PM KISAN: ಬಜೆಟ್ ಮಂಡನೆಗೂ ಮೊದಲು ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ನ್ಯೂಸ್!
PM Kisan: ಕೇಂದ್ರ ಸರ್ಕಾರವು ರೈತರಿಗಾಗಿ ಈಗಾಗಲೇ ಹಲವು ಅನುಕೂಲಕರವಾದ ಯೋಜನೆ ಜಾರಿಗೆ ತಂದಿದೆ. ಅಂತೆಯೇ ರೈತರಿಗೆ ಆರ್ಥಿಕವಾಗಿ ಭರವಸೆ ನೀಡುವ ಮತ್ತು ಅವರ ಕೃಷಿಗಳಿಗೆ ಸಹಾಯಮಾಡಲು 2019ರ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸದ್ಯ ಈ ಯೋಜನೆ ಮೂಲಕ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಬೆಳೆ ಸಹಾಯಕ್ಕಾಗಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಈ 6 ಸಾವಿರ ರೂಪಾಯಿಯನ್ನು ರೈತರ ಖಾತೆಗೆ ವರ್ಷದಲ್ಲಿ ಮೂರು ಕಂತುಗಳಲ್ಲಿ ಪ್ರತಿ ಕಂತಿನಲ್ಲಿ 2 ಸಾವಿರದಂತೆ ಜಮಾ ಮಾಡುತ್ತದೆ.
ಸದ್ಯ ಪಿಎಂ ಕಿಸಾನ್ ( PM Kisan) ಯೋಜನೆಯ ಅಡಿಯಲ್ಲಿ ಈಗಾಗಲೇ 17 ನೇ ಕಂತು ಬಿಡುಗಡೆ ಮಾಡಲಾಗಿತ್ತು. ಈ ಹಣವನ್ನು 18 ಜೂನ್ 2024 ರಂದು ರೈತರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಈ ಯೋಜನೆಯ 18ನೇ ಕಂತಿನ ಹಣವನ್ನು ಯಾವಾಗ ಜಮೆ ಆಗುತ್ತೆ ಎಂಬ ರೈತರ ನಿರೀಕ್ಷೆಗೆ, ಉತ್ತರ ಸಿಕ್ಕಿದಂತಾಗಿದೆ. ಹೌದು, ಇತ್ತೀಚಿನ ಮಾಹಿತಿ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ 18ನೇ ಕಂತಿನ ಪಿಎಂ ಕಿಸಾನ್ ನಿಧಿಯನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ.
ಶೀಘ್ರದಲ್ಲಿ ಆರಂಭವಾಗಲಿರುವ ಬಜೆಟ್ ಸಭೆಗಳಲ್ಲಿ ಪಿಎಂ ಕಿಸಾನ್ 18ನೇ ಕಂತಿನ ಹಣದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದು, ರೈತರಿಗೆ ನೀಡಲಾಗುವ ಈ ನೆರವನ್ನು ಸಕಾಲದಲ್ಲಿ ಪಾವತಿಸಲು ಎಲ್ಲಾ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತಿದೆಯಂತೆ. ಆದರೆ ನೆನಪಿರಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಹಣವನ್ನು ಪಡೆಯಲು ರೈತರು ಇ-ಕೆವೈಸಿಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಬೇಕು. ಈ ಕೆಲಸ ಪೂರ್ಣಗೊಳಿಸಿದವರಿಗೆ ಮಾತ್ರ ಪಿಎಂ ಕಿಸಾನ್ ಮೊತ್ತ ಜಮಾ ಆಗುತ್ತದೆ.
Bike Tyre: ಬೈಕ್ ನ ಹಿಂಬದಿಯ ಚಕ್ರ, ಮಂದಿನ ಚಕ್ರ ಎರಡೂ ಒಂದೇ ತರಹ ಇಲ್ಲ; ಏಕೆ? ಕಾರಣ ತಿಳಿದರೆ ಅಚ್ಚರಿ ಪಡುತ್ತೀರಿ