ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KSRTC: ಕೆಎಸ್​ಆರ್​ಟಿಸಿ ಯಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಗುಡ್ ನ್ಯೂಸ್!

KSRTC: ಇನ್ಮುಂದೆ ಪ್ರಯಾಣಿಕರು ಹಣ ಪಾವತಿಸಿಯೇ ಟಿಕೆಟ್ ಪಡೆಯಬೇಕು ಎಂದಿಲ್ಲ. ಅದಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್​ಆರ್​ಟಿಸಿ ಜಾರಿಗೆ ತರಲು ನಿರ್ಧರಿಸಿದೆ.
01:18 PM Jul 06, 2024 IST | ಕಾವ್ಯ ವಾಣಿ
UpdateAt: 01:18 PM Jul 06, 2024 IST
Advertisement

KSRTC: ಲಕ್ಷಾಂತರ ಜನ ಪ್ರತಿದಿನ ಕೆಎಸ್​ಆರ್​ಟಿಸಿ ಬಸ್‌ಗಳಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಆದ್ರೆ ಜನರು ಇಂದು ಆನ್‌ಲೈನ್ ಪೇಮೆಂಟ್ ಅನ್ನು ಜನ ಹೆಚ್ಚಾಗಿ ಬಳಕೆ ಮಾಡುವ ಕಾರಣ ಜನರು ಕೈಯಲ್ಲಿ ಚಿಲ್ಲರೆ ದುಡ್ಡು ಇಟ್ಟುಕೊಳ್ಳುವುದಿಲ್ಲ. ಈ ಕಾರಣದಿಂದಲೇ ಈಗಾಗ್ಲೇ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವೆ ಚಿಲ್ಲರೆಗಾಗಿ ಗಲಾಟೆ ನಡೆಯುವ ವಿಚಾರ ನೀವು ಕೇಳಿರಬಹುದು ಅಥವಾ ನೋಡಿರಬಹುದು. ಆದ್ರೆ ಇನ್ಮುಂದೆ ಈ ಸಂಭವ ತಪ್ಪುತ್ತೆ. ಇನ್ಮುಂದೆ ಪ್ರಯಾಣಿಕರು ಹಣ ಪಾವತಿಸಿಯೇ ಟಿಕೆಟ್ ಪಡೆಯಬೇಕು ಎಂದಿಲ್ಲ. ಅದಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್​ಆರ್​ಟಿಸಿ ಜಾರಿಗೆ ತರಲು ನಿರ್ಧರಿಸಿದೆ.

Advertisement

Honeymoon: ಮದುವೆ ಹನಿಮೂನ್ ಗಾಗಿ ಇಲೊಬ್ಬನ ಖತರ್ನಾಕ್ ಪ್ಲಾನ್! ತನ್ನ ಕಂಪನಿಗೆ ಬರೋಬ್ಬರಿ 10.6 ಕೋಟಿ ರೂ ಪಂಗನಾಮ ಹಾಕಿದ ಕಿಲಾಡಿ ಕೊನೆಗೂ ಅರೆಸ್ಟ್ !

Advertisement

ಹೌದು, ಪ್ರಯಾಣಿಕರು ಮತ್ತು ಕಂಡಕ್ಟರ್ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆಎಸ್​ಆರ್​ಟಿಸಿ (KSRTC) ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವ್ಯವಸ್ಥೆ ಜಾರಿಗೆಯಾದರೆ ಕ್ಯಾಶ್ ಬದಲು ಪ್ರಯಾಣಿಕರು ಸಲೀಸಾಗಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಬಹುದು.

ಇದಕ್ಕಾಗಿ ಕೆಎಸ್​ಆರ್​ಟಿಸಿ ಖಾಸಗಿ ಕಂಪನಿಯೊಂದರಿಂದ 10245 ಸಾವಿರ ಇಟಿಎಂ ಟಿಕೆಟ್ ಮಷೀನ್‌ಗಳನ್ನು ಖರೀದಿಸಲು ಮುಂದಾಗಿದೆ. ಒಂದು ಮಷೀನ್‌ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದ ಮೇಲೆ ಖರೀದಿಸಲಾಗುತ್ತದೆ. ಈ ಮಷಿನ್‌ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ ಬಳಸಿ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ. ಇದರಿಂದ ಕಂಡಕ್ಟರ್‌ಗಳಿಗೂ ಅನುಕೂಲವಾಗಲಿದೆ. ತಮ್ಮ ಬಳಿ ಚಿಲ್ಲರೆ ಇಲ್ಲದೇ ಇದ್ದಾಗ ಪ್ರಯಾಣಿಕರೊಂದಿಗೆ ಜಗಳವಾಡುವುದು ತಪ್ಪುತ್ತದೆ.

Love Jihad: ಲವ್‌ಜಿಹಾದ್‌ ಅಭಿಯಾನ; ಶ್ರೀರಾಮಸೇನೆಗೆ ಕೊಲೆ ಬೆದರಿಕೆ, ಫೇಸ್ಬುಕ್‌ ಖಾತೆ ಬಂದ್

Related News

Advertisement
Advertisement