For the best experience, open
https://m.hosakannada.com
on your mobile browser.
Advertisement

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಗ್ರಾಚ್ಯುಟಿ ಹೆಚ್ಚಳ!

7th Pay Commission: ಸದ್ಯ 7ನೇ ವೇತನ ಆಯೋಗದ ಶಿಫಾರಸಿನ (7th Pay Commission) ಅನ್ವಯ ಕೇಂದ್ರ ಸರ್ಕಾರ ಗ್ರಾಚ್ಯುಟಿ ಹೆಚ್ಚಳ ಮಾಡಲಿದೆ.
10:23 AM Jun 05, 2024 IST | ಕಾವ್ಯ ವಾಣಿ
UpdateAt: 10:23 AM Jun 05, 2024 IST
7th pay commission  ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ  ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ  ಗ್ರಾಚ್ಯುಟಿ ಹೆಚ್ಚಳ
Advertisement

7th Pay Commission: ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಇದೀಗ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಗ್ರಾಚ್ಯುಟಿ ಹೆಚ್ಚಳ ಕುರಿತು ಸರ್ಕಾರ ಆದೇಶಿಸಿದೆ. ಹೌದು, ಗ್ರಾಚ್ಯುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನೀಡಲಾಗುವ ಗೌರವಧನ. ಸದ್ಯ 7ನೇ ವೇತನ ಆಯೋಗದ ಶಿಫಾರಸಿನ (7th Pay Commission) ಅನ್ವಯ ಕೇಂದ್ರ ಸರ್ಕಾರ ಗ್ರಾಚ್ಯುಟಿ ಹೆಚ್ಚಳ ಮಾಡಲಿದೆ.

Advertisement

ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ ಲಕ್ಷಾಂತರ ಉದ್ಯೋಗಿಗಳಿಗೆ ಗ್ರಾಚ್ಯುಟಿ ಹೆಚ್ಚಳದ ಅನುಕೂಲವಾಗಲಿದ್ದು, ಕೇಂದ್ರ ಸರ್ಕಾರ ಈಗ ನಿವೃತ್ತಿ, ಮರಣ ನಂತರದ ಗ್ರಾಚ್ಯುಟಿಯನ್ನು ಶೇ 25ರಷ್ಟು ಏರಿಕೆ ಮಾಡಲಿದೆ. ಇದರಿಂದಾಗಿ ಈಗಿರುವ ಗ್ರಾಚ್ಯುಟಿ 20 ರಿಂದ 25 ಲಕ್ಷಕ್ಕೆ ಏರಿಕೆಯಾಗಲಿದೆ.

ನಿವೃತ್ತಿ, ಮರಣ ನಂತರದ ಗ್ರಾಚ್ಯುಟಿಯ ಶೇ 25ರಷ್ಟು ಏರಿಕೆ ಜನವರಿ 1, 2024ರಿಂದಲೇ ಜಾರಿಗೆ ಬರಲಿದೆ. ಮೇ 30, 2024ರ ಕಛೇರಿ ಆದೇಶದಲ್ಲಿ 7ನೇ ವೇತನ ಆಯೋಗದ ಶಿಫಾರಸು ಅನ್ವಯ ಗ್ರಾಚ್ಯುಟಿಯನ್ನು ಶೇ 25ರಷ್ಟು ಏರಿಕೆ ಮಾಡಲಾಗಿದೆ. ಸದ್ಯ ಏಪ್ರಿಲ್ 30ರಂದು ಈ ಕುರಿತು ತೀರ್ಮಾನಿಸಿ ಇದೀಗ ಮೇ ತಿಂಗಳಿನಲ್ಲಿ ಆದೇಶ ಹೊರಡಿಸಲಾಗಿದೆ.

Advertisement

Advertisement
Advertisement
Advertisement