ಟಲ್ ಅನ್ನು ತಾತ್ಕಾಲಿಕ ಸ್ಥಗಿತ ಮಾಡಲಾಗಿದ್ದು ಈಗ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಒಂದಿದೆ.

Advertisement

ಪೋಲೀಸರ ಅತಿಥಿ ಆಗಿರೋ ದರ್ಶನ್ ಎಷ್ಟು ಕೋಟಿ ಒಡೆಯ ?!

ಹೌದು, ಹಿರಿಯ ನಾಗರಿಕರ ಕಾರ್ಡ್ (Senior Citizen Card) ಪೋರ್ಟಲ್ ಅನ್ನು ಪುನರ್ ಆರಂಭ ಮಾಡಲಾಗುತ್ತಿದೆ. ಕಳೆದ ಮಾರ್ಚ್ 16ರಿಂದ ಜೂನ್ 8ರ ವರೆಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಡ್ ಅನ್ನು ಸ್ಥಗಿತ ಮಾಡಲಾಗಿತ್ತು. ಸ್ಥಗಿತ ಮಾಡಿದ್ದ ಸಂದರ್ಭದಲ್ಲಿ ಅನೇಕ ನಾಗರಿಕರಿಗೆ ಸಮಸ್ಯೆ ಆಗಿತ್ತು ಹಾಗಾಗಿ ವಿಕಲಚೇತನ ಮತ್ತು ಹಿರಿಯ ನಾಗರೀಕರಣ ಸಬಲೀಕರಣ ಇಲಖೆಯು ಮತ್ತೆ ಪೋರ್ಟಲ್ ಅನ್ನು ಪುನರ್ ಆರಂಭ ಮಾಡಿದೆ.

Advertisement

ಮುಖ್ಯವಾಗಿ ಹಿರಿಯ ನಾಗರಿಕರಿಗೆ ವಯಸ್ಸಿನ ಆಧಾರದ ಮೇಲೆ ಪಿಂಚಣಿ ನೀಡುತ್ತಿದ್ದು ವಯಸ್ಸು ದೃಢೀಕರಣ ಮಾಡಲು ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ (Senior Citizen) ಬಸ್ ನಲ್ಲಿ ವಿನಾಯಿತಿ ಪಡೆಯಲು ಈ ಕಾರ್ಡ್ ಅಗತ್ಯವಾಗಿದೆ. ಅದೇ ರೀತಿ ಬ್ಯಾಂಕ್ ನಲ್ಲಿ ಕೆಲವು ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರ ಪಡೆಯಲು ಈ ಕಾರ್ಡ್ ಅಗತ್ಯವಾಗಿದೆ. ಜೊತೆಗೆ  ರೈಲ್ಚೇ ಹಾಗೂ ಇತರ ರಿಯಾಯಿತಿ ದರ ಪಡೆಯಲು ಕೂಡ ಕಾರ್ಡ್ ಹೊಂದುವುದು ಅಗತ್ಯ.

ಇನ್ನು ಹಿರಿಯ ನಾಗರಿಕರ ಕಾರ್ಡ್ (Senior Citizen Card) ಆಸ್ಪತ್ರೆಯ ಸೌಲಭ್ಯ ಕೂಡ ಪಡೆಯಲು ಬಹಳ ಅಗತ್ಯವಾಗಿದೆ. ಆಸ್ಪತ್ರೆಯ ಬಿಲ್ ವಿನಾಯಿತಿ ಹಾಗೂ ಇತರ ಸರಕಾರಿ ಸೌಲಭ್ಯ ಪ್ರಯೋಜನೆಗಳನ್ನು ಪಡೆಯಲು ಅತ್ಯವಶ್ಯಕ ಆಗಿದೆ.

ಮನೆಯೊಂದರಲ್ಲಿ ಅಗ್ನಿ ಅನಾಹುತ ; ಫ್ರಿಡ್ಜ್‌ ಸ್ಫೋಟ

Advertisement
Advertisement