Gruha Jyothi: ಗ್ಯಾರಂಟಿ ಯೋಜನೆ ಜಾರಿ ಬೆನ್ನಲ್ಲೇ ಗೃಹಜ್ಯೋತಿ ಫಲಾನುಭವಿಗಳಿಗೆ ಬೊಂಬಾಟ್ ಸುದ್ದಿ!!
11:38 AM Jan 18, 2024 IST
|
ಅಶ್ವಿನಿ ಹೆಬ್ಬಾರ್
UpdateAt: 11:38 AM Jan 18, 2024 IST
Advertisement
Gruha Jyothi Scheme: ಗ್ಯಾರಂಟೀ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ನೆರವಾದ ರಾಜ್ಯ ಸರ್ಕಾರ(State Government)ಇದೀಗ ಗೃಹಜ್ಯೋತಿ (Gruha Jyothi Scheme)ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಹೆಚ್ಚುವರಿ ಶೇ. 10% ಬದಲಾಗಿ, 10 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
Advertisement
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಹೆಚ್ಚುವರಿ 10 ಯೂನಿಟ್ ವಿದ್ಯುತ್ ನೀಡುವ ಕುರಿತು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಗೃಹಜ್ಯೋತಿ ಫಲಾನುಭವಿಗಳು 200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ವಾರ್ಷಿಕ ವಿದ್ಯುತ್ ಬಳಕೆ ಆಧರಿಸಿ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ ನೀಡಲು ಸರ್ಕಾರ ಈ ಹಿಂದೆ ತೀರ್ಮಾನ ಕೈಗೊಂಡಿತ್ತು. ಇದೀಗ 10% ಬದಲಾಗಿ 10 ಯೂನಿಟ್ ಹೆಚ್ಚುವರಿ ವಿದ್ಯುತ್ ನೀಡಲು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
Advertisement
Advertisement